More

    4 ರೂಪಾಯಿಯ ಷೇರಿನಲ್ಲಿ 1 ಲಕ್ಷ ಹೂಡಿಕೆಯು 1.68 ಕೋಟಿಯಾಯ್ತು: ಮೇ 21 ಆಗಿದೆ ಮಹತ್ವದ ದಿನ

    ಮುಂಬೈ: ಶನಿವಾರದ ವಿಶೇಷ ವಹಿವಾಟಿನ ದಿನದಂದು ಕೆಲವು ದೊಡ್ಡ ಷೇರುಗಳಿಗೆ ಭಾರಿ ಬೇಡಿಕೆ ಇತ್ತು. ಇಂತಹ ಒಂದು ಷೇರು ಸಿ ಜಿ ಪವರ್ ಆ್ಯಂಡ್​ ಇಂಡಸ್ಟ್ರಿಯಲ್ ಸೊಲ್ಯೂಷನ್ಸ್ ಲಿಮಿಟೆಡ್‌ (CG Power and Industrial Solutions Ltd). ಇದೀಗ ಸುದ್ದಿ ಏನೆಂದರೆ ಮೇ 21ರ ಮಂಗಳವಾರದಂದು ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಷೇರುದಾರರು ಬ್ಲಾಕ್ ಡೀಲ್ ಮೂಲಕ ಕಂಪನಿಯಲ್ಲಿನ ತಮ್ಮ ಷೇರುಗಳನ್ನು ಮಾರಾಟ ಮಾಡಲಿದ್ದಾರೆ.

    ಮಾಧ್ಯಮ ವರದಿಗಳ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ರೂ. 425 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಬಹುದು. ಇದರ ಅಡಿಯಲ್ಲಿ 65 ಲಕ್ಷ ಷೇರುಗಳನ್ನು ಮಾರಾಟ ಮಾಡುವ ಸಾಧ್ಯತೆ ಇದೆ.

    ಪ್ರಸ್ತುತ ಮಾರುಕಟ್ಟೆಯಲ್ಲಿ ಈ ಷೇರುಗಳಿಗೆ ಇರುವ ಬೆಲೆಗಿಂತ ಶೇಕಡಾ 2-3ರಷ್ಟು ರಿಯಾಯಿತಿಯಲ್ಲಿ ಈ ಬ್ಲಾಕ್ ಡೀಲ್ ಆಗುವ ಸಾಧ್ಯತೆಯಿದೆ ಎಂದು ಮಾಧ್ಯಮ ಮೂಲಗಳು ತಿಳಿಸಿವೆ. ಕೋಟಾಕ್ ಸೆಕ್ಯುರಿಟೀಸ್ ಈ ಡೀಲ್ ಬ್ರೋಕರ್ ಆಗಿರಬಹುದಾಗಿದೆ.

    ಶನಿವಾರ ಈ ಕಂಪನಿಯ ಷೇರುಗಳಲ್ಲಿ ಶೇ. 2ರಷ್ಟು ಏರಿಕೆ ಕಂಡು 672.45 ರೂ.ಗೆ ತಲುಪಿದೆ. ಇದು ಷೇರುಪೇಟೆಯ 52 ವಾರಗಳ ಗರಿಷ್ಠ ಬೆಲೆ ಆಗಿದೆ. ವಹಿವಾಟಿನ ಮುಕ್ತಾಯದಲ್ಲಿ ಷೇರು ಬೆಲೆ 662.80 ರೂ. ಇತ್ತು.

    ಈ ಕಂಪನಿಯ ಷೇರುಗಳ ಬೆಲೆ ಕಳೆದ ಐದು ವರ್ಷಗಳಲ್ಲಿ 1600% ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಈ ಅವಧಿಯಲ್ಲಿ ಇದರ ಬೆಲೆ 40 ರೂ.ನಿಂದ 672 ರೂ.ಗೆ ಏರಿಕೆಯಾಗಿದೆ. ಈ ಸ್ಟಾಕ್ ದೀರ್ಘಾವಧಿಯಲ್ಲಿ 15,000% ಕ್ಕಿಂತ ಹೆಚ್ಚು ಬಲವಾದ ಆದಾಯವನ್ನು ನೀಡಿದೆ. 2000ನೇ ಇಸವಿಯಲ್ಲಿ ಈ ಷೇರಿನ ಬೆಲೆ ಕೇವಲ 4 ರೂಪಾಯಿ ಇತ್ತು. ಅಂದಿನಿಂದ ಇಲ್ಲಿಯವರೆಗೆ ಈ ಷೇರಿನಲ್ಲಿ 1 ಲಕ್ಷ ರೂ.ಗಳ ಹೂಡಿಕೆ 1 ಕೋಟಿ 68 ಲಕ್ಷ ರೂ.ಗೆ ಏರಿಕೆಯಾಗಿದೆ.

    ಈ ಕಂಪನಿ ಜನವರಿ-ಮಾರ್ಚ್ 2024 ರ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. 2023-24ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಸಿಜಿ ಪವರ್‌ನ ನಿವ್ವಳ ಲಾಭವು 233.81 ಕೋಟಿ ರೂ. ಆಗಿದೆ. 2022-23 ರ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ಲಾಭವು 426.22 ಕೋಟಿ ರೂ. ಇತ್ತು. ಮಾರ್ಚ್ 31, 2024 ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷದಲ್ಲಿ ಲಾಭವು 1,427.61 ಕೋಟಿ ರೂಪಾಯಿಗಳಷ್ಟಿತ್ತು, ಇದು 2022-23 ರ ಆರ್ಥಿಕ ವರ್ಷದಲ್ಲಿ 962.97 ಕೋಟಿ ರೂ. ಆಗಿತ್ತು.

    2023-24ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು 2,239.83 ಕೋಟಿ ರೂ.ಗೆ ಏರಿಕೆಯಾಗಿದೆ, ಇದು 2022-23ನೇ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ 1,917.05 ಕೋಟಿ ರೂ. ಇತ್ತು. ಕಂಪನಿಯು ಪ್ರತಿ ಷೇರಿಗೆ 1.30 ರೂಪಾಯಿ ಮಧ್ಯಂತರ ಲಾಭಾಂಶ ನೀಡಿದೆ.

    ಚುನಾವಣೆಯಲ್ಲಿ ಗೆದ್ದು ಯಾವುದೇ ಸರ್ಕಾರ ಬರಲಿ, ಈ ಎರಡು ಷೇರುಗಳ ಬೆಲೆ ದುಪ್ಪಟ್ಟಾಗಲಿದೆ: ಎಕ್ಸ್​ಪರ್ಟ್​ ಹೀಗೆ ಹೇಳುತ್ತಿರುವುದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts