More

    ಅರ್ಜುನ್​ ಸರ್ಜಾರ ಕಿರಿಯ ಪುತ್ರಿಯನ್ನು ನೋಡಿದ್ದೀರಾ? ಸಿಕ್ಕಾಪಟ್ಟೆ ಬೋಲ್ಡ್​ ಅಂಜನಾ ಸರ್ಜಾ!

    ಚೆನ್ನೈ: ಆ್ಯಕ್ಸನ್​ ಕಿಂಗ್​ ಅರ್ಜುನ್​ ಸರ್ಜಾ ಬಗ್ಗೆ ಕನ್ನಡಿಗರಿಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ಮೂಲತಃ ಕನ್ನಡದವರೇ ಆದ ಅರ್ಜುನ್​ ಹೆಚ್ಚಾಗಿ ಮಿಂಚಿದ್ದು ಮಾತ್ರ ಕಾಲಿವುಡ್​ನಲ್ಲಿ. ಅದ್ಯ ಅರ್ಜುನ್​ ಕುಟುಂಬ ಚೆನ್ನೈನಲ್ಲೇ ನೆಲೆಸಿದೆ. ಹೀಗಿದ್ದರೂ ಅರ್ಜುನ್​ ಅವರಿಗೆ ಕನ್ನಡದ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಆಗಾಗ ಕನ್ನಡ ಸಿನಿಮಾಗಳನ್ನು ಸಹ ಮಾಡುತ್ತಿರುತ್ತಾರೆ.

    View this post on Instagram

    A post shared by Anjana Arjun (@anj204_)

    ಅರ್ಜುನ್​ ಸರ್ಜಾರ ಅವರ ಪುತ್ರಿ ಐಶ್ವರ್ಯಾ ಕೂಡ ಓರ್ವ ನಟಿ. ನಟ ವಿಶಾಲ್​ ಅಭಿನಯದ ಪಟ್ಟತ್ತು ಆನೈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಆದರೆ, ಐಶ್ವರ್ಯಾಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಹೀಗಾಗಿ ಅವರ ಸಿನಿ ಜರ್ನಿ ಮೂರೇ ಸಿನಿಮಾಗೆ ಸೀಮಿತವಾಯಿತು. ಪಟ್ಟತ್ತು ಆನೈ ಹೊರತುಪಡಿಸಿ ಸೊಲ್ಲಿವಿಧವ ಎಂಬ ಮತ್ತೊಂದು ತಮಿಳು ಸಿನಿಮಾದಲ್ಲಿ ಐಶ್ವರ್ಯಾ ನಟನೆ ಮಾಡಿದ್ದಾರೆ. ಕನ್ನಡದಲ್ಲಿ ನಟಿಸಿದ್ದು ಒಂದೇ ಸಿನಿಮಾ. ಪ್ರೇಮ ಬರಹ ಸಿನಿಮಾದಲ್ಲಿ ನಟ ಚಂದನ್​ ಜತೆ ನಟಿಸಿದರು. ಈ ಚಿತ್ರವನ್ನು ಸ್ವತಃ ಅರ್ಜುನ್​ ಸರ್ಜಾ ಅವರೇ ನಿರ್ದೇಶನ ಮಾಡಿದರು. ಸದ್ಯ ಐಶ್ವರ್ಯಾ ಅವರು ತಮಿಳಿನ ಖ್ಯಾತ ಹಾಸ್ಯ ನಟ ತಂಬಿ ರಾಮಯ್ಯ ಅವರ ಪುತ್ರ ಹಾಗೂ ನಟ ಉಮಾಪತಿ ರಾಮಯ್ಯರನ್ನು ಮದುವೆಯಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.

    View this post on Instagram

    A post shared by Anjana Arjun (@anj204_)

    ಅಂದಹಾಗೆ ಅರ್ಜುನ್​ ಸರ್ಜಾಗೆ ಮತ್ತೊಬ್ಬ ಮಗಳಿರುವುದು ಬಹುತೇಕರಿಗೆ ತಿಳಿದಿಲ್ಲ. ಹೌದು, ಅರ್ಜುನ್​ಗೆ ಅಂಜನಾ ಹೆಸರಿನ ಮತ್ತೊಬ್ಬ ಮಗಳಿದ್ದಾಳೆ. ಈಕೆ ಕುಟುಂಬದ ಕಿರಿಯ ಮಗಳು. ಆದರೆ, ಅಂಜನಾ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ. ಹೀಗಿದ್ದರೂ ತಮ್ಮ ಬೋಲ್ಡ್​ ಲುಕ್​ನಿಂದಲೇ ಅನೇಕರ ಗಮನ ಸೆಳೆದಿದ್ದಾರೆ.

    Arjun Sarja 1

    ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಅಂಜನಾ ಆಗಾಗ ಹಾಟ್​ ಫೋಟೋಗಳನ್ನು ಹರಿಬಿಡುತ್ತಾರೆ. ಈ ಮೂಲಕ ನೆಟ್ಟಿಗರ ಗಮನವನ್ನು ಸೆಳೆಯುತ್ತಿರುತ್ತಾರೆ.

    View this post on Instagram

    A post shared by Anjana Arjun (@anj204_)

    ಅಂದಹಾಗೆ ಅರ್ಜುನ್​ ಸರ್ಜಾ, ಕನ್ನಡದ ಪ್ರಸಿದ್ಧ ಕಲಾವಿದರಾದ ಶಕ್ತಿ ಪ್ರಸಾದ್ ಅವರ ಮಗ. ಕನ್ನಡ ಚಿತ್ರರಂಗದಲ್ಲಿ ಬಾಲ ನಟ, ನಾಯಕ ನಟರಾಗಿ ತಮ್ಮ ಪಾತ್ರ ನಿರ್ವಹಿಸಿದ್ದಾರೆ. ಆದರೆ ತಮಿಳು ಚಿತ್ರರಂಗದಲ್ಲಿ ಹೆಚ್ಚು ಅವಕಾಶಗಳು ದೊರೆತ ಕಾರಣ, ಅಲ್ಲಿ ಜನಪ್ರಿಯ ನಾಯಕ ನಟ ಮತ್ತು ನಿರ್ದೇಶಕರಾಗಿ ಹೆಸರು ಗಳಿಸಿದ್ದಾರೆ.

    Arjun Sarja 2

    ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಹೀಗೆ ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ. ಅರ್ಜುನ್​ ಸರ್ಜಾ ಅವರ ಮಡದಿಯ ಹೆಸರು ನಿವೇದಿತ ಅರ್ಜುನ್. ಇವರು ಶಿವರಾಜ್​ಕುಮಾರ್​ ಅಭಿನಯದ ರಥಸಪ್ತಮಿ ಚಿತ್ರದಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)

    View this post on Instagram

    A post shared by Anjana Arjun (@anj204_)

    ಟ್ರಾವಿಸ್​​​ ಹೆಡ್​ ವಿನೂತನ ಶತಕ ಆಚರಣೆಯ ಹಿಂದಿರುವ ಅರ್ಥ ಗೊತ್ತಾ? ಆರ್​ಸಿಬಿ ವಿರುದ್ಧದ ಸೇಡಿಗಿದೆ ಲಿಂಕ್​!

    ಯುಪಿಎಸ್ಸಿ ಕರುನಾಡು ಖುಷಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts