More

    ಚುನಾವಣೆ ಬೆಟ್ಟಿಂಗ್​ ಕುರಿತು ಬಾಂಡ್​ ಪೇಪರ್​ನಲ್ಲಿ ಅಗ್ರಿಮೆಂಟ್​: ಹೀಗೆ ಕಾನೂನುಬಾಹಿರ ಕೃತ್ಯ ಎಸಗಿದ್ದು ಇಬ್ಬರು ವಕೀಲರು!!

    ಬುಡೌನ್: ಚುನಾವಣೆಯಲ್ಲಿ ಬಾಜಿ ಕಟ್ಟುವುದು ಭಾರತದಲ್ಲಿ ಕಾನೂನುಬಾಹಿರ. ಆದರೆ, ತಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಇಲ್ಲಿಬ್ಬರು 2 ಲಕ್ಷ ರೂಪಾಯಿಯ ಬೆಟ್ಟಿಂಗ್​ ಕಟ್ಟಿದ್ದಾರೆ. ಈ ಬೆಟ್ಟಿಂಗ್​ ಹಣದ ವಿವರಗಳ ಕುರಿತು ಬಾಂಡ್​ ಪೇಪರ್​ನಲ್ಲಿ ಒಪ್ಪಂದ ಮಾಡಿಕೊಂಡಿದ್ದಾರೆ. ಇದಕ್ಕೆ, ಸಾಕ್ಷಿದಾರರಿಂದಲೂ ಸಹಿ ಮಾಡಿಸಿದ್ದಾರೆ. ಅಚ್ಚರಿಯ ಸಂಗತಿ ಎಂದರೆ, ಈ ಬೆಟ್ಟಿಂಗ್​ ವ್ಯವಹಾರ ನಡೆದಿರುವುದು ಇಬ್ಬರು ವಕೀಲರ ನಡುವೆ.

    ಲೋಕಸಭೆ ಚುನಾವಣೆ ನಿರ್ಣಾಯಕ ಹಂತಕ್ಕೆ ಬಂದಿದ್ದು, ಮಂಗಳವಾರ 3ನೇ ಹಂತದ ಮತದಾನ ನಡೆಯಲಿದೆ. ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಇಬ್ಬರು ವಕೀಲರು ತಮ್ಮ ನೆಚ್ಚಿನ ಪಕ್ಷಗಳ ಅಭ್ಯರ್ಥಿಗಳ ಮೇಲೆ 2 ಲಕ್ಷ ರೂಪಾಯಿಯ ಬಾಜಿ ಕಟ್ಟಿದ್ದಾರೆ.

    ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ವಕೀಲ ಸತ್ಯೇಂದ್ರ ಪಾಲ್ ಮತ್ತು ವಕೀಲ ದಿವಾಕರ್ ವರ್ಮಾ ನಡುವೆ ಈ ಬೆಟ್ಟಿಂಗ್ ನಡೆದಿದೆ.

    ಸತ್ಯೇಂದ್ರ ಪಾಲ್ ಅವರು ಸಮಾಜವಾದಿ ಪಕ್ಷದ ಆದಿತ್ಯ ಯಾದವ್‌ ಅವರು ಗೆಲ್ಲುತ್ತಾರೆ ಎಂದು ಬೆಟ್ಟಿಂಗ್ ಕಟ್ಟಿದ್ದರೆ, ದಿವಾಕರ್ ವರ್ಮಾ ಅವರು ಬಿಜೆಪಿಯ ದಿಗ್ವಿಜಯ್ ಸಿಂಗ್ ಶಾಕ್ಯಾ ಅವರ ಗೆಲುವಿನ ಪರವಾಗಿ ಬಾಜಿ ಕಟ್ಟಿದ್ದಾರೆ.

    ಈ ಬೆಟ್ಟಿಂಗ್​ನಲ್ಲಿ ಸೋತವರು ಇನ್ನೊಬ್ಬ ವಕೀಲರಿಗೆ ರೂ. 2 ಲಕ್ಷ ನೀಡುವುದಾಗಿ ಅಫಿಡವಿಟ್‌ ಮಾಡಲಾಗಿದೆ. ಅಲ್ಲದೆ, ನಾಲ್ವರು ಸಾಕ್ಷಿಗಳ ಸಹಿಯೊಂದಿಗೆ ಒಪ್ಪಂದವನ್ನು ದಾಖಲಿಸಲಾಗಿದೆ.

    ಉತ್ತರ ಪ್ರದೇಶದ 10 ಲೋಕಸಭಾ ಸ್ಥಾನಗಳಿಗೆ ಮೂರನೇ ಹಂತದಲ್ಲಿ ಮೇ 7 ರಂದು ಚುನಾವಣೆ ನಡೆಯಲಿದೆ, ಈ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಯು ರಾಷ್ಟ್ರೀಯ ಲೋಕದಳದೊಂದಿಗೆ ಕೈಜೋಡಿಸಿದರೆ, ಸಮಾಜವಾದಿ ಪಕ್ಷವು ಚುನಾವಣೆಗಾಗಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ಬಹುಜನ ಸಮಾಜ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ.

    ನೀನೆಲ್ಲೂ ಹೋಗಬಾರದು.. ಬಟ್ಟೆ ಬದಲಾಯಿಸು… ಸೆಟ್​ನಲ್ಲಿ ನಡೆದ ಕಿರುಕುಳ ಘಟನೆಯನ್ನು ಬಹಿರಂಗಗೊಳಿಸಿದ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts