More

    ಮನೆ ಮನಗಳಿಗೆ ತಲುಪಿದ ಗ್ಯಾರಂಟಿ: ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಹೇಳಿಕೆ

    ಮೈಸೂರು: ಇಂದಿನ ತಾಂತ್ರಿಕ ಯುಗದಲ್ಲಿ ಅನ್‌ಲೈನ್ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಸವಲತ್ತು ತಲುಪಲು ಸಾರ್ವಜನಿಕ ಸೇವಾ ಕೇಂದ್ರಗಳು ಸೇತುವೆಯಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ತಿಳಿಸಿದರು.

    ದಿನೇಶ್ ಗುಂಡೂರಾವ್ ಅಭಿಮಾನಿ ಬಳಗದಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ವೃದ್ಧರಿಗೆ ಉಚಿತ ಸರ್ಕಾರದ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ಸ್ಥಾಪಿಸಿರುವ ಜನ ಸೇವಾ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

    ರಾಜ್ಯ ಸರ್ಕಾರದ ಪಂಚಗ್ಯಾರಂಟಿಗಳು ನೇರವಾಗಿ ಕರ್ನಾಟಕದ ಮನೆ ಮನಗಳಿಗೆ ತಲುಪಿವೆ. ಕರ್ನಾಟಕದ ಜನತೆಯನ್ನು ಹಸಿವು ಮುಕ್ತಗೊಳಿಸಿ ಬೆಳಕು ನೀಡುವ ಮೂಲಕ ಪ್ರತಿಮನೆಯ ತಾಯಿ ಯಜಮಾನಿಗೆ ಪ್ರೋತ್ಸಾಹವನ್ನ ನೀಡಿ ಯುವ ಪದವೀಧರರನ್ನು ರಕ್ಷಿಸುವಲ್ಲಿ ಸಿದ್ದರಾಮಯ್ಯ ಸರ್ಕಾರ ಯಶಸ್ಸು ಕಂಡಿದೆ. ಕೋವಿಡ್‌ನಿಂದ ಖಾಲಿಯಾಗಿದ್ದ ಪ್ರವಾಸಿತಾಣಗಳು ರಾಜ್ಯದ ದೇವಸ್ಥಾನಗಳು ಕಲ್ಯಾಣ ಮಂಟಪಗಳು ಮತ್ತೊಮ್ಮೆ ಜನಸೇರಲು ಶಕ್ತಿ ಯೋಜನೆ ನೆರವಾಗಿವೆ ಎಂದರು.

    ಬಳಗದ ಅಧ್ಯಕ್ಷ ವಿನಯ್ ಕಣಗಾಲ್ ಮಾತನಾಡಿದರು. ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್, ಕೆಪಿಸಿಸಿ ಕಾರ್ಯದರ್ಶಿ ವೀಣಾ, ಕಾಂಗ್ರೆಸ್ ನಗರ ಮಾಜಿ ಅಧ್ಯಕ್ಷ ಟಿ.ಎಸ್.ರವಿಶಂಕರ್, ಮುಖಂಡರಾದ ಸುಜಾತಾ ರಾವ್, ವಿನಯ್ ಕುಮಾರ್, ಶಿವಕುಮಾರ್, ರಾಜೇಶ್, ರಾಕೇಶ್, ರವಿಚಂದ್ರನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts