More

    ಹೋಮ್​ವರ್ಕ್ ಮಾಡಿಲ್ಲ ಎಂದು ಟೀಚರ್ ಹೊಡೆದ ಏಟಿಗೆ ವಿದ್ಯಾರ್ಥಿಯ ಜೀವವೇ ಹೋಯ್ತು!; ಹೊಡೆದಿದ್ದಾದರೂ ಹೇಗೆ?

    ಹೈದರಾಬಾದ್​: ಶಿಕ್ಷಕರು ಎಂದ ಮೇಲೆ ವಿದ್ಯಾರ್ಥಿಗಳಿಗೆ ದಂಡನೆ ಸಹಜ. ಸರಿಯಾಗಿ ಓದದಿದ್ದರೆ, ಬರೆಯದಿದ್ದರೆ, ವಿದ್ಯಾಭ್ಯಾಸ ಮಾಡದಿದ್ದರೆ ದಂಡಿಸಿಯಾದರೂ ಕಲಿಸಬೇಕಾಗುತ್ತದೆ. ಆದರೆ ಹೋಮ್​ವರ್ಕ್ ಮಾಡಿಲ್ಲ ಎಂಬ ಒಂದೇ ಕಾರಣಕ್ಕೆ ಇಲ್ಲೊಬ್ಬರು ಶಿಕ್ಷಕರು ಹೊಡೆದ ಏಟಿಗೆ ವಿದ್ಯಾರ್ಥಿಯ ಪ್ರಾಣವೇ ಹೋಗಿದೆ.

    ಹೈದರಾಬಾದ್​ನ ರಾಮನಾಥಪುರದ ವಿವೇಕನಗರ ಎಂಬಲ್ಲಿ ಇರುವ ಖಾಸಗಿ ಶಾಲೆಯೊಂದರಲ್ಲಿ ಈ ಪ್ರಕರಣ ನಡೆದಿದೆ. ಹೇಮಂತ್ ಎಂಬ ಐದು ವರ್ಷದ ಬಾಲಕ ಸಾವಿಗೀಡಾದ ವಿದ್ಯಾರ್ಥಿ. ಕಿಂಡರ್​​ಗಾರ್ಟನ್​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಈ ಬಾಲಕನಿಗೆ ಹೋಮ್​ವರ್ಕ್ ಮಾಡಲಿಲ್ಲ ಎಂದು ಶಿಕ್ಷಕರು ಹೊಡೆದಿದ್ದರು.

    ಹೋಮ್​ವರ್ಕ್ ಮಾಡಿಕೊಂಡು ಬರಲಿಲ್ಲ ಎಂಬ ಕಾರಣಕ್ಕೆ ಸಿಟ್ಟಾದ ಶಿಕ್ಷಕರು ಶನಿವಾರ ಸ್ಲೇಟ್​ನಿಂದ ಈ ವಿದ್ಯಾರ್ಥಿಯ ತಲೆಗೇ ಹೊಡೆದಿದ್ದರು. ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡಿದ್ದ ಈತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಚಿಂತಾಜನಕ ಪರಿಸ್ಥಿತಿಯಲ್ಲಿದ್ದ ಈತನಿಗೆ ನೀಡಿದ್ದ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಾವಿಗೀಡಾಗಿದ್ದಾನೆ.

    ವಿದ್ಯಾರ್ಥಿಯ ಕುಟುಂಬಸ್ಥರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ರೋಶಗೊಂಡಿದ್ದು, ಸೋಮವಾರ ಶಾಲೆಯ ಮುಂದೆ ಶವ ಇರಿಸಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. –ಏಜೆನ್ಸೀಸ್

    ಸೂಪರ್​ ಮಾರ್ಕೆಟ್​ನಲ್ಲಿ ಫ್ರಿಡ್ಜ್ ಡೋರ್ ತೆರೆಯುತ್ತಿದ್ದಂತೆ ಶಾಕ್​; ನಾಲ್ಕು ವರ್ಷದ ಬಾಲಕಿ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts