More

  ಪತ್ನಿ ಜತೆ ಡಿ ಬಾಸ್​​ ವೆಡ್ಡಿಂಗ್ ಆನಿವರ್ಸರಿ ಸೆಲೆಬ್ರೇಷನ್: ಇತ್ತ ಕರ್ಮ ರಿಟರ್ನ್ಸ್ ಸ್ಟೇಟಸ್ ಹಾಕಿದ ಪವಿತ್ರಾ ಗೌಡ…

   ಬೆಂಗಳೂರು: ಸ್ಯಾಂಡಲ್​ವುಡ್​​ ನಟ  ದರ್ಶನ್​ ಪತ್ನಿ ವಿಜಯಲಕ್ಷ್ಮಿ ಜತೆ ಅವರು ವಿವಾಹ ವಾರ್ಷಿಕೋತ್ಸವ ಸೆಲೆಬ್ರೇಟ್​ ಮಾಡಿದ್ದಾರೆ. ಈ   ಫೋಟೋಗಳು ವೈರಲ್​ ಆಗಿವೆ. ಅಭಿಮಾನಿಗಳು ಮತ್ತು ಆಪ್ತರು ಶುಭಾಶಯ ತಿಳಿಸಿದ್ದಾರೆ.

  darshan

  ನಿರ್ಮಾಪಕಿ ಶೈಲಜಾ ನಾಗ್, ದರ್ಶನ್, ವಿಜಯಲಕ್ಷ್ಮಿ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ಕೋರಿ ಫೋಟೋ ಹಾಕಿದ್ದರು. ಅದರ ಸ್ಕ್ರೀನ್‌ಶಾಟ್ ಅನ್ನು ವಿಜಯಲಕ್ಷ್ಮೀ ದರ್ಶನ್ ತಮ್ಮ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದಾರೆ. ದರ್ಶನ್​ ಹಾಗೂ ವಿಜಯಲಕ್ಷ್ಮಿ ಅವರಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಹಾಗೂ ಆಪ್ತರು ವೆಡ್ಡಿಂಗ್​ ಆ್ಯನಿವರ್ಸರಿಯ ಶುಭಾಶಯ ಕೋರಿದ್ದಾರೆ. ಇನ್ನೊಂದೆಡೆ ಸೋಶಿಯಲ್ ಮೀಡಿಯಾದಲ್ಲಿ ಪವಿತ್ರಾ ಗೌಡ ಅವರು ಕೋಪ ಹೊರಹಾಕಿದ್ರಾ ಎಂಬ ಪ್ರಶ್ನೆ ಮೂಡಿದೆ. ಯಾಕೆಂದರೆ, ದರ್ಶನ್ ಅವರು ಈ ಹಿಂದೆ ಸಂದರ್ಶನವೊಂದರಲ್ಲಿ ಕರ್ಮದ ಬಗ್ಗೆ ಮಾತಾಡಿರೋ ವೈರಲ್ ವಿಡಿಯೋವನ್ನು ಈಗ  ಶೇರ್ ಮಾಡಿ ‘ಕರ್ಮ’ ಎಂದು ಕ್ಯಾಪ್ಶನ್ ನೀಡಿದ್ದಾರೆ.

  ಪತ್ನಿ ಜತೆ ಡಿ ಬಾಸ್​​ ವೆಡ್ಡಿಂಗ್ ಆನಿವರ್ಸರಿ ಸೆಲೆಬ್ರೇಷನ್: ಇತ್ತ ಕರ್ಮ ರಿಟರ್ನ್ಸ್ ಸ್ಟೇಟಸ್ ಹಾಕಿದ ಪವಿತ್ರಾ ಗೌಡ...

  ಕೆಲವು ದಿನಗಳ ಹಿಂದೆ ಸೋಶಿಯಲ್​ ಮೀಡಿಯಾದಲ್ಲಿ ಪವಿತ್ರಾ ಹಾಗೂ ವಿಜಯಲಕ್ಷ್ಮಿ ನಡುವೆ ವಾರ್ ಆಗಿತ್ತು. ಆ ಮುನಿಸು ಇನ್ನೂ ಕಡಿಮೆ ಆದಂತಿಲ್ಲ. ಇಂದು (ಮೇ 20) ವಿಜಯಲಕ್ಷ್ಮಿ ಅವರು ಇನ್​ಸ್ಟಾಗ್ರಾಮ್​ಲ್ಲಿ ಸ್ಟೋರಿ ಶೇರ್ ಮಾಡಿದ 1 ಗಂಟೆ ನಂತರ ಪವಿತ್ರಾ ಅವರು ಕರ್ಮದ ವಿಡಿಯೋ ಶೇರ್ ಮಾಡಿದ್ದಾರೆ. ಇದರಿಂದ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

  darshan

  ಪವಿತ್ರಾ ಗೌಡ ಹಾಕಿರುವ ಸ್ಟೇಟಸ್​​ನಲ್ಲಿ ದರ್ಶನ್​ ಅವರು, ‘ಕರ್ಮ ಅನ್ನೋದು ಬ್ಯಾಗೇಜ್ ಥರ. ಏನನ್ನ ನೀವೂ ಅದರಲ್ಲಿ ಫಿಲ್ ಮಾಡ್ತೀರ ಅದೇ ನಿಮಗೆ ಸಿಗುತ್ತೆ. ನಾವೆಲ್ಲಾ ಚಿಕ್ಕವರಿರುವಾಗ ನಮ್ಮ ಅಜ್ಜಿ, ತಾತ ಹೇಳ್ತಾ ಇದ್ರು. ಈಗ ಕರ್ಮ ಮಾಡ್ತಾ ಇದ್ದೀಯಾ ಮುಂದಿನ ಜನ್ಮಕ್ಕೆ ಕ್ಯಾರಿ ಆಗುತ್ತೆ ಅಂತ. ಆಗೆಲ್ಲಾ ಮುಂದಿನ ಜನ್ಮಕ್ಕೆ ಕ್ಯಾರಿ ಆಗ್ತಾ ಇತ್ತು. ಈಗ ಅಲ್ಲೆ ಡ್ರಾ ಅಲ್ಲೇ ಬಹುಮಾನ’ ಎಂಬ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೈಲಜಾ ನಾಗ್ ನಿರ್ಮಾಣದ ‘ಕ್ರಾಂತಿ’ ಸಿನಿಮಾ ಪ್ರಮೋಷನ್ ಸಮಯದಲ್ಲಿಯೇ ಕೊಟ್ಟಿದ್ದ ಸಂದರ್ಶನದ ವಿಡಿಯೋ ಅದಾಗಿದೆ‌. ಆದರೆ ಇಲ್ಲಿ ಪವಿತ್ರಾ ಗೌಡ ಯಾರಿಗೆ ಕರ್ಮದ ಪಾಠ ಮಾಡಿದ್ರು ಗೊತ್ತಿಲ್ಲ.

  VIDEO | IPLನಲ್ಲಿ ಮುಗಿದ ಚೆನ್ನೈ ಕಥೆ.. ಧೋನಿ ಏನ್ ಮಾಡ್ತಿದ್ದಾರೆ ನೋಡಿದ್ದೀರಾ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts