ಕಾರು ಡಿಕ್ಕಿಯಾಗಿ ದಂಪತಿ ಸಾವು

accident-15
Published on

ಕಾಸರಗೋಡು: ಕುತ್ತಿಕ್ಕೋಲ್-ಬೇತೂರ್‌ಪಾರ-ಬೋವಿಕ್ಕಾನ ರಸ್ತೆಯ ಕುನ್ನುಮ್ಮಲ್‌ನಲ್ಲಿ ಸ್ಕೂಟರ್ ಹಾಗೂ ಕಾರು ನಡುವೆ ಅಪಘಾತವಾಗಿದ್ದು, ವ್ಯಾಪಾರಿ ದಂಪತಿ ಮೃತಪಟ್ಟಿದ್ದಾರೆ.

ಬಂದಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರ ಸನಿಹದ ನಿವಾಸಿ ಕೆ.ಕೆ ಕುಞಿಕಣ್ಣನ್(79)ಹಾಗೂ ಅವರ ಪತ್ನಿ ಚಿತ್ರಕಲಾ(63) ಮೃತ ದುರ್ದೈವಿಗಳು. ದಂಪತಿ ಸಂಚರಿಸುತ್ತಿದ್ದ ಸ್ಕೂಟರ್‌ಗೆ ಕಾರು ಡಿಕ್ಕಿಯಾಗಿದ್ದು, ಇಬ್ಬರೂ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಸ್ಥಳೀಯರು ಇವರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಕುಞಿಕಣ್ಣನ್ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಬಂದಡ್ಕ ಘಟಕ ಅಧ್ಯಕ್ಷರಾಗಿದ್ದರು. ಬೇಡಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net