More

    ಹಕ್ಕು-ಕರ್ತವ್ಯಗಳ ಪಾಲನೆಗೆ ಪ್ರೇರೇಪಿಸಿ  ಎಚ್.ಬಿ. ಮಂಜುನಾಥ್ ಅನಿಸಿಕೆ  ವಿದ್ಯಾರ್ಥಿ ಸಂಘದ ಸಮಾರೋಪ

    ದಾವಣಗೆರೆ: ಸಂವಿಧಾನದತ್ತ ಹಕ್ಕುಗಳನ್ನು ಪಡೆಯುವಿಕೆ ಹಾಗೂ ಕರ್ತವ್ಯಗಳ ಪಾಲಿಸುವಿಕೆಗೆ ಸಹಚರರನ್ನು ಪ್ರೇರೇಪಿಸುವುದೂ ಕೂಡ ಉತ್ತಮ  ನಾಯಕತ್ವದ ಲಕ್ಷಣವಾಗಿದೆ ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ್ ಹೇಳಿದರು.
    ನಗರದ ಡಿರ್‌ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ 2023-24ನೇ ಸಾಲಿನ ವಿದ್ಯಾರ್ಥಿ ಸಂಘ ಹಾಗೂ ಕ್ರೀಡಾ ಸಂಘದ ಸಮರೋಪ ಸಮಾರಂಭದಲ್ಲಿ ಮಾತನಾಡಿದರು.
    ವಿದ್ಯಾರ್ಥಿ ದೆಸೆಯಲ್ಲಿ ಉತ್ತಮ ಮತ್ತು ಆದರ್ಶ ನಾಯಕತ್ವದ ಗುಣಗಳನ್ನು ರೂಢಿಸಿಕೊಳ್ಳಲು ವಿದ್ಯಾರ್ಥಿ ಸಂಘದಲ್ಲಿನ  ಪಾಲ್ಗೊಳ್ಳುವಿಕೆ ಸಹಕಾರಿಯಾಗಲಿದೆ ಎಂದರು.
    ತಾಂತ್ರಿಕ ಡಿಪ್ಲೊಮ ಹಾಗೂ ಪದವೀಧರರಾದವರು ಉನ್ನತ ಶಿಕ್ಷಣ ಹೊಂದುವ, ಉದ್ಯೋಗ ಪಡೆದುಕೊಳ್ಳುವ ಹಾಗೂ ಉದ್ಯಮಿಗಳಾಗಿ ಉದ್ಯೋಗದಾತರಾಗುವ ಸಾಮರ್ಥ್ಯ ಮತ್ತು ಅವಕಾಶವಿದೆ.
    ಸ್ವಸಾಮರ್ಥ್ಯದ ಅರಿತು ಮನಸ್ಥಿತಿಯನ್ನು ಪರಿವರ್ತನೆ ಮಾಡಿಕೊಂಡಲ್ಲಿ ಪರಿಸ್ಥಿತಿ ಅನುಕೂಲಕರವಾಗುತ್ತದೆ. ಇದಕ್ಕಾಗಿ ಯುವ ವಿದ್ಯಾರ್ಥಿಗಳ ಯೋಚನೆ ಮತ್ತು ಯೋಜನೆಗಳು ಸಮಾಜ, ರಾಷ್ಟ್ರ ಹಾಗೂ ಜಾಗತಿಕ ಹಿತದಷ್ಟು ವಿಸ್ತಾರ, ವಿಶಾಲ ದೃಷ್ಟಿ ಉಳ್ಳದ್ದಾಗಿರಬೇಕು ಎಂದು ಹೇಳಿದರು.
    ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ದಾದಾಪೀರ್ ನವಿಲೇಹಾಳ್ ಮಾತನಾಡಿ ಯುವಜನರು ಮೊಬೈಲ್‌ಗಳ ಸ್ಕ್ರೀನ್ ಸಮಯಕ್ಕೆ ದಾಸರಾಗದೆ ಗ್ರಂಥಗಳ ಓದಿನೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ಕೊಡಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧನೆ ಮಾಡಬೇಕೆಂದರೆ ಪರಿಶ್ರಮದೊಂದಿಗೆ ನೋವು ಸ್ವೀಕರಿಸಲೂ ಸಿದ್ಧರಿರಬೇಕು ಎಂದು ತಿಳಿಸಿದರು.
    ಕಾಲೇಜಿನ ಪ್ರಾಚಾರ್ಯ ಕೆ.ಜಿ. ನಿರಂಜನ ಮಾತನಾಡಿ ಸವಾಲುಗಳನ್ನು ಸ್ವೀಕರಿಸುವ ಸಂಕಲ್ಪ ಇಂದಿನ ಯುವಜನತೆಯಲ್ಲಿ ಕಡಿಮೆಯಾಗುತ್ತಿದೆ. ಜ್ಞಾನ ಹಾಗೂ ಕೌಶಲಗಳನ್ನು ಸದಾ ನವೀಕರಿಸಿಕೊಳ್ಳುತ್ತಿದ್ದರೆ ಸಾಧನೆ ಸಾಧ್ಯ, ಇದಕ್ಕೆ ಬುದ್ಧಿ-ಮನಸ್ಸುಗಳ ಹೊಂದಾಣಿಕೆ ಬೇಕು ಎಂದು ಹೇಳಿದರು.                    
    ಸಂಘದ ಪದಾಧಿಕಾರಿ ಎಚ್.ಕೆ.ಮಂಜಪ್ಪ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಕೆ. ಸಂತೋಷ್‌ಕುಮಾರ್, ಎಸ್. ಓಂಕಾರ್, ಸಿ.ಎನ್.ವಿಕಾಸ್, ಟಿ. ಪ್ರವೀಣ್, ಪಿ.ಲೇಖನಾ, ಎಚ್.ಎಸ್. ಗೌರಿ, ಭೂಮಿಕಾ ಇತರರಿದ್ದರು.
    ಗಗನಶ್ರೀ ಹಾಗೂ ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿದರು. ಶುಭಶ್ರೀ  ದೇಶಪಾಂಡೆ ಪ್ರಾರ್ಥನೆ ಹಾಡಿದರು. ಸಿ.ಆರ್. ವಿಶ್ವೇಶ್ವರ ಪ್ರಾಸ್ತಾವಿಕ ಮಾತನಾಡಿದರು. ಆರ್.ಆಕಾಶ್ ವಂದಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts