More

  ಐಪಿಎಲ್ ಕ್ವಾಲಿಫೈಯರ್-1ರಲ್ಲಿ ಗೆದ್ದವರಿಗೆ ಫೈನಲ್ ಟಿಕೆಟ್: ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ…

  ಅಹಮದಾಬಾದ್: ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಮೊದಲ ತಂಡವಾಗಿ ಪ್ಲೇಆಫ್ ಪ್ರವೇಶಿಸಿರುವ ಎರಡು ಬಾರಿಯ ಚಾಂಪಿಯನ್ ಕೋಲ್ಕತ ನೈಟ್‌ರೈಡರ್ಸ್‌ ಹಾಗೂ ಮಳೆ ಸಹಾಯದೊಂದಿಗೆ ಎರಡನೇ ಸ್ಥಾನ ಪಡೆದಿರುವ 2016ರ ಚಾಂಪಿಯನ್ ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಐಪಿಎಲ್-17ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮಂಗಳವಾರ ಮುಖಾಮುಖಿಯಾಗಲಿವೆ.

  ಮಳೆ ಅಡ್ಡಿಪಡಿಸಿದರೆ…: ಟೂರ್ನಿಯಲ್ಲಿ ಈಗಾಗಲೆ 3 ಪಂದ್ಯಗಳು ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡಿದ್ದು, ಅಹಮದಾಬಾದ್‌ನಲ್ಲೂ ಪ್ಲೇಆಫ್ ಪಂದ್ಯಗಳಿಗೆ ಮಳೆ ಭೀತಿ ಇದೆ. ಕೆಕೆಆರ್-ಸನ್‌ರೈಸರ್ಸ್‌ ನಡುವಿನ ಮೊದಲ ಕ್ವಾಲಿಫೈಯರ್‌ಗೂ ಮಳೆ ಅಡಚಣೆ ಸಾಧ್ಯತೆ ಇದೆ. ಆದರೆ ರಾತ್ರಿ 9.40ಕ್ಕೆ ಪಂದ್ಯ ಶುರುವಾದರೂ, ಒಂದೂ ಓವರ್ ಕಡಿತವಿಲ್ಲದೆ ತಲಾ 20 ಓವರ್‌ಗಳ ಪಂದ್ಯ ನಡೆಯಲಿದೆ. ಓವರ್‌ಗಳ ಕಡಿತ ಅಥವಾ ಡಕ್ವರ್ತ್ ಲೂಯಿಸ್ ಸ್ಟರ್ನ್ ನಿಯಮದ ಪ್ರಕಾರವೂ ಫಲಿತಾಂಶ ನಿರ್ಧರಿಸಲು ಆದ್ಯತೆ ನೀಡಲಾಗುತ್ತದೆ. ಇನ್ನು ಲೀಗ್ ಹಂತದಲ್ಲಿ ರಾತ್ರಿ 10.56 ಪಂದ್ಯ ಆರಂಭಕ್ಕೆ ಅಂತಿಮ ಗಡುವು ಆಗಿದ್ದರೆ, ಪ್ಲೇಆಫ್​ಗೆ ಲೀಗ್ ಪಂದ್ಯಗಳಿಗಿಂತ ಹೆಚ್ಚುವರಿಯಾಗಿ 2 ಗಂಟೆ ನೀಡಲಾಗಿದೆ. ಇದರಿಂದ ಕನಿಷ್ಠ 5 ಓವರ್‌ಗಳ ಪಂದ್ಯ ಆಡಲು ರಾತ್ರಿ 12.56ರವರೆಗೂ ಪಂದ್ಯ ಆರಂಭಿಸಲು ಕಾಯಬಹುದಾಗಿದೆ ಅಥವಾ ಸೂಪರ್ ಓವರ್ ಮೂಲಕವೂ ಲಿತಾಂಶ ನಿರ್ಧರಿಸಬಹುದಾಗಿದೆ. ಇದು ಯಾವುದೂ ಸಾಧ್ಯವಾಗದಿದ್ದರೆ, ಲೀಗ್ ಅಂಕಪಟ್ಟಿಯಲ್ಲಿ ಉನ್ನತ ಸ್ಥಾನ ಪಡೆದ ತಂಡ ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿದೆ.

  ಫೈನಲ್ ಪಂದ್ಯಕ್ಕೆ ಮೀಸಲು ದಿನವಿರುವುದು ಖಚಿತವಿದೆ. ಈ ನಡುವೆ ಇತರ ಪ್ಲೇಆಫ್ ಪಂದ್ಯಗಳಿಗೂ ಮೀಸಲು ದಿನ ನಿಗದಿಪಡಿಸಲಾಗಿದೆ ಎಂಬ ವರದಿಗಳು ಹರಡಿದ್ದರೂ, ಐಪಿಎಲ್ ಆಡಳಿತ ಮಂಡಳಿ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಬುಧವಾರ ಇದೇ ಸ್ಟೇಡಿಯಂನಲ್ಲಿ ಆರ್‌ಸಿಬಿ-ರಾಜಸ್ಥಾನ ಎಲಿಮಿನೇಟರ್ ಪಂದ್ಯ ನಿಗದಿಯಾಗಿರುವುದರಿಂದ ಮರುದಿನಕ್ಕೆ ಪಂದ್ಯವನ್ನು ಮುಂದೂಡಲು ಹೇಗೆ ಸಾಧ್ಯ ಎಂಬ ಬಗ್ಗೆ ವಿವರಣೆ ನೀಡಲಾಗಿಲ್ಲ. ಅಲ್ಲದೆ ಎರಡೂ ಪಂದ್ಯಗಳ ಟಿಕೆಟ್‌ಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗಿದೆ.

  ಮುಖಾಮುಖಿ: 26
  ಕೆಕೆಆರ್: 17
  ಸನ್‌ರೈಸರ್ಸ್‌: 9
  ಆರಂಭ: ರಾತ್ರಿ 7.30
  ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts