More

  ಸಿಎಸ್​ಕೆ ವಿರುದ್ಧ ಗೆದ್ದು ಆರ್​ಸಿಬಿ ಪ್ಲೇಆಫ್​ ಪ್ರವೇಶಿಸಲು ಈಕೆಯೂ ಕಾರಣವಂತೆ! ಇಲ್ಲಿದೆ ವಿಡಿಯೋ ಸಾಕ್ಷಿ…

  ಬೆಂಗಳೂರು: ಐಪಿಎಲ್​​ ಇತಿಹಾಸದಲ್ಲೇ ರಾಯಲ್​​​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ಎದುರಿಸಿದಷ್ಟು ಟೀಕೆಗಳನ್ನು ಬೇರೆ ಯಾವ ತಂಡವು ಎದುರಿಸಿಲ್ಲ. ಟ್ರೋಲ್​ಗಳಿಗೇನು ಕಮ್ಮಿ ಇಲ್ಲ. ಇದುವರೆಗೂ 16 ಐಪಿಎಲ್​ ಸೀಸನ್​ ಮುಗಿದಿವೆ. ಆದರೆ, ಒಮ್ಮೆಯೂ ಕಪ್​ ಗೆದ್ದಿಲ್ಲ. ಹೀಗಾಗಿ ಆರ್​ಸಿಬಿ ಅಂದರೆ ಅದೊಂದು ಕಳಪೆ ತಂಡ ಎಂಬ ಹಣೆಪಟ್ಟಿ ಹೊಂದಿತ್ತು. ಪ್ರಸಕ್ತ 17ನೇ ಸೀಸನ್​ನಲ್ಲೂ ಸಾಲು ಸಾಲು ಸೋಲುಗಳೊಂದಿಗೆ ಮತ್ತೆ ಅಭಿಮಾನಿಗಳು ಹಾಗೂ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿತ್ತು. ಆರ್​ಸಿಬಿಯ ಅಪ್ಪಟ್ಟ ಅಭಿಮಾನಿಗಳು ತಂಡದ ಮೇಲಿನ ಭರವಸೆಯೇ ಕಳೆದುಕೊಂಡಿದ್ದ ಸಂದರ್ಭದಲ್ಲಿ ಪುಟಿದೆದ್ದ ಆರ್​ಸಿಬಿ, ಸತತ ಸೋಲುಗಳಿಂದ ಪಾಠ ಕಲಿತು ತನ್ನ ಆವೇಗವನ್ನು ಹೆಚ್ಚಿಸಿಕೊಂಡು, ಆಕ್ರಮಣಕಾರಿ ಆಟವಾಡುವ ಮೂಲಕ ಯಶಸ್ಸಿನ ಹಾದಿಗೆ ಮರಳಿದೆ. ಸತತ 6 ಪಂದ್ಯಗಳಲ್ಲಿ ಭರ್ಜರಿ ಗೆಲುವಿನೊಂದಿಗೆ ಪ್ಲೇಆಫ್ ಸಹ ಪ್ರವೇಶಿಸಿದೆ. ತಂಡದ ಈ ಯಶಸ್ಸಿಗೆ ವಿರಾಟ್​ ಕೊಹ್ಲಿ, ಫಾಫ್​ ಡುಪ್ಲೆಸಿಸ್​ ಮತ್ತು ದಿನೇಶ್​ ಕಾರ್ತಿಕ್​ ಸೇರಿದಂತೆ ಆರ್​ಸಿಬಿ ಆಟಗಾರರು ಕಾರಣ ಎಂಬುದು ಸತ್ಯ. ಆದರೆ, ಪ್ಲೇಆಫ್​ಗೆ ಅರ್ಹತೆ ಗಿಟ್ಟಿಸುವ ನಿರ್ಣಾಯಕ ಪಂದ್ಯದಲ್ಲಿ ಆರ್​ಸಿಬಿ ಗೆಲ್ಲಲು ನೀವು ಮೇಲಿನ ಫೋಟೋದಲ್ಲಿ ನೋಡುತ್ತಿರುವ ಹುಡುಗಿಯೂ ಕಾರಣ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

  ಸಿಎಸ್​ಕೆ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಕೊನೆಯವರೆಗೂ ಹೋರಾಡಿದ ಆರ್​ಸಿಬಿ ಗೆದ್ದು ಬೀಗಿತು. ರುತುರಾಜ್ ಪಡೆಯನ್ನು 27 ರನ್‌ಗಳ ಅಂತರದಿಂದ ಸೋಲಿಸಿ, ಪ್ಲೇಆಫ್​ ಪ್ರವೇಶ ಮಾಡಿತು. ಒಂದು ಹಂತದಲ್ಲಿ ವಿಜಯಲಕ್ಷ್ಮೀ ಚೆನ್ನೈ ಕಡೆ ವಾಲಿತ್ತು. ಆದರೆ, ಅದೃಷ್ಟ ಆರ್​ಸಿಬಿ ಪರ ಇದ್ದಿದ್ದರಿಂದ ಅನೇಕ ಪವಾಡಗಳು ಮೈದಾನದಲ್ಲಿ ನಡೆದವು. ಉದಾಹರಣೆಗೆ ಮೊಹಮ್ಮದ್​ ಸಿರಾಜ್​ ಅವರು ಕ್ಯಾಚ್​ ಬಿಟ್ಟು ಶಿವಂ ದುಬೆಗೆ ಜೀವದಾನ ನೀಡಿದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು. ಏಕೆಂದರೆ, ಅದೇ ಓವರ್​ನಲ್ಲಿ ಶಿವಂ ದುಬೆಯಿಂದಾಗಿ ಸ್ಫೋಟಕ ಆಟಗಾರ ರಾಚಿನ್​ ರವೀಂದ್ರ (61 ರನ್​, 37 ಎಸೆತ, 5 ಬೌಂಡರಿ ಮತ್ತು 3 ಸಿಕ್ಸರ್​) ರನೌಟ್​ ಆದರು.

  ಈ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿನ ಶ್ರೇಯಸ್ಸು ಈ ಹುಡುಗಿಗೂ ಸಲ್ಲಬೇಕು ಎಂದು ಕೆಲ ನೆಟ್ಟಿಗರು ಕಾಮೆಂಟ್​ ಮಾಡುತ್ತಿದ್ದಾರೆ. ಅದಕ್ಕೆ ಕಾರಣವನ್ನೂ ನೀಡಿದ್ದಾರೆ. ಪಂದ್ಯದ ನಡುವೆ ಯುವತಿಯೊಬ್ಬಳು ಕ್ರೀಡಾಂಗಣದಲ್ಲಿ ತನ್ನ ಡಾನ್ಸ್​ ಮೂಲಕ ಸದ್ದು ಮಾಡಿದಳು. ಚೆನ್ನೈ ಇನ್ನಿಂಗ್ಸ್​ ಸಮಯದಲ್ಲಿ ಅದ್ಭುತ ನೃತ್ಯದ ಮೂಲಕ ಕ್ರೀಡಾಂಗಣದಲ್ಲಿದ್ದವರನ್ನು ರಂಜಿಸಿದಳು. ತನ್ನ ಮುದ್ದಾದ ನೋಟ ಮತ್ತು ಸ್ಟೈಲಿಶ್ ಡಾನ್ಸ್‌ನಿಂದ ಎಲ್ಲರ ಮನ ಕದ್ದಳು. ಆಕೆಯ ಡಾನ್ಸ್​ನಿಂದಾಗಿ ಸಿಎಸ್‌ಕೆ ಪಾಳಯದಲ್ಲಿ ವಿಕೆಟ್​ ಬಿದ್ದಿತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲ ನೆಟ್ಟಿಗರು ಹೇಳುತ್ತಿದ್ದಾರೆ.

  ಸಿಎಸ್‌ಕೆ ಇನ್ನಿಂಗ್ಸ್‌ನಲ್ಲಿ ಮಿಚೆಲ್ ಸ್ಯಾಂಟ್ನರ್ (3) ಅವರು ಬ್ಯಾಟಿಂಗ್ ಮಾಡುತ್ತಿದ್ದಾಗ, ಸ್ಟೇಡಿಯಂನಲ್ಲಿ ಪರದೆಯ ಮೇಲೆ ಹುಡುಗಿಯ ಡಆನ್ಸ್ ವಿಡಿಯೋ ಪ್ರದರ್ಶನ ಮಾಡಲಾಯಿತು. ಆಕೆಯ ಡಾನ್ಸ್​ ನೋಡಿ ಸ್ಯಾಂಟ್ನರ್​ ತಬ್ಬಿಬ್ಬಾದರು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಯುವತಿಯ ಸ್ಟೈಲಿಶ್ ಡಾನ್ಸ್​ನಿಂದ ಪ್ರಭಾವಿತರಾದ ಸ್ಯಾಂಟ್ನರ್ ತಮ್ಮ ಗಮನವನ್ನು ಆಕೆಯ ಮೇಲೆ ಹರಿಸಿದ್ದರಿಂದ ಬ್ಯಾಟಿಂಗ್‌ನತ್ತ ಗಮನ ಹರಿಸಲು ಸಾಧ್ಯವಾಗಲಿಲ್ಲ ಎಂದು ಕಾಮೆಂಟ್ ಮಾಡಲಾಗುತ್ತಿದೆ. ಯುವತಿಯನ್ನು ನೋಡಿದ ಹ್ಯಾಂಗೋವರ್​ನಿಂದ ಕೆಟ್ಟ ಹೊಡೆತಕ್ಕೆ ಕೈಹಾಕಿ, ಡುಪ್ಲೆಸಿಸ್​ ಕೈಗೆ ಕ್ಯಾಚಿತ್ತು ನಿರ್ಗಮಿಸಿದರು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

  ಸ್ಯಾಂಟ್ನರ್​ ವಿಕೆಟ್​ ಬಿದ್ದ ಬಳಿಕ ಚೇತರಿಸಿಕೊಳ್ಳದ ಸಿಎಸ್​ಕೆ, ಆ ಬಳಿಕ ಧೋನಿ-ಜಡೇಜಾ ಅಬ್ಬರಿಸಿದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಆರ್​ಸಿಬಿ ಯಶಸ್ಸಿಗೆ ಈ ಹುಡುಗಿಯೂ ಕಾರಣ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​)

  ಶೇಕ್​ ಹ್ಯಾಂಡ್​ ವಿವಾದ: ಯಾರು ಯಾರಿಗೆ ಅವಮಾನ ಮಾಡಿದ್ರು? ಈ ವಿಡಿಯೋ ನೋಡಿದ್ರೆ ನಿಮಗೆ ಗೊತ್ತಾಗುತ್ತೆ!

  ಆರ್​ಸಿಬಿ ಆಟಗಾರರಿಗೆ ಎಂ.ಎಸ್​. ಧೋನಿ ಶೇಕ್​ ಹ್ಯಾಂಡ್​ ಮಾಡಲಿಲ್ಲ ಏಕೆ? ಕೊನೆಗೂ ಕಾರಣ ಬಹಿರಂಗ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts