More

    ಮುಂದಿನ ಒಲಿಂಪಿಕ್ ನಡೆಯಲಿರುವ ಪ್ಯಾರಿಸ್​ನಲ್ಲಿ ತಿಗಣೆಗಳ ಕಾಟ!

    ಫ್ರಾನ್ಸ್: ಮುಂದಿನ ಒಲಿಂಪಿಕ್​ಗೆ ಆತಿಥೇಯ ಆಗಿರುವ ಪ್ಯಾರಿಸ್​ನಲ್ಲಿ ತಿಗಣೆಗಳ ಕಾಟ ಉಂಟಾಗಿರುವುದು ಈಗ ಅಲ್ಲಿನವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 2024ರಲ್ಲಿ ಒಲಿಂಪಿಕ್ ನಡೆಯಲಿರುವುದರ ಹಿನ್ನೆಲೆಯಲ್ಲೂ ಇದು ಮತ್ತಷ್ಟು ಆತಂಕವನ್ನು ಉಂಟು ಮಾಡಿದೆ.

    ಫ್ರಾನ್ಸ್​ನ ಪ್ಯಾರಿಸ್ ಮತ್ತು ಇತರ ನಗರಗಳಲ್ಲಿ ತಿಗಣೆಗಳ ಕಾಟ ಉಂಟಾಗಿರುವುದು ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದೆ. ಕಳೆದ ಕೆಲವು ವಾರಗಳಿಂದ ಅಲ್ಲಿ ತಿಗಣೆಗಳ ಹಾವಳಿ ಹೆಚ್ಚಾಗಿದ್ದು, ಅಲ್ಲಿನ ಸಾರ್ವಜನಿಕ ಸಾರಿಗೆ, ಹೋಟೆಲ್, ಥಿಯೇಟರ್​ ಮಾತ್ರವಲ್ಲದೆ ಮನೆಗಳಲ್ಲೂ ಕಾಡಲಾರಂಭಿಸಿದೆ.

    ಇದನ್ನೂ ಓದಿ: ಈ ಮಾತ್ರೆಗಳನ್ನು ನೀವು ತಿನ್ನೋದು ಸಹಜ; ಆದರೆ ಇದರ ಅಡ್ಡಪರಿಣಾಮಗಳು ಒಂದೆರಡಲ್ಲ!

    ಎಲ್ಲೆಂದರಲ್ಲಿ ತಿಗಣೆ ಕಡಿತ ಕೂಡ ಉಂಟಾಗಿದ್ದು, ಇದು ಅಲ್ಲಿನ ಜನರನ್ನು ತೀವ್ರ ಸಂಕಷ್ಟಕ್ಕೆ ಈಡು ಮಾಡಿದೆ. ತಿಗಣೆ ಕಡಿತ ಯಾವುದೇ ರೋಗವನ್ನು ಹರಡದಿದ್ದರೂ ಅದು ಮಾನಸಿಕವಾಗಿ ಭಾರಿ ಕಿರಿಕಿರಿಯನ್ನು ಉಂಟು ಮಾಡುವುದರಿಂದ ತಿಗಣೆನಾಶಕಗಳನ್ನು ಬಳಸಿ ಅವುಗಳನ್ನು ಇಲ್ಲವಾಗಿಸುವ ಪ್ರಯತ್ನವೂ ನಡೆಯುತ್ತಿದೆ.

    ಪ್ರತಿ ಬೇಸಿಗೆಯ ಕೊನೆಯಲ್ಲಿ ನಮ್ಮಲ್ಲಿ ತಿಗಣೆಗಳ ಸಂಖ್ಯೆ ಹೆಚ್ಚಾಗುವುದು ಸಾಮಾನ್ಯ. ಏಕೆಂದರೆ ಜುಲೈ-ಆಗಸ್ಟ್​ನಲ್ಲಿ ಓಡಾಡುವ ಜನರು ತಮ್ಮ ಲಗೇಜುಗಳೊಂದಿಗೆ ತಿಗಣೆಗಳನ್ನು ಕೂಡ ತರುತ್ತಾರೆ. ಆದರೆ ಪ್ರತಿ ವರ್ಷವೂ ತಿಗಣೆಗಳ ಕಾಟ ಹಿಂದಿನ ವರ್ಷಕ್ಕಿಂತ ಹೆಚ್ಚಾಗಿರುತ್ತದೆ ಎಂದು ಫ್ರಾನ್ಸ್​ನ ಎಂಟೊಮೊಲಜಿಸ್ಟ್ ಜೀನ್ ಮಿಷೆಲ್ ಬೆರೆಂಜರ್ ಹೇಳಿದ್ದಾರೆ.

    ಇಬ್ಬರು ಮಕ್ಕಳನ್ನು ನೋಡಿಕೊಳ್ಳೋ ಆಯಾಗೆ 80 ಲಕ್ಷ ರೂ. ಸಂಬಳ ಕೊಡ್ತಾರಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts