More

    ಸಿನಿಮಾದ ಹಲವರಿಗೆ ಸಾಹಿತ್ಯದ ಅರಿವಿಲ್ಲ; ನೀವಂದ್ಕೊಂಡಷ್ಟು ಮೂರ್ಖರಲ್ಲ ಸಿನಿಮಾದವರು: ಸಾಹಿತಿ-ನಿರ್ದೇಶಕರ ಮಧ್ಯೆ ಜಾತಿಸಂಘರ್ಷ

    ಬೆಂಗಳೂರು: ಸಾಹಿತ್ಯ ಮೇಲೋ ಸಿನಿಮಾ ಮೇಲೋ ಎಂಬ ಜಿಜ್ಞಾಸೆ ಆಗಾಗ ಮುನ್ನೆಲೆಗೆ ಬರುತ್ತಿರುತ್ತದೆ. ಕವಿತೆ ಬರೆಯುವವರು ಶ್ರೇಷ್ಠವೋ ಚಿತ್ರಗೀತೆ ಬರೆಯುವವರು ಶ್ರೇಷ್ಠವೋ ಎಂಬ ದ್ವಂದ್ವ ಕೂಡ ಏನಾದರೊಂದು ಕಾರಣಕ್ಕೆ ಆಗಾಗ ಇಣುಕು ಹಾಕುತ್ತಿರುತ್ತದೆ. ಇದೀಗ ಅಂಥದ್ದೇ ಒಂದು ಸಂಘರ್ಷಕ್ಕೆ ಮತ್ತೊಮ್ಮೆ ನಾಂದಿ ಹಾಡುವಂಥ ಸನ್ನಿವೇಶವೊಂದು ಸೃಷ್ಟಿಯಾಗಿದೆ.

    ಒಬ್ಬರು ಸಾಹಿತಿ ಹಾಗೂ ಇನ್ನೊಬ್ಬರು ನಿರ್ದೇಶಕರ ನಡುವಿನ ಸೋಷಿಯಲ್ ಮೀಡಿಯಾ ಭಿನ್ನಾಭಿಪ್ರಾಯವೊಂದು ಜಾತಿಯ ಕಾರಣಕ್ಕಾಗಿ ಮುನ್ನೆಲೆಗೆ ಬಂದಿದೆ. ಬಿಹಾರದಲ್ಲಿ ನಿನ್ನೆಯಷ್ಟೇ ಬಿಡುಗಡೆಯಾಗಿರುವ ಜಾತಿಗಣತಿ ವರದಿಯ ಹಿನ್ನೆಲೆಯಲ್ಲಿ ವ್ಯಕ್ತಪಡಿಸಲಾದ ಅಭಿಪ್ರಾಯ ಇಂಥದ್ದೊಂದು ಚರ್ಚೆಗೆ ಆಸ್ಪದ ನೀಡಿದೆ.

    ಬಿಹಾರದಲ್ಲಿ ಜಾತಿಗಣತಿ ವರದಿ ಬಿಡುಗಡೆ ಮಾಡಿದ್ದಕ್ಕೆ ಪ್ರತಿಕ್ರಿಯೆ ಎಂಬಂತೆ ಚಿತ್ರನಿರ್ದೇಶಕ ಲಿಂಗದೇವರು ಶಿವನಂಜಪ್ಪ ಅವರು ‘ಜಾತ್ಯಾತೀತ ರಾಷ್ಟ್ರದಲ್ಲಿ ಜಾತಿ ಗಣತಿ’ ಎಂದು ತಮ್ಮ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಾಹಿತಿ ಎಲ್​.ಎನ್​.ಮುಕುಂದರಾಜು ಅವರು ಆ ಪೋಸ್ಟ್ ಶೇರ್ ಮಾಡಿಕೊಂಡು ತಮ್ಮ ಪ್ರೊಫೈಲ್​ನಲ್ಲಿ ಅದಕ್ಕೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ‘ಕನ್ನಡದ ಪ್ರತಿಭಾವಂತ ಚಲನಚಿತ್ರ ನಿರ್ದೇಶಕರು ಹೇಗೆ ಯೋಚಿಸುತ್ತಾರೆ ಮತ್ತು ಬರೆಯುತ್ತಾರೆ ಎಂಬುದನ್ನು ಗಮನಿಸಿ ಗೆಳೆಯರೇ.. ನಮ್ಮ ಹಲವಾರು ಸಿನಿಮಾ ಮಂದಿಗೆ ಕನ್ನಡ ನಾಡಿನ ಸಾಹಿತ್ಯ, ಸಂಸ್ಕೃತಿ, ಚರಿತ್ರೆ, ಪರಂಪರೆ ಇತ್ಯಾದಿಗಳ ಬಗ್ಗೆ ಸರಿಯಾದ ಅರಿವಿಲ್ಲ. ಸಾಧ್ಯವಾದರೆ ಅವರಿಗೆ ಒಂದು ಶಿಬಿರ ಏರ್ಪಡಿಸಿ ಇಂಥ ವಿಷಯಗಳನ್ನು ಮನವರಿಕೆ ಮಾಡಿಕೊಡಬೇಕು..’ ಎಂದು ಮುಕುಂದರಾಜ್ ಪ್ರತಿಕ್ರಿಯೆ ನೀಡಿದ್ದಾರೆ.

    ಇದಕ್ಕೆ ಪ್ರತ್ಯುತ್ತರ ನೀಡಿರುವ ಲಿಂಗದೇವರು, ‘ನಿಮ್ಮಂತಹವರ ದೃಷ್ಟಿಯಲ್ಲಿ ಕಂಡಿದ್ದೇ ಸರಿ ಎನ್ನುವಷ್ಟು ಮೂರ್ಖರಲ್ಲ ಸಿನಿಮಾ ಗೆಳೆಯರು’ ಎಂದು ಮುಕುಂದರಾಜ್​ಗೆ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ‘ನೀವು ಹೇಳಿದ ಸಾಹಿತ್ಯವಷ್ಟೇ ಸಾಹಿತ್ಯ ಅಲ್ಲ, ನೀವು ನಂಬಿರುವ ಸಂಸ್ಕೃತಿ ಪರಂಪರೆಯಷ್ಟೇ ಅಂತಿಮ ಅಲ್ಲ, ನಮ್ಮದು ಬಹುತ್ವ ಪರಂಪರೆ, ಎಲ್ಲರನ್ನೂ ಒಳಗೊಳ್ಳುವ ಸಂಸ್ಕೃತಿಯ ಅರಿವು ತಮಗೆ ಇಲ್ಲ ಅನ್ನಿಸುತ್ತದೆ. ಹಾಗಾಗಿ ತಮ್ಮಂತಹವರಿಗೆ ನಾನೇ ನನ್ನ ಖರ್ಚಿನಲ್ಲಿ ಅರಿವಿನ ಶಿಬಿರ ಮತ್ತು ದಾಸೋಹ ಮಾಡುತ್ತೇನೆ. ದಯಮಾಡಿ ಬನ್ನಿ ಸಾರ್..’ ಎಂದು ಮುಕುಂದರಾಜ್​ಗೆ ಲಿಂಗದೇವರು ಆಹ್ವಾನ ನೀಡಿದ್ದಾರೆ.

    ಹೋಮ್​ವರ್ಕ್ ಮಾಡಿಲ್ಲ ಎಂದು ಟೀಚರ್ ಹೊಡೆದ ಏಟಿಗೆ ವಿದ್ಯಾರ್ಥಿಯ ಜೀವವೇ ಹೋಯ್ತು!; ಹೊಡೆದಿದ್ದಾದರೂ ಹೇಗೆ?

    ಸೂಪರ್​ ಮಾರ್ಕೆಟ್​ನಲ್ಲಿ ಫ್ರಿಡ್ಜ್ ಡೋರ್ ತೆರೆಯುತ್ತಿದ್ದಂತೆ ಶಾಕ್​; ನಾಲ್ಕು ವರ್ಷದ ಬಾಲಕಿ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts