More

  ಇಬ್ಬರು ಮಕ್ಕಳನ್ನು ನೋಡಿಕೊಳ್ಳೋ ಆಯಾಗೆ 80 ಲಕ್ಷ ರೂ. ಸಂಬಳ ಕೊಡ್ತಾರಂತೆ!

  ನವದೆಹಲಿ: ಇಲ್ಲೊಂದು ಕೆಲಸಕ್ಕೆ ಕೊಡಲಿರುವ ಸಂಬಳದ ಮೊತ್ತ ಕೇಳಿದರೆ ಒಮ್ಮೆ ಅಚ್ಚರಿ ಆಗುವುದು ಸಹಜ. ಈ ಕೆಲಸಕ್ಕೆ ನಿಗದಿ ಮಾಡಿರುವ ಸಂಬಳ ಬರೋಬ್ಬರಿ 80 ಲಕ್ಷ ರೂಪಾಯಿ. ಅಂದಹಾಗೆ ಅದ್ಯಾವುದದು ಅಂಥ ಕೆಲಸ ಎಂಬ ಅಚ್ಚರಿಗೆ ಉತ್ತರ ಆಯಾ ಕೆಲಸ.

  ಅಮೆರಿಕದಲ್ಲಿರುವ ಅನಿವಾಸಿ ಭಾರತೀಯ ಉದ್ಯಮಿ ವಿವೇಕ್ ರಾಮಸ್ವಾಮಿ ತಮ್ಮ ಮನೆಯ ಆಯಾ ಕೆಲಸಕ್ಕೆ 80 ಲಕ್ಷ ರೂ. ವೇತನ ನೀಡಲಿರುವುದಾಗಿ ಘೋಷಿಸಿದ್ದಾರೆ. ಅಪೂರ್ವ ಅವರನ್ನು ಮದುವೆಯಾಗಿರುವ ಇವರಿಗೆ ಇಬ್ಬರು ಚಿಕ್ಕಮಕ್ಕಳಿದ್ದಾರೆ. ಆ ಮಕ್ಕಳನ್ನು ನೋಡಿಕೊಳ್ಳಲು 1,00,000 ಡಾಲರ್ ಕೊಡುವುದಾಗಿ ಘೋಷಿಸಿದ್ದಾರೆ.

  ಎಸ್ಟೇಟ್​​ಜಾಬ್ಸ್​.ಕಾಮ್ ಎಂಬ ಅಂತರ್ಜಾಲ ತಾಣದಲ್ಲಿ ಇಂಥದ್ದೊಂದು ಉದ್ಯೋಗದ ಕುರಿತು ಜಾಹೀರಾತು ಪ್ರಕಟಿಸಲಾಗಿದೆ. ಜಾಹೀರಾತಿನಲ್ಲಿ ನೀಡಿದವರ ಹೆಸರು ಬಹಿರಂಗಪಡಿಸದಿದ್ದರೂ ಮೂಲಗಳ ಪ್ರಕಾರ ಅದು ವಿವೇಕ್ ರಾಮಸ್ವಾಮಿ ಎಂಬ ಸುಳಿವು ಸಿಕ್ಕಿದೆ. ಈ ಉದ್ಯೋಗಕ್ಕೆ ಬರುವವರು ವಾರಕ್ಕೆ 84ರಿಂದ 96 ಗಂಟೆಗಳಷ್ಟು ಕಾಲ ಕೆಲಸ ಮಾಡಬೇಕಾಗುತ್ತದೆ. ಅವರಿಗೆ ವಾರಕ್ಕೆ ಒಂದು ರಜೆ ಇರುತ್ತದೆ ಎಂಬುದನ್ನು ತಿಳಿಸಲಾಗಿದೆ.

  ಅಮೆರಿಕದ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ ಅವರನ್ನು ಎದುರಿಸಲು ವಿವೇಕ್ ರಾಮಸ್ವಾಮಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮುಂಚೂಣಿಯಲ್ಲಿದ್ದಾರೆ.

  ಸಿನಿಮಾದ ಹಲವರಿಗೆ ಸಾಹಿತ್ಯದ ಅರಿವಿಲ್ಲ; ನೀವಂದ್ಕೊಂಡಷ್ಟು ಮೂರ್ಖರಲ್ಲ ಸಿನಿಮಾದವರು: ಸಾಹಿತಿ-ನಿರ್ದೇಶಕರ ಮಧ್ಯೆ ಜಾತಿಸಂಘರ್ಷ

  ಎಲಾನ್​ ಮಸ್ಕ್​ನ ಒಂದು ಸೆಕೆಂಡ್​ನ ಆದಾಯ ಎಷ್ಟು?; ಒಂದು ರಾತ್ರಿಯ ಸಂಪಾದನೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts