More

    ಈ ಮಾತ್ರೆಗಳನ್ನು ನೀವು ತಿನ್ನೋದು ಸಹಜ; ಆದರೆ ಇದರ ಅಡ್ಡಪರಿಣಾಮಗಳು ಒಂದೆರಡಲ್ಲ!

    ಬೆಂಗಳೂರು: ಸಣ್ಣ ತಲೆನೋವು, ಮೈಕೈನೋವು, ಇಲ್ಲವೇ ಜ್ವರ ಬಂದರೂ ಸಾಕು.. ಜನರು ಈ ಮಾತ್ರೆ ತೆಗೆದುಕೊಂಡು ಪರಿಹಾರ ಪಡೆದುಕೊಳ್ಳುತ್ತಾರೆ. ಅದರಲ್ಲೂ ಈಗ ದೇಶದಲ್ಲಿ ಹಲವೆಡೆ ಮಾತ್ರವಲ್ಲ ರಾಜ್ಯದಲ್ಲೂ ಡೆಂಘೀ ರೋಗ ಹೆಚ್ಚಾಗಿರುವ ಸಂದರ್ಭದಲ್ಲಿ ಈ ಮಾತ್ರೆಯ ಬಳಕೆ ಕೂಡ ಹೆಚ್ಚೇ ಎನ್ನಬಹುದು.

    ಅಂದಹಾಗೆ ಇದು ಬೇರೆ ಯಾವುದೂ ಅಲ್ಲ, ಪ್ಯಾರಸಿಟಮಾಲ್. ಕೋವಿಡ್​ ಟೈಮ್​ನಲ್ಲಿ ಹೆಚ್ಚಾಗಿ ಬಳಸಲ್ಪಟ್ಟ ಡೋಲೋ ಮಾತ್ರೆಗಳಲ್ಲೂ ಇರುವುದು ಇದೇ. ಸಾಮಾನ್ಯವಾಗಿ ಬಹುತೇಕ ಎಲ್ಲ ತಲೆನೋವು, ಜ್ವರದ ಮಾತ್ರೆಗಳಲ್ಲಿ ಪ್ಯಾರಸಿಟಮಾಲ್ ಇರುತ್ತದೆ. ಇದರಿಂದ ಕ್ಷಿಪ್ರ ಅಥವಾ ತಾತ್ಕಾಲಿಕ ಉಪಶಮನ ಸಿಗುವುದೇನೋ ನಿಜ. ಆದರೆ, ಇದರಿಂದ ಬಹಳಷ್ಟು ಅಡ್ಡಪರಿಣಾಮಗಳು ಉಂಟಾಗುವುದು ಕೂಡ ಇದೆ.

    ಭಾರತದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ನೋವು ನಿವಾರಕಗಳ ಬದಲು ಪ್ಯಾರಸಿಟಮಾಲ್ ಬಳಸುವಂತೆ ಆರೋಗ್ಯ ಅಧಿಕಾರಿಗಳು ರೋಗಿಗಳಿಗೆ ಸಲಹೆ ನೀಡಿದ್ದಾರೆ. ರೋಗಿ ಹೆಚ್ಚಿನ ಜ್ವರ, ಮೈಕೈ ನೋವು ಅಥವಾ ವಾಂತಿಯಂತಹ ರೋಗಲಕ್ಷಣಗಳನ್ನು ಹೊಂದಿರುವಾಗ ಪ್ಯಾರಸಿಟಮಾಲ್ ತೆಗೆದುಕೊಳ್ಳಬಹುದು. ಇದು ಡೆಂಘೀ ರೋಗಿಗಳಿಗೆ ಸುರಕ್ಷಿತವೆಂದು ಪರಿಗಣಿಸಲಾಗಿದೆ ಹಾಗೂ ಜ್ವರ ಮತ್ತಿತರ ಸಂಬಂಧಿತ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎನ್ನಲಾಗಿದೆ. ಪ್ಯಾರಸಿಟಮಾಲ್ ಡೆಂಘೀ ರೋಗಿಗಳ ಪ್ಲೇಟ್​ಲೆಟ್​ ಪ್ರಮಾಣದ ಮೇಲೆ ಪರಿಣಾಮ ಬೀರುವುದಿಲ್ಲ ಎಂದೂ ವರದಿಯಾಗಿದೆ.

    ಇದನ್ನೂ ಓದಿ: ತೆರೆ ಮೇಲೂ ಕಾಣಿಸಿಕೊಳ್ಳಲಿದ್ದಾರೆ ‘ರಾಮಾ ರಾಮಾ ರೇ’ ಸತ್ಯಪ್ರಕಾಶ್; ಅವರಿನ್ನು ನಟ-ನಿರ್ಮಾಪಕ-ವಿತರಕ-ನಿರ್ದೇಶಕ

    ಆದಾಗ್ಯೂ, ಪ್ಯಾರಸಿಟಮಾಲ್ ಮಾತ್ರೆಗಳನ್ನು ಪದೇಪದೆ ತೆಗೆದುಕೊಂಡರೆ ಅಡ್ಡಪರಿಣಾಮ ಖಚಿತ. ಇತರ ಯಾವುದೇ ಔಷಧಗಳಂತೆ ಪ್ಯಾರಸಿಟಮಾಲ್​ನಿಂದಲೂ ಅಡ್ಡಪರಿಣಾಮಗಳು ಇವೆ. ಈ ಮಾತ್ರೆ ನೋವಿನ ಕಾರಣವನ್ನು ಗುಣಪಡಿಸುವುದಿಲ್ಲ ಆದರೆ ನೋವನ್ನು ಕಡಿಮೆ ಮಾಡುತ್ತದೆ ಅಷ್ಟೇ. ತಲೆನೋವು, ಮೈಗ್ರೇನ್ ಮತ್ತು ಮುಟ್ಟಿನ ನೋವಿಗೆ ಸಾಮಾನ್ಯವಾಗಿ ಇದನ್ನು ಬಳಸಲಾಗುತ್ತದೆ. ಕಡಿಮೆಯಾದ ನೋವು ಮರುಕಳಿಸಿದಾಗ ಜನರು ಮತ್ತೆ ಇದನ್ನು ತೆಗೆದುಕೊಳ್ಳುತ್ತಾರೆ. ಈ ಮೂಲಕ ಹಲವಾರು ಪ್ಯಾರಸಿಟಮಾಲ್ ಮಾತ್ರೆಗಳು ದೇಹವನ್ನು ಸೇರಿರುತ್ತವೆ.

    ಪ್ಯಾರಸಿಟಮಾಲ್ ಮಾತ್ರೆಗಳನ್ನು ತಿನ್ನುವುದರಿಂದ ಉಂಟಾಗುವ ಸಾಮಾನ್ಯ ಅಡ್ಡಪರಿಣಾಮಗಳೆಂದರೆ ಮಂಪರು, ದಣಿವು, ದದ್ದು ಮತ್ತು ತುರಿಕೆ. ಪ್ಯಾರಸಿಟಮಾಲ್ ಮಾತ್ರೆಗಳನ್ನು ದೀರ್ಘಕಾಲದವರೆಗೆ ಸೇವಿಸುತ್ತಿದ್ದರೆ ದಣಿವು, ಉಸಿರಾಟದ ತೊಂದರೆಗಳು ಉಂಟಾಗಬಹುದು. ಬೆರಳುಗಳು ಮತ್ತು ತುಟಿಗಳು ನೀಲಿ ಬಣ್ಣಕ್ಕೆ ತಿರುಗಬಹುದು. ರಕ್ತಹೀನತೆ ಉಂಟಾಗಬಹುದು. ಯಕೃತ್ತು ಮತ್ತು ಮೂತ್ರಪಿಂಡಗಳಿಗೆ ಸಮಸ್ಯೆ ಆಗಬಹುದು. ಅಧಿಕ ರಕ್ತದೊತ್ತಡ ಹೊಂದಿವರಾಗಿದ್ದರೆ ಹೃದ್ರೋಗ ಮತ್ತು ಪಾರ್ಶ್ವವಾಯುವಿಗೂ ಕಾರಣವಾಗಬಹುದು. ಪ್ಯಾರಸಿಟಮಾಲ್ ಅತಿಯಾದ ಸೇವನೆಯು ಹೊಟ್ಟೆನೋವು, ವಾಕರಿಕೆ, ವಾಂತಿ ಮಾತ್ರವಲ್ಲದೆ ಕೆಲವೊಮ್ಮೆ ಕೋಮಾಗೆ ಕಾರಣವಾಗಬಹುದು. ಹೀಗಾಗಿ ಸಾರ್ವಜನಿಕರು ವೈದ್ಯರ ಸಲಹೆ ಮೇರೆಗೇ ಇದನ್ನು ಬಳಸುವುದು ಸೂಕ್ತ.

    ಸಿನಿಮಾದ ಹಲವರಿಗೆ ಸಾಹಿತ್ಯದ ಅರಿವಿಲ್ಲ; ನೀವಂದ್ಕೊಂಡಷ್ಟು ಮೂರ್ಖರಲ್ಲ ಸಿನಿಮಾದವರು: ಸಾಹಿತಿ-ನಿರ್ದೇಶಕರ ಮಧ್ಯೆ ಜಾತಿಸಂಘರ್ಷ

    ಎಲಾನ್​ ಮಸ್ಕ್​ನ ಒಂದು ಸೆಕೆಂಡ್​ನ ಆದಾಯ ಎಷ್ಟು?; ಒಂದು ರಾತ್ರಿಯ ಸಂಪಾದನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts