ಮಾರುಕಟ್ಟೆ ತೆರೆದ ತಕ್ಷಣ ಅದಾನಿ ಪೋರ್ಟ್ಸ್ ಸೇರಿದಂತೆ ಈ 3 ಷೇರುಗಳನ್ನು ಖರೀದಿಸಿ; ಮುಂದಿನ ವಾರದ ವಹಿವಾಟಿಗೆ ತಜ್ಞರ ಸಲಹೆ

stock
Published on

ಮುಂಬೈ: ಅದಾನಿ ಪೋರ್ಟ್ಸ್, ಎಸ್‌ಬಿಐ ಲೈಫ್ ಮತ್ತು ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ ಲಿಮಿಟೆಡ್‌ನಂತಹ ಷೇರುಗಳನ್ನು ಖರೀದಿಸಲು ಷೇರು ಮಾರುಕಟ್ಟೆ ತಜ್ಞ, ಎಲ್​ಕೆಪಿ ಸೆಕ್ಯುರಿಟೀಸ್‌ ಸಂಸ್ಥೆಯ ರೂಪಕ್ ಡಿ. ಸಲಹೆ ನೀಡಿದ್ದಾರೆ. ಇದರ ಜತೆಗೆ ಗುರಿ ಬೆಲೆ (ಟಾರ್ಗೆಟ್​ ಪ್ರೈಸ್​) ಮತ್ತು ನಷ್ಟ ತಡೆ (ಸ್ಟಾಪ್​ ಲಾಸ್​) ಕುರಿತಂತೆಯೂ ಅವರು ವಿವರಿಸಿದ್ದಾರೆ.

ಮುಂಬರುವ ವಾರದಲ್ಲಿ ಈ ಮೂರು ಷೇರುಗಳು ಉತ್ತಮ ಆದಾಯವನ್ನು ನೀಡುತ್ತವೆ ಎಂದು ಅವರು ಅಂದಾಜಿಸಿದ್ದಾರೆ.

ಅದಾನಿ ಗ್ರೂಪ್‌ನ ಸ್ಟಾಕ್ ಅದಾನಿ ಪೋರ್ಟ್‌ನಲ್ಲಿ ಮೊದಲು ಖರೀದಿ ರೇಟಿಂಗ್ ನೀಡಿದ್ದಾರೆ. ಅವರು ಅದಾನಿ ಪೋರ್ಟ್‌ನ ಸ್ಟಾಕ್ ಅನ್ನು ರೂ 1310 ರ ಮಟ್ಟದಲ್ಲಿ ಖರೀದಿಸಲು ಹೇಳಿದ್ದಾರೆ. ಭದ್ರತೆಯಾಗಿ ಅವರು ರೂ 1249 ಸ್ಟಾಪ್ ಲಾಸ್ ಹಾಕಲು ಕೇಳಿದ್ದಾರೆ. ಗುರಿ ಬೆಲೆ 1450 ರೂ.ಗಳಿಗೆ ನಿಗದಿಪಡಿಸಿದ್ದಾರೆ.

ಎಸ್‌ಬಿಐ ಲೈಫ್:

ಎರಡನೇ ಸ್ಟಾಕ್ ಆಗಿ, ಅವರು ಎಸ್‌ಬಿಐ ಲೈಫ್ ಖರೀದಿಗೆ ಸಲಹೆ ನೀಡಿದ್ದಾರೆ. ಎಸ್‌ಬಿಐ ಲೈಫ್ ವಿಮಾ ವಲಯದಲ್ಲಿ ಕಾರ್ಯನಿರ್ವಹಿಸುತ್ತದೆ. ಪರಿಣಿತರು ಸ್ಟಾಕ್ ಅನ್ನು ರೂ 1510 ಮಟ್ಟದಲ್ಲಿ ಖರೀದಿಸಲು ಹೇಳಿದ್ದಾರೆ. ಗುರಿ ಬೆಲೆಯಾಗಿ ರೂ 1560ರಿಂದ 1590ಕ್ಕೆ ನಿಗದಿಪಡಿಸಿದ್ದಾರೆ. ಇದಲ್ಲದೆ, 1460 ರೂಪಾಯಿ ಮಟ್ಟದಲ್ಲಿ ಸ್ಟಾಪ್ ಲಾಸ್ ಕೊಟ್ಟಿದ್ದಾರೆ.

ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ ಲಿಮಿಟೆಡ್:

ಯಾವುದೇ ಹೂಡಿಕೆದಾರರು ಈ ಸ್ಟಾಕ್ ಅನ್ನು ರೂ 1149 ರ ಮಟ್ಟದಲ್ಲಿ ಖರೀದಿಸಬಹುದು. 1250 ರೂಪಾಯಿಯ ಗುರಿ ಬೆಲೆ ಮತ್ತು 1100 ರೂಪಾಯಿ ಸ್ಟಾಪ್​ ಲಾಸ್​ ನಿಗದಿಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net