More

    ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದ ಪ್ರಾಪರ್ಟಿ ಕಂಪನಿಯ ಷೇರು ಬೆಲೆ: ಒಂದೇ ದಿನದಲ್ಲಿ ಸ್ಟಾಕ್​ ದರ 11% ಏರಿದ್ದೇಕೆ?

    ಮುಂಬೈ: ರಿಯಲ್ ಎಸ್ಟೇಟ್ ದೈತ್ಯ ಗೋದ್ರೇಜ್ ಪ್ರಾಪರ್ಟೀಸ್ ಲಿಮಿಟೆಡ್‌ನ (Godrej Properties Ltd) ಷೇರುಗಳ ಬೆಲೆ ಸೋಮವಾರ 11 ಪ್ರತಿಶತದಷ್ಟು ಏರಿಕೆ ಕಂಡಿತು, ಈ ಮೂಲಕ ಈ ಷೇರುಗಳ ಬೆಲೆ 52 ವಾರಗಳಲ್ಲಿ ಗರಿಷ್ಠ ಮಟ್ಟವನ್ನು ತಲುಪಿದೆ.

    ಬಲವಾದ ತ್ರೈಮಾಸಿಕ ಫಲಿತಾಂಶಗಳ ಹಿನ್ನೆಲೆಯಲ್ಲಿ ಕಂಪನಿಯ ಷೇರುಗಳ ಬೆಲೆಯಲ್ಲಿ ಉಲ್ಬಣ ಕಂಡುಬಂದಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭವು 14 ಪ್ರತಿಶತದಷ್ಟು ಹೆಚ್ಚಾಗಿದೆ.

    ದೇಶದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಗೋದ್ರೇಜ್ ಪ್ರಾಪರ್ಟೀಸ್ ಷೇರುಗಳು ಸೋಮವಾರ 2648 ರೂ. ಮುಟ್ಟಿದವು. ಮಧ್ಯಾಹ್ನ ವೇಳೆಗೆ ಕಂಪನಿಯ ಷೇರು ಬೆಲೆ ಶೇ. 11 ರಷ್ಟು ಏರಿಕೆ ಕಂಡು ಇಂಟ್ರಾ-ಡೇ ಗರಿಷ್ಠ ರೂ. ಮಟ್ಟವಾದ 2847 ಕ್ಕೆ ತಲುಪಿತು. ಇದು ಕಂಪನಿಯ ಷೇರುಗಳ ಸಾರ್ವಕಾಲಿಕ ಗರಿಷ್ಠ ಬೆಲೆಯಾಗಿದೆ. ಈ ಷೇರಿನ 52 ವಾರಗಳ ಕನಿಷ್ಠ ಬೆಲೆ ರೂ 1286.55 ಆಗಿದೆ. ಸಾರ್ವಕಾಲಿಕ ಕನಿಷ್ಠ ಬೆಲೆ 154 ರೂ. ಆಗಿದೆ.

    ಕಂಪನಿಯು ಬಿಡುಗಡೆ ಮಾಡಿದ ಫಲಿತಾಂಶಗಳ ಪ್ರಕಾರ, 2023-24ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್) ಕ್ರೋಢೀಕೃತ ನಿವ್ವಳ ಲಾಭವು ಶೇಕಡಾ 14ರಷ್ಟು ಏರಿಕೆಯಾಗಿ 471.26 ಕೋಟಿ ರೂಪಾಯಿಗಳಿಗೆ ತಲುಪಿದೆ.

    ಹಣಕಾಸು ವರ್ಷ 2022-23 ರ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭವು 412.14 ಕೋಟಿ ರೂ. ಮುಟ್ಟಿತ್ತು. ಹಣಕಾಸು ವರ್ಷ 2022-23 ರ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ಆದಾಯವು 1,838.82 ಕೋಟಿ ರೂಪಾಯಿಗಳಿಂದ 1,914.82 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಗೋದ್ರೇಜ್ ಪ್ರಾಪರ್ಟೀಸ್ ಕಂಪನಿಯು ಷೇರು ಮಾರುಕಟ್ಟೆಗೆ ತಿಳಿಸಿದೆ.

    2023-24ರ ಹಣಕಾಸು ವರ್ಷದಲ್ಲಿ ಕಂಪನಿಯ ನಿವ್ವಳ ಲಾಭವು 725.27 ಕೋಟಿಗೆ ಏರಿಕೆಯಾಗಿದೆ. 2022-23ನೇ ಹಣಕಾಸು ವರ್ಷದಲ್ಲಿ ಇದು 571.39 ಕೋಟಿ ರೂ. ಇತ್ತು.

    ಕಳೆದ ಒಂದು ವರ್ಷದಲ್ಲಿ ಗೋದ್ರೇಜ್ ಪ್ರಾಪರ್ಟೀಸ್ ಷೇರುಗಳ ಬೆಲೆ ಶೇಕಡಾ 100 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಈ ಅವಧಿಯಲ್ಲಿ ಕಂಪನಿಯ ಷೇರುಗಳ ಬೆಲೆ ದ್ವಿಗುಣಗೊಂಡು ಹೂಡಿಕೆದಾರರ ಭಾರೀ ಲಾಭವಾಗಿದೆ. ಕಳೆದ 6 ತಿಂಗಳಲ್ಲಿ ಕಂಪನಿಯ ಷೇರುಗಳ ಬೆಲೆ 57.60 ಪ್ರತಿಶತದಷ್ಟು ಹೆಚ್ಚಾಗಿದೆ.

     

    ಒಂದು ಷೇರಿಗೆ ಮತ್ತೆ 3 ಷೇರುಗಳು ಉಚಿತ: ಹೂಡಿಕೆದಾರರಿಗೆ ಮೇ 18 ಮಹತ್ವದ ದಿನವೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts