More

    ಸುಶಮೀಂದ್ರ ತೀರ್ಥರ ಸೇವೆ ಅನನ್ಯ

    ಕನಕಗಿರಿ: ಮಂತ್ರಾಲಯದ ಗುರು ರಾಯರ ಮಠಕ್ಕೆ ಬರುವ ಭಕ್ತರನ್ನು ಸುಶಮೀಂದ್ರ ತೀರ್ಥರು ಪ್ರೀತಿಯಿಂದ ಕಾಣುತ್ತಿದ್ದರು ಎಂದು ಸಾಹಿತಿ ಪವನಕುಮಾರ ಗುಂಡೂರು ಹೇಳಿದರು.

    ತಾಲೂಕಿನ ನವಲಿ ಶ್ರೀ ಭೋಗಾಪುರೇಶ (ಪ್ರಾಣ ದೇವರು) ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸುಶಮೀಂದ್ರ ತೀರ್ಥರ ಆರಾಧನಾ ಮಹೋತ್ಸವದಲ್ಲಿ ಶುಕ್ರವಾರ ಮಾತನಾಡಿದರು.

    ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಸುಶಮೀಂದ್ರ ತೀರ್ಥರ ಸೇವೆ ಅನನ್ಯವಾಗಿದೆ. ಧಾರ್ಮಿಕ, ಶಾಸ್ತ್ರ ಸೇರಿ ನಾನಾ ಸತ್ಕಾರ್ಯಗಳ ಮೂಲಕ ಸಮಾಜವನ್ನು ಒಗ್ಗೂಡಿಸಿ ಐಕ್ಯತೆ ಮೂಡಿಸುತ್ತಿದ್ದರು. ಇವರು ಪೀಠಾಧಿಪತಿಗಳಾಗಿದ್ದಾಗ ರಾಯರ ವೃಂದಾವನಗಳು ಹೆಚ್ಚು ನಿರ್ಮಾಣವಾಗಿರುವುದು ವಿಶೇಷ ಎಂದರು.

    ಶ್ರೀ ರಾಘವೇಂದ್ರ ಭಜನಾ ಮಂಡಳಿಯವರು ಭಾವಚಿತ್ರ ಹಿಡಿದು ದಾಸರ ಕಿರ್ತನೆಗಳನ್ನು ಹಾಡುತ್ತ ದೇವಸ್ಥಾನ ಸುತ್ತ ಪ್ರದಕ್ಷಣೆ ಹಾಕಿ ಯತಿವರ್ಯರನ್ನು ಸ್ಮರಿಸಿದರು. ಬ್ರಾಹ್ಮಣ ಸಮುದಾಯದ ಮಹಿಳೆಯರಿಂದ ಭಜನೆ ನಡೆಯಿತು.

    ಶ್ರೀನಿವಾಸಾಚಾರ್, ವಿದ್ವಾನ್ ಶ್ರೀನಾಥ ಆಚಾರ್, ವಾದಿರಾಜಚಾರ್ ಸಿಂಗನಾಳ, ನಾರಾಯಣರಾವ್ ಕುಲಕರ್ಣಿ, ಪುರುಷೋತ್ತಮಾಚಾರ್, ಮಧುಸೂದನ, ರಘೋತ್ತಮ, ಸುಮತೀಂದ್ರ, ಬಂಡೇರಾವ್ ಕುಲಕರ್ಣಿ, ಭಜನಾ ಕಲಾವಿದರಾದ ಸುರೇಶರೆಡ್ಡಿ, ಶಿವಪ್ಪ ಅಂಕಸದೊಡ್ಡಿ, ಭೀಮರೆಡ್ಡಿ ಓಣಿಮನಿ, ಶ್ರೀನಿವಾಸರೆಡ್ಡಿ ಓಣಿಮನಿ, ಭೀಮರಾವ್ ಮರಾಠಿ, ವಿಜಯಕುಮಾರ ಹೊಸಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts