More

    ಹೋಟೆಲ್​ನಲ್ಲಿ ಮಲಗಿದ್ದ ಮಹಿಳೆಗೆ ಒಂದೇ ರಾತ್ರಿ 200 ತಿಗಣೆ ಕಡಿತ!; ರೂಮ್ ಬಾಡಿಗೆ 17 ಸಾವಿರ ರೂಪಾಯಿ!

    ನವದೆಹಲಿ: ಐಷಾರಾಮಿ ಹೋಟೆಲ್​ ಎಂದರೆ ಎಲ್ಲ ಆತಿಥ್ಯವೂ ಚೆನ್ನಾಗಿಯೇ ಇರುತ್ತದೆ. ಮಾತ್ರವಲ್ಲ, ಊಟ-ವಸತಿ ವ್ಯವಸ್ಥೆ ಕೂಡ ಗುಣಮಟ್ಟದ್ದಾಗಿರುತ್ತದೆ. ಆದರೆ ಇಲ್ಲೊಂದು ಕಡೆ ದುಬಾರಿ ಬಾಡಿಗೆ ನೀಡಿ ವಾಸ್ತವ್ಯ ಹೂಡಿದ್ದ ಮಹಿಳೆಗೆ ಒಂದೇ ರಾತ್ರಿ 200 ತಿಗಣೆ ಕಡಿತಕ್ಕೆ ಒಳಗಾಗುವಂತಾಗಿದೆ.

    ಶರೊನ್ ಹಸ್ಲಾಂ ಎಂಬ ಮಹಿಳೆ ಯುಕೆಯ ಬ್ಲ್ಯಾಕ್​ಪೂಲ್​ನ ಕೆಲಿಪ್ಸೊ ಹೋಟೆಲ್​ನಲ್ಲಿ ಫ್ರೆಂಡ್ ಬರ್ತ್​ಡೇ ಸಲುವಾಗಿ ರೂಮ್ ಬಾಡಿಗೆ ಪಡೆದಿದ್ದಳು. ಎರಡು ರಾತ್ರಿಯ ವಾಸ್ತವ್ಯಕ್ಕೆ 17,000 ರೂ. ನೀಡಿ ಬುಕ್​ ಮಾಡಿದ್ದ ಹೋಟೆಲ್​ ರೂಮ್​ನಲ್ಲಿ ತಂಗಿದ್ದ ಈಕೆ ಒಂದೇ ರಾತ್ರಿಯಲ್ಲಿ ಬರೋಬ್ಬರಿ 200 ತಿಗಣೆ ಕಡಿತ ಅನುಭವಿಸುವಂತಾಗಿದೆ.

    ಇದನ್ನೂ ಓದಿ: ಮುಂದಿನ ಒಲಿಂಪಿಕ್ ನಡೆಯಲಿರುವ ಪ್ಯಾರಿಸ್​ನಲ್ಲಿ ತಿಗಣೆಗಳ ಕಾಟ!

    ಈಕೆ ತನ್ನ ಫ್ರೆಂಡ್ ಮರಿಯನ್ ಪಿಯರ್ಸನ್​ ಬರ್ತ್​ಡೇಗೆ ಆಚರಣೆ ಸಲುವಾಗಿ ಸೆಪ್ಟೆಂಬರ್​ನಲ್ಲಿ ಈ ರೂಮ್ ಬುಕ್ ಮಾಡಿದ್ದಳು. ಆದರೆ ಇಲ್ಲಿ ಮಲಗಿದ್ದ ಈಕೆ ತಿಗಣೆ ಕಡಿತದಿಂದಾಗಿ ಮೈತುಂಬಾ ಕಡಿತ-ದದ್ದುಗಳನ್ನು ಅನುಭವಿಸಬೇಕಾಯಿತು ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

    ಹೋಟೆಲ್​ನಲ್ಲಿ ಮಲಗಿದ್ದ ಮಹಿಳೆಗೆ ಒಂದೇ ರಾತ್ರಿ 200 ತಿಗಣೆ ಕಡಿತ!; ರೂಮ್ ಬಾಡಿಗೆ 17 ಸಾವಿರ ರೂಪಾಯಿ!

    ಕೊಠಡಿಗೆ ಪ್ರವೇಶ ಮಾಡಿದ್ದಾಗ ಎಲ್ಲವೂ ಸರಿಯಾಗಿ ಚೆನ್ನಾಗಿಯೇ ಇತ್ತು. ಆದರೆ ಮರುದಿನ ಬೆಳಗ್ಗೆ ಎದ್ದಾಗ ಬೆಡ್​ಶೀಟ್​​ನ ಮೇಲೆ ರಕ್ತದ ಕಲೆಗಳಾಗಿದ್ದವು. ಏನಾಯ್ತು ಎಂದು ತಿಳಿದುಕೊಳ್ಳಲು ಹತ್ತು ನಿಮಿಷ ಬೇಕಾಯಿತು. ನಂತರ ರೂಮ್ ಬುಕ್ ಮಾಡಿದ್ದ ವೆಬ್​ಸೈಟ್​ನವರಿಗೆ ತಿಳಿಸಿದಾಗ ಅವರು ಪೂರ್ತಿ ಹಣ ಹಿಂಪಾವತಿ ಮಾಡಿದರು. ಬಳಿಕ ಪರಿಹಾರ ರೂಪದಲ್ಲೂ ಹಣ ನೀಡಿದರು ಎಂದಿರುವ ಈಕೆ, ಅದೊಂದು ಭಯಂಕರ ಅನುಭವ ಎಂದು ಅಲ್ಲಿನ ವಾಸ್ತವ್ಯದ ಕುರಿತು ಅನುಭವ ಹೇಳಿಕೊಂಡಿದ್ದಾಳೆ.

    ಭಿಕ್ಷೆ ಬೇಡುತ್ತಿದ್ದ ವಿದೇಶಿ ಮಹಿಳೆಯ ಬದುಕು ಬದಲಿಸಿದ ಭಾರತೀಯ; ಯಾರೀಕೆ, ಈಗೇನು ಮಾಡುತ್ತಿದ್ದಾರೆ?

    ಮಂಚದಡಿಯಲ್ಲಿ ಕೋಟಿಗಟ್ಟಲೆ ಹಣ!; ತಿರುಗುಬಾಣ ಆಗಲಿದೆಯೇ 40% ಕಮಿಷನ್ ಪ್ರಕರಣ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts