More

    ಶಿಕ್ಷಣದಿಂದ ದೇಶದ ಸಮಗ್ರ ಅಭಿವೃದ್ಧಿ

    ಲಕ್ಷ್ಮೇಶ್ವರ: ಶಿಕ್ಷಣದಿಂದ ವ್ಯಕ್ತಿಯಷ್ಟೇ ಅಲ್ಲ ದೇಶದ ಸರ್ವತೋಮುಖ ಅಭಿವೃದ್ಧಿ ಕೂಡ ಸಾಧ್ಯ. ಅದರಲ್ಲೂ ಹೆಣ್ಣು ಮಕ್ಕಳು ಶಿಕ್ಷಣವಂತರಾಗುವುದು ಪ್ರಗತಿಯ ದ್ಯೋತಕವೇ ಆಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
    ಪಟ್ಟಣದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗದ ಪಿಎಸ್‌ಬಿಡಿ ಬಾಲಕಿಯರ ಪ್ರೌಢಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಭೋಜನಾಲಯ ಕಟ್ಟಡ ನಿರ್ಮಾ ಭೂಮಿಪೂಜೆ, ಉಚಿತ ನೋಟ್‌ಬುಕ್ ವಿತರಣೆ, ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಶಾಲೆಯಲ್ಲಿ ಮಕ್ಕಳಿಗೆ ಪಠ್ಯ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳು, ನಾಡಿನ ಸಂಸ್ಕೃತಿ, ಸಂಪ್ರದಾಯ, ಗುರು-ಹಿರಿಯರ ಬಗ್ಗೆ ಗೌರವ ಭಾವನೆ ಮೂಡಿಸುವ ನೈತಿಕ ಶಿಕ್ಷಣ ನೀಡುವ ಅವಶ್ಯವಿದೆ. ಶಿಕ್ಷಣ ಅಂಕ ಕೇಂದ್ರಿತವಾಗಿರದೇ ಜ್ಞಾನಾಧಾರಿತ ಮತ್ತು ಜೀವನ ಶಿಕ್ಷಣ ಕಲಿಸಬೇಕು. ಈ ನಿಟ್ಟಿನಲ್ಲಿ ಪಟ್ಟಣದಲ್ಲಿ ಮಹಿಳೆಯರಿಂದಲೇ ನಡೆಯುತ್ತಿರುವ ತಾಯಿ ಪಾರ್ವತಿ ಮಕ್ಕಳ ಬಳಗದ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
    ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಸಾವಿರಾರು ಮಕ್ಕಳು ಓದುತ್ತಿರುವ ಶಾಲೆಯಲ್ಲಿನ ಭೋಜನಾಲಯದ ಕೊರತೆ ನೀಗಿಸಲು ಶಾಸಕರ 4 ಲಕ್ಷ ರೂ. ಮತ್ತು ವಿಧಾನ ಪರಿಷತ್ ಸದಸ್ಯರ 4 ಲಕ್ಷ ರೂ.ಗಳ ಅನುದಾನ ಕಲ್ಪಿಸಲಾಗಿದೆ. ದೇಶದ ಭವಿಷ್ಯದ ರೂಪಿಸುವ ಶ್ರೇಷ್ಠ, ಬುದ್ಧಿವಂತ ಮಕ್ಕಳನ್ನು ಸಮಾಜಕ್ಕೆ ಸಮರ್ಪಿಸುವ ಸೇವೆ ಮಾಡುವ ಶಿಕ್ಷಣ ಸಂಸ್ಥೆಗೆ ಮುಂದಿನ ದಿನಗಳಲ್ಲಿ ಅಗತ್ಯವಿರುವ ಇತರ ಸವಲತ್ತುಗಳನ್ನು ಕಲ್ಪಿಸಲು ಸಹಕಾರ ನೀಡುವುದಾಗಿ ಹೇಳಿದರು.
    ವಿಶ್ವಪರಿಸರ ದಿನಾಚರಣೆ ನಿಮಿತ್ತ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಶೈಕ್ಷಣಿಕ ಬಲವರ್ಧನೆಗಾಗಿ ಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಣೆ ಮಾಡಲಾಯಿತು. ಸಂಸ್ಥೆಯ ಅಧ್ಯಕ್ಷೆ ಸುವರ್ಣಬಾಯಿ ಬಹದ್ದೂರದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರೋಹಿಣಿಬಾಯಿ ಬಹದ್ದೂರದೇಸಾಯಿ, ಜಯಲಕ್ಷ್ಮೀ ಮಹಾಂತಶೆಟ್ಟರ, ಶಾರದಕ್ಕ ಮಹಾಂತಶೆಟ್ಟರ, ಬಿಇಒ ಎಚ್.ಎನ್. ನಾಯಕ್, ಪಪೂ ಕಾಲೇಜ್ ಪ್ರಾಚಾರ್ಯ ಜಾನಾನಾಯಕ, ಮುಖ್ಯಶಿಕ್ಷಕ ಜೆ.ಡಿ. ಲಮಾಣಿ, ಸಾವಂತ್ರೆಮ್ಮ ಹೂವಿನ ಮುಂತಾದವರಿದ್ದರು. ನಿರ್ಮಲಾ ಗೌರಿ, ಎಸ್.ಎಸ್. ಮಠದ, ಪಿ.ಎಲ್. ಪಾಟೀಲ ನಿರ್ವಹಿಸಿದರು.

    See also  ನೌಕರರ ವಿರುದ್ಧ ಲೋಕಾಯುಕ್ತಕ್ಕೆ ತನಿಖೆಗೆ ಕೊಡಲು ಷರತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts