More

    1,045ರಿಂದ 330ಕ್ಕೆ ಕುಸಿದ ಷೇರುಗಳ ಬೆಲೆ: ಈಗ ಮತ್ತೆ ಸ್ಟಾಕ್​ಗೆ ಡಿಮ್ಯಾಂಡು ಏಕೆ

    ನವದೆಹಲಿ: ಒಂದು ದಿನದ ಏರಿಳಿತದ ವಹಿವಾಟಿನ ನಂತರ, ಶುಕ್ರವಾರದಂದು ಷೇರುಪೇಟೆ ದುರ್ಬಲವಾಗಿ ಮುಕ್ತಾಯವಾಯಿತು. ಬಿಎಸ್‌ಇ ಸೂಚ್ಯಂಕ 733 ಅಂಕ ಕುಸಿದು 73878 ಮಟ್ಟದಲ್ಲಿ ಮುಕ್ತಾಯಗೊಂಡರೆ ನಿಫ್ಟಿ ಸೂಚ್ಯಂಕ 22486 ಮಟ್ಟದಲ್ಲಿ ಮುಕ್ತಾಯಗೊಂಡು 172 ಅಂಕಗಳಿಗಿಂತ ಹೆಚ್ಚು ಕುಸಿತು ದಾಖಲಿಸಿದೆ. ಶುಕ್ರವಾರ ಷೇರುಪೇಟೆಯ ಬಹುತೇಕ ಎಲ್ಲ ವಲಯವಾರು ಸೂಚ್ಯಂಕಗಳು ಭಾರಿ ನಷ್ಟದೊಂದಿಗೆ ಮುಕ್ತಾಯಗೊಂಡವು. ಆದರೆ, ನಿಫ್ಟಿ ಫಾರ್ಮಾ ಸೂಚ್ಯಂಕದಲ್ಲಿ ಕೊಂಚ ಏರಿಕೆ ದಾಖಲಾಗಿದೆ. ಶುಕ್ರವಾರ ಷೇರು ಮಾರುಕಟ್ಟೆಯ ಟಾಪ್ ಗೇನರ್‌ಗಳ ಷೇರುಗಳ ಪೈಕಿ, ಕೋಲ್ ಇಂಡಿಯಾ ಲಿಮಿಟೆಡ್, ಗ್ರಾಸಿಮ್ ಇಂಡಸ್ಟ್ರೀಸ್, ಒಎನ್‌ಜಿಸಿ, ಡಾ ರೆಡ್ಡೀಸ್, ಹಿಂಡಾಲ್ಕೊ ಮತ್ತು ಅಪೊಲೊ ಆಸ್ಪತ್ರೆಯ ಷೇರುಗಳು ಸೇರಿವೆ.

    ಷೇರು ಮಾರುಕಟ್ಟೆಯ ಟಾಪ್ ಲೂಸರ್‌ಗಳಲ್ಲಿ ಲಾರ್ಸೆನ್, ಮಾರುತಿ, ನೆಸ್ಲೆ, ರಿಲಯನ್ಸ್, ಭಾರ್ತಿ ಏರ್‌ಟೆಲ್, ಕೋಟಕ್ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಲೈಫ್ ಷೇರುಗಳು ಸೇರಿವೆ.

    ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ಮಲ್ಟಿಬ್ಯಾಗರ್ ಆದಾಯವನ್ನು ರಶಿಲ್ ಡೆಕೋರ್ ಲಿಮಿಟೆಡ್ ಕಂಪನಿಯ ಷೇರುಗಳು ನೀಡಿವೆ.

    ಇದರ ನಿರ್ದೇಶಕರ ಮಂಡಳಿಯ ಸಭೆಯು ಮೇ 24 ರಂದು ಶುಕ್ರವಾರ ನಡೆಯಲಿದ್ದು, ಇದರಲ್ಲಿ ಷೇರುಗಳ ವಿಭಜನೆಯ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಕಂಪನಿ ಹೇಳಿದೆ.

    ಈ ಕಂಪನಿಯ ಷೇರುಗಳ ವಹಿವಾಟು ವಿಂಡೋವನ್ನು ಏಪ್ರಿಲ್ 1 ರಿಂದ ಮುಚ್ಚಲಾಗಿದ್ದು, ಮಂಡಳಿಯ ಸಭೆಯ ನಂತರ 48 ಗಂಟೆಗಳ ನಂತರ ತನ್ನ ಷೇರುಗಳ ವಹಿವಾಟನ್ನು ಪ್ರಾರಂಭಿಸಬಹುದು ಎಂದು ರುಶಿಲ್ ಡೆಕೋರ್ ಲಿಮಿಟೆಡ್ ಷೇರು ಮಾರುಕಟ್ಟೆಗೆ ತಿಳಿಸಿದೆ.

    ಶುಕ್ರವಾರದ ಷೇರು ಮಾರುಕಟ್ಟೆಯ ಕಾರ್ಯಚಟುವಟಿಕೆಯಲ್ಲಿನ ಭಾರೀ ಕುಸಿತದ ನಡುವೆ, ರುಶಿಲ್ ಡೆಕೋರ್ ಲಿಮಿಟೆಡ್‌ನ ಷೇರುಗಳ ಬೆಲೆ ಉತ್ತಮ ಏರಿಕೆ ದಾಖಲಿಸಿದೆ. ಶುಕ್ರವಾರ ಈ ಷೇರುಗಳ ಬೆಲೆ ಶೇ. 7.5ರಷ್ಟು ಏರಿಕೆ ಕಂಡು, ರೂ. 330.40 ತಲುಪಿದೆ.

    ರುಶಿಲ್ ಡೆಕೋರ್ ಇಂಟೀರಿಯರ್ ಡೆಕೊರೇಶನ್ ಕಂಪನಿಯಾಗಿದೆ. ಈ ಕಂಪನಿಯ ಷೇರುಗಳ 52 ವಾರಗಳ ಗರಿಷ್ಠ ಬೆಲೆ ರೂ. 407 ಮತ್ತು ಕನಿಷ್ಠ ಬೆಲೆ ರೂ. 242 ಇದೆ. ಈ ಷೇರುಗಳ ಸಾರ್ವಕಾಲಿಕ ಗರಿಷ್ಠ ಬೆಲೆ ರೂ. 1,045.33 ಹಾಗೂ ಕನಿಷ್ಠ ಬೆಲೆ ರೂ. 22.66 ಇದೆ. ರೂ. 875 ಕೋಟಿ ಮಾರುಕಟ್ಟೆ ಕ್ಯಾಪ್ ಅನ್ನು ಈ ಕಂಪನಿ ಹೊಂದಿಗೆ.

    ರುಶಿಲ್ ಡೆಕೋರ್ ಷೇರುಗಳು ಕಳೆದ ಒಂದು ವರ್ಷದಲ್ಲಿ ಹೂಡಿಕೆದಾರರಿಗೆ 18 ಪ್ರತಿಶತದಷ್ಟು ಲಾಭವನ್ನು ನೀಡಿವೆ. ಜೂನ್ 14, 2013 ರಂದು ರುಶಿಲ್ ಡೆಕೋರ್ ಲಿಮಿಟೆಡ್‌ನ ಷೇರುಗಳ ಬೆಲೆ ರೂ. 22 ರ ಕನಿಷ್ಠ ಮಟ್ಟದಲ್ಲಿತ್ತು, ಅಂದಿನ ಇಂದಿನವರೆಗೆ ಈ ಷೇರಿನ ಬೆಲೆ ಶೇಕಡಾ 1500 ರಷ್ಟು ಹೆಚ್ಚಾಗಿದೆ.

    ಮೇ 8ರವರೆಗೆ ರೇವಣ್ಣ ಎಸ್​ಐಟಿ ಕಸ್ಟಡಿಗೆ: ಜಡ್ಜ್​ ಕಟ್ಟಿಮನಿ ಆದೇಶ

    ಪಿಎಸ್​ಯು ಷೇರುಗಳ ಮೇಲೆ ದುಪ್ಪಟ್ಟಾದರೂ ಅಗ್ಗ: ಸರ್ಕಾರಿ ಕಂಪನಿ ಸ್ಟಾಕ್​ ಖರೀದಿಗೆ ತಜ್ಞರ ಸಲಹೆ

    ನನ್ನ ದೊಡ್ಡ ವಿರುದ್ಧ ಷಡ್ಯಂತ್ರ- ರೇವಣ್ಣ ಗೋಳು: ಪ್ರಜ್ವಲ್​ ವಿರುದ್ಧ ಬ್ಲೂ ಕಾರ್ನರ್ ನೋಟಿಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts