More

    ಯಾವಾಗ ವರ್ಜಿನಿಟಿ ಕಳೆದುಕೊಂಡೆ? ಮಲೈಕಾ ಕೇಳಿದ ಪ್ರಶ್ನೆಗೆ ಪುತ್ರ ಅರ್ಹಾನ್​ ಕೊಟ್ಟ ಉತ್ತರ ವೈರಲ್​

    ನವದೆಹಲಿ: ಬಾಲಿವುಡ್​ ಬ್ಯೂಟಿ ಮಲೈಕಾ ಅರೋರಾ ಅವರು ತಮ್ಮ ಮಗ ಅರ್ಹಾನ್ ಬಳಿಯೇ ಸೆಕ್ಸ್​ ಬಗ್ಗೆ ಪ್ರಶ್ನೆ ಮಾಡಿರುವುದು ಎಲ್ಲರ ಹುಬ್ಬೇರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪುತ್ರನು ಕೂಡ ತನ್ನ ತಾಯಿಯ ಬಳಿ ನಿಮ್ಮ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

    ದಂಬ್​ ಬಿರಿಯಾನಿ ಹೆಸರಿನ ಟಾಕ್​ ಶೋನಲ್ಲಿ ಅಮ್ಮ-ಮಗನ ನಡುವೆ ಇಂಥದ್ದೊಂದು ಸಂಭಾಷಣೆ ನಡೆದಿದೆ. ಚಾನೆಲ್​ನ ಅಧಿಕೃತ ಪೇಜ್​ ಹಾಗೂ ಅರ್ಹಾನ್​ ಈ ಶೋನ ಟೀಸರ್​ ಶೇರ್​ ಮಾಡಿಕೊಂಡಿದ್ದಾರೆ. ಅದರಲ್ಲಿ “ನೀನು ಯಾವಾಗ ವರ್ಜಿನಿಟಿ ಕಳೆದುಕೊಂಡೆ” ಎಂದು ಮಲೈಕಾ, ಪುತ್ರ ಅರ್ಹಾನ್​ನನ್ನು ಪ್ರಶ್ನಿಸುತ್ತಾರೆ. ಪ್ರಶ್ನೆ ಕೇಳಿ ಬೆರಗಾಗುವ ಅರ್ಹಾನ್​ “ವಾವ್​” ಎಂದು ಪ್ರತಿಕ್ರಿಯಿಸುತ್ತಾನೆ.

    ಇದಾದ ಬಳಿಕ ಅರ್ಹಾನ್​, ನೀವು ಸಾಮಾಜಿಕ ಸ್ಥಾನಮಾನ ಹುಡುಕಿಕೊಂಡು ಹೊಗುವ ವ್ಯಕ್ತಿಯೇ? ಎಂದು ತಾಯಿಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸುವ ಮಲೈಕಾ ನಾನು ಅಂಥವಳಲ್ಲ ಎನ್ನುತ್ತಾರೆ. ನಿನ್ನ ಕೈ ತೋರಿಸು ತಾಯಿ. ನೀವು ಯಾವಾಗ ಮದುವೆಯಾಗುತ್ತೀರಿ ಎಂಬುದು ನನ್ನ ಮುಂದಿನ ಪ್ರಶ್ನೆ? ಎಂದು ಅರ್ಹಾನ್​, ತಾಯಿ ಮಲೈಕಾರನ್ನು ಕೇಳುವ ಮೂಲಕ ಟೀಸರ್​ ಕೊನೆಯಾಗುತ್ತದೆ. ಇದೀಗ ಈ ಟೀಸರ್​ ಭಾರಿ ವೈರಲ್​ ಆಗುತ್ತಿದ್ದು, ಫುಲ್​ ಎಪಿಸೋಡ್​ಗಾಗಿ ಕಾಯುತ್ತಿದ್ದಾರೆ.

    ಅಂದಹಾಗೆ ಅರ್ಹಾನ್​, ಮಲೈಕಾ ಅವರ ಮಾಜಿ ಪತಿ, ನಟ ಹಾಗೂ ನಿರ್ಮಾಪಕ ಅರ್ಬಾಜ್​ ಖಾನ್ ಪುತ್ರ. ಮಲೈಕಾ ಮತ್ತು ಅರ್ಬಾಜ್​ 19 ವರ್ಷಗಳ ಸಾಂಸಾರಿಕ ಜೀವನ ನಡೆಸಿ, 2017ರಲ್ಲಿ ಡಿವೋರ್ಸ್​ ಮಾಡಿಕೊಂಡರು. ಇಬ್ಬರು ಅರ್ಹಾನ್​ಗೆ ಸಹಪಾಲಕರಾಗಿ ಮುಂದುವರಿದಿದ್ದಾರೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ಅರ್ಬಾಜ್​ ಖಾನ್​ ಅವರು ಮೇಕಪ್​ ಆರ್ಟಿಸ್ಟ್​ ಶುರಾ ಖಾನ್​ ಎಂಬಾಕೆಯನ್ನು ಮದುವೆಯಾದರು. ಈ ಮದುವೆ ಸಮಾರಂಭದಲ್ಲಿ ಅರ್ಹಾನ್​ ಕೂಡ ಭಾಗಿಯಾಗಿದ್ದರು.

    ಮಲೈಕಾ ಅರೋರಾ ಅವರು ಜನಪ್ರಿಯ ಹಾಡುಗಳಾದ ಚೈಯಾ ಚೈಯಾ, ಮುನ್ನಿ ಬದ್ನಾಮ್ ಹುಯಿ, ಅನಾರ್ಕಲಿ ಡಿಸ್ಕೋ ಚಾಲಿ ಮತ್ತು ಹಲೋ ಹಲೋ ಇತರ ಅನೇಕ ಹಾಡುಗಳಿಗೆ ಸೊಂಟ ಬಳಕಿಸುವ ಮೂಲಕ ಹೆಸರುವಾಸಿಯಾಗಿದ್ದಾರೆ. ಮಾಜಿ ಮಾಡೆಲ್ ಆಗಿರುವ ಮಲೈಕಾ ಕೂಡ ವಿಜೆ ಸಹ ಆಗಿದ್ದರು. ಮಲೈಕಾ ಅವರು ಭಾರತದ ಅತ್ಯುತ್ತಮ ಡಾನ್ಸರ್​. ನಾಚ್ ಬಲಿಯೆ, ಝಲಕ್ ದಿಖ್ಲಾ ಜಾ ಮತ್ತು ಜರಾ ನಚ್ಕೆ ದಿಖಾ ಸೇರಿದಂತೆ ಕೆಲ ನೃತ್ಯ ಕಾರ್ಯಕ್ರಮಗಳಲ್ಲಿ ಜಡ್ಜ್​ ಆಗಿ ಭಾಗವಹಿಸಿದ್ದಾರೆ. ಇಂಡಿಯಾಸ್ ಗಾಟ್ ಟ್ಯಾಲೆಂಟ್ ಮತ್ತು ಸೂಪರ್ ಮಾಡೆಲ್ ಆಫ್ ದಿ ಇಯರ್​ನಂತಹ ಕಾರ್ಯಕ್ರಮಗಳಿಗೂ ತೀರ್ಪುಗಾರರಾಗಿದ್ದರು. (ಏಜೆನ್ಸೀಸ್​)

    ಎರಡನೇ ಮದ್ವೆ ಆಗಬಾರದಿತ್ತು! ಪಶ್ಚಾತಾಪದ ಮಾತುಗಳನ್ನಾಡಿ ಕಣ್ಣೀರಿಟ್ಟಿದ್ದರು ದ್ವಾರಕೀಶ್​

    ಅರ್ಜುನ್​ ಸರ್ಜಾರ ಕಿರಿಯ ಪುತ್ರಿಯನ್ನು ನೋಡಿದ್ದೀರಾ? ಸಿಕ್ಕಾಪಟ್ಟೆ ಬೋಲ್ಡ್​ ಅಂಜನಾ ಸರ್ಜಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts