More

    ನನ್ನ ದೊಡ್ಡ ವಿರುದ್ಧ ಷಡ್ಯಂತ್ರ- ರೇವಣ್ಣ ಗೋಳು: ಪ್ರಜ್ವಲ್​ ವಿರುದ್ಧ ಬ್ಲೂ ಕಾರ್ನರ್ ನೋಟಿಸ್​

    ಬೆಂಗಳೂರು: ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ರೂಪಿಸಿ ಮಹಿಳೆ ಅಪಹರಣ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಎಸ್ ಐಟಿಯಿಂದ ಬಂಧನಕ್ಕೊಳಗಾಗಿರುವ ಜೆಡಿಎಸ್​ ನಾಯಕ ಹಾಗೂ ಮಾಜಿ ಸಚಿವ ಎಚ್​.ಡಿ. ರೇವಣ್ಣ ಆರೋಪಿಸಿದ್ದಾರೆ.

    ಬೌರಿಂಗ್ ಆಸ್ಪತ್ರೆಯಲ್ಲಿ ಭಾನುವಾರ ವೈದ್ಯಕೀಯ ತಪಾಸಣೆಗೆ ಒಳಗಾಗುವ ಮೊದಲು ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ರಾಜಕೀಯ ಷಡ್ಯಂತ್ರ ರೂಪಿಸಿ ದುರುದ್ದೇಶದಿಂದ ಬಂಧಿಸಲಾಗಿದೆ ಎಂದಿದ್ದಾರೆ.

    ಏಪ್ರಿಲ್ 28ಕ್ಕೆ ಎಫ್ಐಆರ್ ದಾಖಲಿದರೂ, ನನ್ನ ವಿರುದ್ಧ ಯಾವುದೇ ಸಾಕ್ಷ್ಯ ಸಿಗಲಿಲ್ಲ. ಈ ಕಾರಣಕ್ಕಾಗಿ ಮೇ2 ರಂದು ಮತ್ತೊಂದು ಕೇಸ್ ಹಾಕಿಸಿ ಬಂಧಿಸಿದ್ದಾರೆ. ರಾಜಕೀಯ ಇತಿಹಾಸದಲ್ಲೇ ಇದು ದುರುದ್ದೇಶದಿಂದ ಕೂಡಿದ ದೊಡ್ಡ ಷಡ್ಯಂತ್ರವಾಗಿದೆ. ಇದನ್ನು ಎದುರಿಸುವ ಶಕ್ತಿಯಿದೆ. ಎಲ್ಲವನ್ನೂ ಜಡ್ಜ್ ಮುಂದೆ ಹೇಳುತ್ತೇನೆ ಎಂದು ಅವರು ಹೇಳಿದರು.

    ತದನಂತರ ಅವರಿಗೆ ಆಸ್ಪತ್ರೆಯಲ್ಲಿ ರಕ್ತದೊತ್ತಡ, ಸಕ್ಕರೆ ಪ್ರಮಾಣ, ಇಸಿಜಿ ಮತ್ತಿತರ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಬಳಿಕ ಆಸ್ಪತ್ರೆಯಿಂದ ಕೋರಮಂಗಲದಲ್ಲಿರುವ ನ್ಯಾಯಮೂರ್ತಿಗಳ ನಿವಾಸಕ್ಕೆ ಎಸ್​ಐಟಿ ಅಧಿಕಾರಿಗಳು ಕರೆದೊಯ್ದರು.

    ಪ್ರಜ್ವಲ್​ ವಿರುದ್ಧ ಬ್ಲೂ ಕಾರ್ನರ್ ನೋಟಿಸ್​:

    ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಅಶ್ಲೀಲ ವಿಡಿಯೊ ಪ್ರಕರಣದಲ್ಲಿ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮನವಿ ಹಿನ್ನೆಲೆಯಲ್ಲಿ ಸಿಬಿಐ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ.

    ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್, ಲೈಂಗಿಕ ಕಿರುಕುಳ ಮತ್ತು ಅಪಹರಣ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಪತ್ತೆಗೆ ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

    ನ್ಯಾಯಯುತ ತನಿಖೆಗಾಗಿ ನಾವು ಎಸ್ಐಟಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಅವರನ್ನು ಹುಡುಕಲು ಬ್ಲೂ ಕಾರ್ನರ್ ನೋಟಿಸ್ ನೀಡಿರುವುದು ನಿಜ. ಸಂಬಂಧಪಟ್ಟ ಅಧಿಕಾರಿಗಳು ಆತನನ್ನು ಪತ್ತೆ ಹಚ್ಚುತ್ತಾರೆ ಎಂದು ಪರಮೇಶ್ವರ್​ ತಿಳಿಸಿದ್ದಾರೆ.

    ಈ ಬ್ಲೂ ಕಾರ್ನರ್ ನೋಟಿಸ್ ಇಂಟರ್‌ಪೋಲ್ ಕಲರ್-ಕೋಡೆಡ್ ನೋಟೀಸ್‌ನ ಒಂದು ಭಾಗವಾಗಿದ್ದು, ಇದು “ಜಗತ್ತಿನಾದ್ಯಂತ [ಅಪೇಕ್ಷಿತ ವ್ಯಕ್ತಿಗಳು/ಅಪರಾಧಗಳ ಕುರಿತು] ಮಾಹಿತಿಗಾಗಿ ಎಚ್ಚರಿಕೆಗಳು ಮತ್ತು ವಿನಂತಿಗಳನ್ನು ಹಂಚಿಕೊಳ್ಳಲು ದೇಶಗಳನ್ನು ಸಕ್ರಿಯಗೊಳಿಸುತ್ತದೆ ಎನ್ನಲಾಗಿದೆ.

    28ರಿಂದ 5 ರೂಪಾಯಿಗೆ ಕುಸಿದ ಹಣಕಾಸು ಷೇರು: ಈ ಸ್ಟಾಕ್​ಗೆ ಮತ್ತೆ ಡಿಮ್ಯಾಂಡು ಏಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts