More

    ಮುಖೇಶ್​ ಅಂಬಾನಿಯವರ ಜವಳಿ ಕಂಪನಿ: ಈಗ ಷೇರು ಬೆಲೆ ಕುಸಿತ ಕಂಡಿರುವುದೇಕೆ?

    ಮುಂಬೈ: ಜನವರಿ ತಿಂಗಳಿನಲ್ಲಿ ಭಾರಿ ಸದ್ದು ಮಾಡಿದ ಮುಖೇಶ್ ಅಂಬಾನಿ ಅವರ ಅಲೋಕ್ ಇಂಡಸ್ಟ್ರೀಸ್ ಷೇರುಗಳ ಬೆಲೆ ಈಗ ಕುಸಿತ ಕಂಡಿದೆ. ಜವಳಿ ವಲಯದ ಈ ಕಂಪನಿಯ ಷೇರುಗಳ ಬೆಲೆ ಜನವರಿ ತಿಂಗಳಿನಲ್ಲಿ 39.24 ರೂ. ಇತ್ತು. ಇದು 52 ವಾರಗಳ ಗರಿಷ್ಠ ಬೆಲೆ ಆಗಿತ್ತು. ಇದಾದ ನಂತರ ಹೂಡಿಕೆದಾರರು ಲಾಭಕ್ಕಾಗಿ ಷೇರುಗಳನ್ನು ಮಾರಾಟ ಮಾಡತೊಡಗಿದ ಕಾರಣ ಈ ಪೇರುಗಳ ಬೆಲೆ ಈಗ 30 ರೂ.ಗಿಂತ ಕಡಿಮೆಯಾಗಿದೆ. ಪ್ರಸ್ತುತ ಬಿಎಸ್‌ಇಯಲ್ಲಿ ಈ ಷೇರಿನ ಬೆಲೆ 27 ರೂ. ಇದೆ.

    ಇತ್ತೀಚೆಗೆ ಅಲೋಕ್ ಇಂಡಸ್ಟ್ರೀಸ್ ಕಂಪನಿಯು ಇತ್ತೀಚಿಗೆ ಷೇರು ಮಾರುಕಟ್ಟೆಗೆ ಮಾಹಿತಿ ನಿಡಿದೆ. ಸಿಜಿಎಸ್​ಟಿ ಮತ್ತು ಸೆಂಟ್ರಲ್ ಎಕ್ಸೈಸ್​ನಿಂದ ಆದೇಶ ಬಂದಿದೆ. ಈ ಆದೇಶದಲ್ಲಿ ಕಂಪನಿಗೆ ಕೇಂದ್ರ ಸರಕು ಸೇವಾ ತೆರಿಗೆ ಕಾಯ್ದೆ 2017ರ ಸೆಕ್ಷನ್ 73(9)ರ ಅಡಿಯಲ್ಲಿ 22,508 ರೂ. ದಂಡ ವಿಧಿಸಲಾಗಿದೆ. 2019 ರ ಈ ಪ್ರಕರಣದಲ್ಲಿ, ಕಂಪನಿಯು ಇನ್‌ಪುಟ್ ತೆರಿಗೆ ಕ್ರೆಡಿಟ್‌ಗೆ ಹೆಚ್ಚುವರಿಯಾಗಿ ಮರುಪಾವತಿಗಾಗಿ ತಪ್ಪು ಕ್ಲೈಮ್ ಅನ್ನು ಮಾಡಿದೆ ಎಂದು ಆರೋಪಿಸಿ ಆದೇಶವನ್ನು ರವಾನಿಸಲಾಗಿದೆ. ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಂಪನಿ ಉದ್ದೇಶಿಸಿದೆ ಎಂದು ಅಲೋಕ್ ಇಂಡಸ್ಟ್ರೀಸ್ ಷೇರು ವಿನಿಮಯ ಕೇಂದ್ರಕ್ಕೆ ತಿಳಿಸಿದೆ. ಆದರೂ. ಈ ಆದೇಶವು ಕಂಪನಿಯ ಕಾರ್ಯಾಚರಣೆಗಳು ಅಥವಾ ಇತರ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅದು ಹೇಳಿದೆ.

    ಮಾರ್ಚ್ 2024ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಅಲೋಕ್ ಇಂಡಸ್ಟ್ರೀಸ್​ನ ನಿವ್ವಳ ನಷ್ಟವು 215.93 ಕೋಟಿ ರೂ. ಇದೆ. ಒಂದು ವರ್ಷದ ಹಿಂದೆ, ಮಾರ್ಚ್ 2023ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ, ಕಂಪನಿಯ ನಷ್ಟವು 297.55 ಕೋಟಿ ರೂ. ಇತ್ತು. ಈ ನಿಟ್ಟಿನಲ್ಲಿ ನಷ್ಟ ಕಡಿಮೆಯಾಗಿದೆ. ಮಾರ್ಚ್ 2024ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಮಾರಾಟವು 6.44% ರಷ್ಟು ಕುಸಿದು 1469.31 ಕೋಟಿ ರೂ. ಆಗಿದೆ. ಮಾರ್ಚ್ 2023ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 1570.48 ಕೋಟಿ ರೂ.ಗಳ ಮಾರಾಟವಾಗಿದೆ.

    ಮಾರ್ಚ್ 2024ಕ್ಕೆ ಕೊನೆಗೊಳ್ಳುವ ಸಂಪೂರ್ಣ ಆರ್ಥಿಕ ವರ್ಷದ ಬಗ್ಗೆ ಮಾತನಾಡಿದರೆ, 846.82 ಕೋಟಿ ರೂಪಾಯಿ ನಷ್ಟವಾಗಿದೆ. ಇದೇ ಸಮಯದಲ್ಲಿ, ಮಾರ್ಚ್ 2023 ರ ಆರ್ಥಿಕ ವರ್ಷದಲ್ಲಿ ರೂ. 880.46 ಕೋಟಿ ನಷ್ಟವಾಗಿದೆ. ಇದರ ಹೊರತಾಗಿ, ಮಾರ್ಚ್ 2024 ಕ್ಕೆ ಕೊನೆಗೊಂಡ ವರ್ಷದಲ್ಲಿ ಮಾರಾಟವು 21.17% ರಷ್ಟು ಕುಸಿದು 5509.59 ಕೋಟಿ ರೂ. ಆಗಿದೆ.

    ಈ ಕಂಪನಿಯ ಪ್ರವರ್ತಕ, ರಿಲಯನ್ಸ್ ಇಂಡಸ್ಟ್ರೀಸ್, ಒಟ್ಟು 1,98,65,33,333 ಷೇರುಗಳನ್ನು ಅಥವಾ ಶೇಕಡಾ 40.01 ಪಾಲನ್ನು ಹೊಂದಿದೆ. ಮತ್ತೊಂದು ಪ್ರವರ್ತಕ ಕಂಪನಿಯಾದ JM ಫೈನಾನ್ಷಿಯಲ್ ಅಸೆಟ್ ರೀಕನ್​ಸ್ಟ್ರಕ್ಷನ್ 1,73,73,11,844 ಷೇರುಗಳನ್ನು ಅಥವಾ ಶೇ. 34.99 ಪಾಲನ್ನು ಹೊಂದಿದೆ. ಈ ಎರಡೂ ಕಂಪನಿಗಳು ಜಂಟಿ ಉದ್ಯಮದಲ್ಲಿ ಅಲೋಕ್ ಇಂಡಸ್ಟ್ರೀಸ್ ಅನ್ನು ಹೊಂದಿವೆ.

    ಶಾಹಿದ್ ಕಪೂರ್​ಗೆ ಪ್ರೀತಿಯಲ್ಲಿ ಮೋಸ ಮಾಡಿದ ನಟಿಯರು: ಈ ಇಬ್ಬರು ಹಿರೋಯಿನ್​ಗಳು ಯಾರು ಗೊತ್ತೆ?

    ಚುನಾವಣೆ ಬೆಟ್ಟಿಂಗ್​ ಕುರಿತು ಬಾಂಡ್​ ಪೇಪರ್​ನಲ್ಲಿ ಅಗ್ರಿಮೆಂಟ್​: ಹೀಗೆ ಕಾನೂನುಬಾಹಿರ ಕೃತ್ಯ ಎಸಗಿದ್ದು ಇಬ್ಬರು ವಕೀಲರು!!

    ನೀನೆಲ್ಲೂ ಹೋಗಬಾರದು.. ಬಟ್ಟೆ ಬದಲಾಯಿಸು… ಸೆಟ್​ನಲ್ಲಿ ನಡೆದ ಕಿರುಕುಳ ಘಟನೆಯನ್ನು ಬಹಿರಂಗಗೊಳಿಸಿದ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts