More

  ದರ್ಶನ್ ಪತ್ನಿ ಇರೋ ಅಪಾರ್ಟ್‌ಮೆಂಟ್‌ನಲ್ಲಿ ನಿತ್ಯವೂ ನಡೆಯುತ್ತೆ ಕರ್ಮಕಾಂಡ : ಪ್ರಶಾಂತ್ ಸಂಬರಗಿ ಬಿಚ್ಚಿಟ್ರು ಸ್ಪೋಟಕ ಮಾಹಿತಿ

  ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟಡ ದರ್ಶನ್​, ಆಪ್ತೆ ಪವಿತ್ರಾ ಗೌಡ ಸೇರಿದಂತೆ 19 ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ದಿನ ಕಳೆದಂತೆ ಪ್ರಕರಣಕ್ಕೆ ಹೊಸ ತಿರುವು ಸಿಗುತ್ತಿದೆ. ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ವಿಚಾರ ಹಾಗೂ ಹೆಸರುಗಳು ಬೆಳಕಿಗೆ ಬರುತ್ತಿದ್ದು, ವಿಚಾರಣೆ ತೀವ್ರಗೊಂಡಂತೆ ಡಿ ಗ್ಯಾಂಗ್​ನ ಕರಾಳ ಮುಖ ಬಯಲಾಗುತ್ತಿದೆ.  ಸ್ಟಾರ್​ ನಟನೊಬ್ಬ ತನ್ನ ಅಭಿಮಾನಿ ಮೇಲೆಯೇ ಇಂತಹ ಹೇಯ ಕೃತ್ಯ ಎಸಗಿದ್ದಾನೆ ಎಂಬ ವಿಚಾರ ಯಾರಿಂದಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಮಾಜಕ್ಕೆ ಮಾದರಿಯಾಗಬೇಕಿದ್ದ ನಟನೇ ಇಂದು ತಲೆತಗ್ಗಿಸುವ ಕೆಲಸ ಮಾಡಿದ್ದು, ಈ ವಿಚಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

  ಇನ್ನೂ ಈ ಕುರಿತು ಮಾತನಾಡಿರುವ ಬಿಗ್​ ಬಾಸ್​ ಮಾಜಿ ಸ್ಪರ್ಧಿ ಪ್ರಶಾಂತ್​ ಸಂಬರಗಿ ಹೊಸ ಬಾಂಬ್​ ಒಂದನ್ನು ಸಿಡಿಸಿದ್ದು, ಅವರು ಆಡಿರುವ ಮಾತುಗಳು ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

  ಸುದ್ದಿ ಸಂಸ್ಥೆ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸಂಬರಗಿ, ರೇಣುಕಾಸ್ವಾಮಿ ಪತ್ನಿ ಸಹನಾಗೆ ಹಣ ಸಹಾಯ ಮಾಡಿ ಅಂತ ಮನವಿ ಮಾಡಿದ್ದೆ. ಈಗಾಗಲೇ ಸಾಕಷ್ಟು ಜನರು ಅವರ ಅಕೌಂಟ್‌ಗೆ ಹಣ ಹಾಕಿದ್ದಾರೆ. ರೇಣುಕಾಸ್ವಾಮಿ ಕೊಲೆಗೆ ನ್ಯಾಯ ಸಿಗಬೇಕು ಅಂತ ನಾನು ಮಾತನಾಡುತ್ತಿದ್ದೇನೆ. ರೇಣುಕಾ ಸ್ವಾಮಿಯ ಕುಟುಂಬದ ಪರವಾಗಿ ನಿಲ್ಲುವುದು ದರ್ಶನ್ ಅಭಿಮಾನಿಗಳ ಕರ್ತವ್ಯ ಎಂದು ಹೇಳಿದ್ದಾರೆ.

  vijayalakshmi darshan

  ಇದನ್ನೂ ಓದಿ: ನಟ ದರ್ಶನ್​ಗೆ ಎದುರಾಯ್ತು ಮತ್ತೊಂದು ಸಂಕಷ್ಟ; ಮನೆ ತೆರವಿಗೆ ಸೂಚಿಸ್ತಾ ಸರ್ಕಾರ?

  ಎಲ್ಲೋ ಒಂದು ಕಡೆ ದರ್ಶನ್ ಕೇಸ್ ಹಳ್ಳ ಹಿಡಿಯತ್ತೆ ಅಂತ ಡೌಟ್ ಇತ್ತು. ಆದರೆ ಬೆಂಗಳೂರು ಪೊಲೀಸರು ಎಲ್ಲರಿಗೂ ಒಂದೇ ಕಾನೂನು ಅಂತ ಸಾಬೀತುಪಡಿಸಿದ್ದು ನನಗೆ ತುಂಬಾ ಖುಷಿ ಕೊಟ್ಟಿದೆ. ನಟ ದರ್ಶನ್​ರ ಪತ್ನಿ ವಿಜಯಲಕ್ಷ್ಮೀ ಇರುವ ಅಪಾರ್ಟ್​ಮೆಂಟ್​ನಲ್ಲೇ ನಾನು ಕಳೆದ ಕೆಲ ವರ್ಷಗಳಿಂದಲೂ ವಾಸವಿದ್ದೇನೆ. ಒಂದು ಬಾರಿಯೂ ಅವರನ್ನು ನೋಡಿಲ್ಲ. ಅವರು ಹಗಲು ಬರುವುದೇ ಅಪರೂಪ, ಅವರೇನಿದ್ದರೂ ದೆವ್ವಗಳು ಓಡಾಡುವ ಸಮಯದಲ್ಲಿಯೇ ಬರುತ್ತಿದ್ದಿದ್ದು, ಅವರಿಂದಾಗಿ ಆಗಾಗ್ಗೆ ಅಪಾರ್ಟ್​ಮೆಂಟ್​ನಲ್ಲಿ ಸಮಸ್ಯೆ ಆಗುತ್ತಿತ್ತು.

  See also  ಕೋಟ್ಯಂತರ ರೂಪಾಯಿ ಆಸ್ತಿ ಒಡತಿ ಸೌಮ್ಯ ರೆಡ್ಡಿ ತಂದೆಯ ಬಳಿಯೇ ಸಾಲ ಮಾಡಿದ್ದೇಕೆ?

  ರಾತ್ರಿ ಬಂದರು ವಾಚ್​ಮ್ಯಾನ್​ಗೆ ಹೊಡೆದರು, ಆ ನಿಯಮ ಮುರಿದರು, ಅವರೊಟ್ಟಿಗೆ ಜಗಳ ಮಾಡಿದರು ಎಂಬ ವಿಚಾರಗಳೇ ಅವರ ಬಗ್ಗೆ ಕೇಳಿಸುತ್ತಿದ್ದವು. ನಮ್ಮ ಅಪಾರ್ಟ್​ಮೆಂಟ್ ಇರುವುದು ಚೆನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಆ ಠಾಣೆಯಲ್ಲಿ ಇವರ ಮೇಲೆ ಹತ್ತಕ್ಕೂ ಪ್ರಕರಣಗಳು ಇರಬಹುದೇನೋ, ದಾಖಲೆ ತೆಗೆಸಿದರೆ ಗೊತ್ತಾಗುತ್ತದೆ. ಇಷ್ಟೆಲ್ಲ ಆಗಿದ್ದರೂ ಸಹ ಒಮ್ಮೆಯೂ ಸಹ ಅವರನ್ನು ಹೋಗಿ ಮಾತನಾಡಿಸಬೇಕು ಎಂದು ನಮಗೆ ಅನ್ನಿಸಿಲ್ಲಾ.

  8 ವರ್ಷಗಳ ಕಾಲ ವಿತರಕನಾಗಿ, 2 ವರ್ಷ ರೇಡಿಯೋದಲ್ಲಿ, 1 ವರ್ಷ ಮಲ್ಟಿಪ್ಲೆಕ್ಸ್‌ನಲ್ಲಿ ನಾನು ಕೆಲಸ ಮಾಡಿದ್ದೇನೆ. ನಾನು ಸ್ವತಂತ್ರ ವಿತರಕ, ನಿರ್ಮಾಪಕ ಕೂಡ. ನನ್ನ 20 ವರ್ಷದ ಚಿತ್ರರಂಗದ ನಂಟಿನಲ್ಲಿ ನಾನು ದರ್ಶನ್ ಜೊತೆ ಸೆಲ್ಫಿ ತಗೊಂಡಿಲ್ಲ, ಸಿನಿಮಾ ಮಾಡಿಲ್ಲ, ಭೇಟಿಯೂ ಆಗಿಲ್ಲ. ಭಗವಂತನೇ ದುಷ್ಟರಿಂದ ನನ್ನನ್ನು ದೂರ ಇಟ್ಟಿರಬಹುದು ಎಂದು ಸುದ್ದಿ ಸಂಸ್ಥೆ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪ್ರಶಾಂತ್​ ಸಂಬರಗಿ ಹೇಳಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts