ಅವಳಿ ಮಕ್ಕಳ ಪ್ರಾಣ ಕಸಿದುಕೊಂಡಿತೇ ಐಸ್​ಕ್ರೀಮ್​? ಮಂಡ್ಯದಲ್ಲಿ ದುರ್ಘಟನೆ, ತಾಯಿಯೂ ಅಸ್ವಸ್ಥ

1 Min Read
Ice Cream

ಮಂಡ್ಯ: ಅನುಮಾನಾಸ್ಪದವಾಗಿ ಒಂದೂವರೆ ವರ್ಷದ ಅವಳಿ ಕಂದಮ್ಮಗಳು ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಯಿಯು ಕೂಡ ಅಸ್ವಸ್ಥಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ ಮಕ್ಕಳ ಹೆಸರು ತ್ರಿಶುಲ್ ಹಾಗೂ ತ್ರಿಶಾ. ಬೆಟ್ಟಹಳ್ಳಿ ಗ್ರಾಮದ ಪೂಜಾ ಹಾಗೂ ಪ್ರಸನ್ನ ದಂಪತಿಯ ಮಕ್ಕಳು. ನಿನ್ನೆ (ಏಪ್ರಿಲ್​ 17) ಮಧ್ಯಾಹ್ನ ತಳ್ಳುವ ಗಾಡಿಯಲ್ಲಿ ಮಾರಾಟ ಮಾಡುವ ಐಸ್​ಕ್ರೀಮ್​ ಖರೀದಿ ಮಾಡಿ ತಾಯಿ ಪೂಜಾ ಮಕ್ಕಳಿಗೆ ತಿನ್ನಿಸಿದ್ದರು. ಇದರ ಬೆನ್ನಲ್ಲೇ ಮಕ್ಕಳು ಅಸ್ವಸ್ಥಗೊಂಡರು ಎಂಬ ಆರೋಪ ಕೇಳಿಬಂದಿದೆ.

ಇದೇ ಗ್ರಾಮದಲ್ಲಿ ಬೇರೆ ಮಕ್ಕಳು ಕೂಡ ಅದೇ ಗಾಡಿಯಲ್ಲಿ ಖರೀದಿಸಿದ ಐಸ್​ಕ್ರೀಮ್​ ತಿಂದಿದ್ದಾರೆ. ಆದರೆ, ಬೇರೆ ಯಾರಿಗೂ ಈ ತೊಂದರೆ ಆಗಿಲ್ಲ. ಕಂದಮ್ಮಗಳ ಸಾವಿಗೆ ಕಾರಣ ಏನಿರಬಹುದು ಎಂಬುದು ಇದುವರೆಗೂ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ನಂತರ ನಿಖರ ಕಾರಣ ತಿಳಿಯಲಿದೆ. ಶವಗಳನ್ನು ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ತಾಯಿಯೂ ಕೂಡ ಐಸ್​ಕ್ರೀಮ್​ ತಿಂದು ಅಸ್ವಸ್ಥರಾಗಿದ್ದರು. ಅವರನ್ನು ಮಿಮ್ಸ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಯಾವಾಗ ವರ್ಜಿನಿಟಿ ಕಳೆದುಕೊಂಡೆ? ಮಲೈಕಾ ಕೇಳಿದ ಪ್ರಶ್ನೆಗೆ ಪುತ್ರ ಅರ್ಹಾನ್​ ಕೊಟ್ಟ ಉತ್ತರ ವೈರಲ್​

ಮನದ ನೋವನ್ನು ಕೈ ಮೇಲೆ ಬರೆದು ಬದುಕು ಅಂತ್ಯಗೊಳಿಸಿದ ಮಹಿಳೆ! ಗಂಡನ ಕಾಮದಾಹಕ್ಕೆ ಪತ್ನಿ ಬಲಿ

See also  ಮಾರಮ್ಮನ ಜಾತ್ರೆಗೆ ಬಂದವರು ಮಸಣಕ್ಕೆ: ಮಧುಗಿರಿಯಲ್ಲಿ ರಸ್ತೆ ಅಪಘಾತಕ್ಕೆ ಮೂವರು ಬಲಿ
Share This Article