More

  ಕಾರಿಗೆ ಬಸ್ ಡಿಕ್ಕಿ, ಯುವಕ ಸಾವು

  ಮದ್ದೂರು: ತಾಲೂಕಿನ ಬೋರಾಪುರ ಗೇಟ್ ಬಳಿ (ಮದ್ದೂರು-ಕೊಳ್ಳೆಗಾಲ ಹೆದ್ದಾರಿ) ಸಾರಿಗೆ ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಸೋಮವಾರ ಡಿಕ್ಕಿ ಸಂಭವಿಸಿದ ಪರಿಣಾಮ ಕಾರು ಚಾಲಕ ಮೃತಪಟ್ಟು, ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ.

  ಮಳವಳ್ಳಿಯ ಪೇಟೆಬೀದಿಯ ನಿವಾಸಿ ಅಕ್ಷಯ್ (26) ಮೃತ ಯುವಕ. ಕಾರಿನಲ್ಲಿದ್ದ ಮಳವಳ್ಳಿ ಗ್ರಾಮದ ಮಧು ಮತ್ತು ಬಸವರಾಜು ಗಂಭೀರವಾಗಿ ಗಾಯಗೊಂಡಿದ್ದು, ಮನು ಹಾಗೂ ಮಾದೇಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್‌ಗೆ ದಾಖಲಿಸಲಾಗಿದೆ.

  ಮಳವಳ್ಳಿಯ ಅಕ್ಷಯ್ ಹಾಗೂ ನಾಲ್ವರು ಸ್ನೇಹಿತರು ಸೋಮವಾರ ಬೆಳಗ್ಗೆ ಚನ್ನಪಟ್ಣಣ ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು ವಾಪಸ್ ಕಾರಿನಲ್ಲಿ ಮಳವಳ್ಳಿಗೆ ತೆರೆಳುತ್ತಿದ್ದರು. ಈ ವೇಳೆ ಬೋರಾಪುರ ಗೇಟ್ ಬಳಿ ಮಳವಳ್ಳಿ ಕಡೆಯಿಂದ ಬಂದ ಸಾರಿಗೆ ಬಸ್, ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ಕೆಲಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.

  ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಆರ್.ಪ್ರಸಾದ್ ಹಾಗೂ ಸಿಬ್ಬಂದಿ ಸಾರ್ವಜನಿಕರಿಗೆ ಸಹಕಾರದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ನಂತರ ಬಸ್ ಹಾಗೂ ಚಾಲಕನನ್ನು ವಶಕ್ಕೆ ತೆಗೆದುಕೊಂಡು ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಬೇರೆ ಬಸ್‌ನಲ್ಲಿ ಹೋಗಲು ಅನುಕೂಲ ಮಾಡಿಕೊಟ್ಟರು.
  ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts