More

    19ರ ಸಣ್ಣ ವಯಸ್ಸಿನಲ್ಲಿಯೇ ‘ದಂಗಲ್’ ನಟಿ ಸುಹಾನಿ ಸಾವನ್ನಪ್ಪಿದ್ದೇಕೆ? ಕಾಲು ನೋವಿಗೆ ಸೇವಿಸಿದ ಸ್ಟೀರಾಯ್ಡ್​ ಬಲಿ ತೆಗೆದುಕೊಂಡಿತೆ?

    ​ನವದೆಹಲಿ: ಅಮೀರ್​ಖಾನ್​ ನಟಿಸಿದ ಜನಪ್ರಿಯ ಚಿತ್ರ ‘ದಂಗಲ್’ನಲ್ಲಿ ಬಬಿತಾ ಕುಮಾರಿ ಪಾತ್ರ ನಿರ್ವಹಿಸಿದ್ದ ಸುಹಾನಿ ಭಟ್ನಾಗರ್​ ಬಾಲ ನಟಿಯಾಗಿ ಸ್ಟಾರ್​ ಪಟ್ಟ ಗಳಿಸಿದ್ದರು. ನಟನೆಯಲ್ಲಿ ಮೋಡಿದ ಮಾಡಿದ್ದ ಈ ಬಾಲ ನಟಿ 19ರ ಇಳಿ ವಯಸ್ಸಿನಲ್ಲಿಯೇ ಸಾವನ್ನಪ್ಪುವ ಮೂಲಕ ಚಿತ್ರರಂಗದ ಉದಯೋನ್ಮುಖ ತಾರೆಯೊಂದು ಕಣ್ಮರೆಯಾಗಿದೆ.

    ‘ದಂಗಲ್’ ಚಿತ್ರದಲ್ಲಿ ಯುವ ಬಬಿತಾ ಕುಮಾರಿ ಫೋಗಟ್ ಪಾತ್ರವನ್ನು ನಿರ್ವಹಿಸಿದ ಸುಹಾನಿ ಭಟ್ನಾಗರ್ ಫೆಬ್ರವರಿ 16 ರಂದು ದೆಹಲಿಯಲ್ಲಿ ನಿಧನರಾಗಿದ್ದಾರೆ. ಕಾಲಿನ ಮೂಳೆ ಮುರಿತದ ಕಾರಣಕ್ಕಾಗಿ ಸೇವಿಸಿದ ಔಷಧಿಯ ಅಡ್ಡ ಪರಿಣಾಮ ಬೀರಿದ್ದರಿಂದ ಈ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ.

    “ನಮ್ಮ ಸುಹಾನಿ ನಿಧನದ ಸುದ್ದಿ ಕೇಳಿ ನಮಗೆ ತುಂಬಾ ದುಃಖವಾಗಿದೆ. ಅವರ ತಾಯಿ ಪೂಜಾಜಿ ಮತ್ತು ಇಡೀ ಕುಟುಂಬಕ್ಕೆ ನಮ್ಮ ಹೃತ್ಪೂರ್ವಕ ಸಂತಾಪಗಳು. ಅಂತಹ ಪ್ರತಿಭಾವಂತ ಯುವತಿ, ಅಂತಹ ತಂಡದ ಆಟಗಾರ್ತಿ, ದಂಗಲ್ ಸುಹಾನಿ ಇಲ್ಲದೆ ಅಪೂರ್ಣವಾಗಿದ್ದೇವೆ. ಸುಹಾನಿ, ನೀವು ಯಾವಾಗಲೂ ನಮ್ಮ ಹೃದಯದಲ್ಲಿ ನಕ್ಷತ್ರವಾಗಿ ಉಳಿಯುತ್ತೀರಿ. ನಿಮಗೆ ಚಿರಶಾಂತಿ ದೊರೆಯಲಿ” ಎಂದು ಅಮೀರ್​ ಖಾನ್​ ಪ್ರೊಡಕ್ಷನ್​ ವತಿಯಿಂದ ಪೋಸ್ಟ್​ ಮಾಡಲಾಗಿದೆ.

    ‘ದಂಗಲ್’ ಚಿತ್ರದ ನಿರ್ದೇಶಕ ನಿತೇಶ್ ತಿವಾರಿ, “ಸುಹಾನಿ ಅವರ ನಿಧನವು ಸಂಪೂರ್ಣ ಆಘಾತಕಾರಿ ಮತ್ತು ಹೃದಯ ವಿದ್ರಾವಕವಾಗಿದೆ. ಅವರ ಕುಟುಂಬಕ್ಕೆ ನನ್ನ ಆಸಂತಾಪಗಳು” ಎಂದು ವಿಷಾದಿಸಿದ್ದಾರೆ.

    ಫೆಬ್ರವರಿ 17 ರಂದು ಸುಹಾನಿ ಅವರ ಪಾರ್ಥಿವ ಶರೀರವನ್ನು ಅಂತ್ಯಸಂಸ್ಕಾರ ಮಾಡಲಾಯಿತು.

    ಈ ನಟಿಯು ಡರ್ಮಟೊಮಿಯೊಸಿಟಿಸ್ (ಸ್ನಾಯು ದೌರ್ಬಲ್ಯ ಮತ್ತು ಚರ್ಮದ ದದ್ದುಗಳಿಂದ ಗುರುತಿಸಲ್ಪಟ್ಟ ಉರಿಯೂತದ ಕಾಯಿಲೆ) ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದರು. ಅವಳ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಿದ ಅವಳ ಸ್ಥಿತಿಗೆ ಏಕೈಕ ಚಿಕಿತ್ಸೆಯಾದ ಸ್ಟೀರಾಯ್ಡ್​ಗಳನ್ನು ನೀಡಲಾಗಿತ್ತು. ಇದರಿಂದ ಆಕೆಗೆ ಸೋಂಕು ತಗುಲಿತ್ತು, ಶ್ವಾಸಕೋಶಗಳು ದುರ್ಬಲಗೊಂಡು ನೀರು ತುಂಬಿ ಉಸಿರಾಡಲು ಕಷ್ಟವಾಗಿತ್ತು. ಶುಕ್ರವಾರ ಆಕೆ ಮೃತಪಟ್ಟಿದ್ದಾಳೆ ಎಂದು ಆಕೆಯ ತಂದೆ ಪುನೀತ್ ಭಟ್ನಾಗರ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    2016 ರ ಚಲನಚಿತ್ರ ‘ದಂಗಲ್’ ನಲ್ಲಿ ಯುವ ಬಬಿತಾ ಕುಮಾರಿ ಫೋಗಟ್ ಪಾತ್ರವನ್ನು ಮಾಡಿದ ನಂತರ ಸುಹಾನಿ ಸಾಕಷ್ಟು ಜನಪ್ರಿಯರಾಗಿದ್ದರು.

    ಜೂನ್ 2019 ರಲ್ಲಿ ಅವರ ಸಹ-ನಟಿ ಝೈರಾ ಚಲನಚಿತ್ರೋದ್ಯಮವನ್ನು ತೊರೆಯುವ ನಿರ್ಧಾರವನ್ನು ಸಾರ್ವಜನಿಕವಾಗಿ ಘೋಷಿಸಿದಾಗ, ಸುಹಾನಿ ಕೂಡ ತಮ್ಮ ಅಧ್ಯಯನದ ಮೇಲೆ ಕೇಂದ್ರೀಕರಿಸಲು ನಟನೆಯಿಂದ ವಿರಾಮ ತೆಗೆದುಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಆಕೆ ಸಕ್ರಿಯವಾಗಿರಲಿಲ್ಲ. ಅವರ ಕೊನೆಯ ಪೋಸ್ಟ್ ನವೆಂಬರ್ 2021 ರಲ್ಲಿ ಹಾಕಲಾಗಿತ್ತು.

    ಮಾರುಕಟ್ಟೆ ತೆರೆದ ತಕ್ಷಣ ಅದಾನಿ ಪೋರ್ಟ್ಸ್ ಸೇರಿದಂತೆ ಈ 3 ಷೇರುಗಳನ್ನು ಖರೀದಿಸಿ; ಮುಂದಿನ ವಾರದ ವಹಿವಾಟಿಗೆ ತಜ್ಞರ ಸಲಹೆ

    ಹೂಡಿಕೆದಾರರಿಗೆ ಸಾಕಷ್ಟು ಲಾಭ ನೀಡಿದ ಗೇಲ್​ ಷೇರು: ಈ PSU ಸ್ಟಾಕ್ ಖರೀದಿಗೆ 3 ಬ್ರೋಕರೇಜ್‌ ಸಂಸ್ಥೆಗಳು ಸಲಹೆ ನೀಡಿದ್ದೇಕೆ?

    2024-25 ನೇ ಹಣಕಾಸು ವರ್ಷದಲ್ಲಿ ಯಾವ ಕಂಪನಿ ಎಷ್ಟೆಷ್ಟು ಲಾಭ?: ಭವಿಷ್ಯ ನುಡಿದ ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts