More

    ಹೂಡಿಕೆದಾರರಿಗೆ ಸಾಕಷ್ಟು ಲಾಭ ನೀಡಿದ ಗೇಲ್​ ಷೇರು: ಈ PSU ಸ್ಟಾಕ್ ಖರೀದಿಗೆ 3 ಬ್ರೋಕರೇಜ್‌ ಸಂಸ್ಥೆಗಳು ಸಲಹೆ ನೀಡಿದ್ದೇಕೆ?

    ಮುಂಬೈ: ಮೂರು ದಲ್ಲಾಳಿ (ಬ್ರೋಕರೇಜ್​) ಸಂಸ್ಥೆಗಳು ಪಿಸಿಯು ವಲಯದ (ಸರ್ಕಾರಿ ಕಂಪನಿ) ಈ ಲಾರ್ಜ್​ ಕ್ಯಾಪ್ ಖರೀದಿಸಲು ಸಲಹೆ ನೀಡಿವೆ.

    ಗ್ಯಾಸ್ ಮತ್ತು ಪೆಟ್ರೋಲಿಯಂ ವಲಯದ ಗೇಲ್​ ಇಂಡಿಯಾ ಲಿಮಿಟೆಡ್​ (GAIL India Ltd) ಷೇರುಗಳಿಗೆ ಖರೀದಿಗೆ ಶಿಫಾರಸು ಮಾಡಿವೆ. ಗೇಲ್​ ಷೇರುಗಳ ಪ್ರಸ್ತುತ ಮಾರುಕಟ್ಟೆ ಬೆಲೆ 182.45 ರೂ. ಆಗಿದೆ. ಈ ಷೇರುಗಳು ಕಳೆದ 6 ತಿಂಗಳಲ್ಲಿ 60% ರಷ್ಟು ಲಾಭವನ್ನು ನೀಡಿವೆ.

    ಎಲ್‌ಕೆಪಿ ಸೆಕ್ಯುರಿಟೀಸ್, ಶೇರ್‌ಖಾನ್ ಮತ್ತು ಮೋತಿಲಾಲ್ ಓಸ್ವಾಲ್ ಹೂಡಿಕೆದಾರರಿಗೆ ಗೇಲ್ ಇಂಡಿಯಾ ಷೇರುಗಳನ್ನು ಖರೀದಿಸಲು ಸಲಹೆ ನೀಡಿವೆ.

    ಸರ್ಕಾರಿ ಸ್ವಾಮ್ಯದ ಕಂಪನಿ ಮತ್ತು ಭಾರತದ ಅತಿದೊಡ್ಡ ಅನಿಲ ವಿತರಕ ಸಂಸ್ಥೆಯಾದ ಗೇಲ್​ ತನ್ನ ಡಿಸೆಂಬರ್​ ತ್ರೈಮಾಸಿಕ ಲಾಭದಲ್ಲಿ 18% ರ ಹೆಚ್ಚಳ ಕಂಡಿದೆ. ಏಕೆಂದರೆ ದ್ರವೀಕೃತ ನೈಸರ್ಗಿಕ ಅನಿಲ (LNG) ಬೆಲೆಗಳು 2023 ರಿಂದ ಕಡಿಮೆಯಾಗಿವೆ. ಡಿಸೆಂಬರ್ 31 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಅದರ ಸ್ವತಂತ್ರ ಲಾಭ , 2024 ರ ಹಿಂದಿನ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 2,404.89 ಕೋಟಿ ರೂ.ಗೆ ಹೋಲಿಸಿದರೆ 2,842.62 ಕೋಟಿ ರೂ.ಗೆ ಹೆಚ್ಚಿದೆ. ಎರಡನೇ ತ್ರೈಮಾಸಿದಲ್ಲಿನ 31,822.62 ಕೋಟಿ ರೂ.ಗೆ ಹೋಲಿಸಿದರೆ ಕಾರ್ಯಾಚರಣೆಗಳಿಂದ PSU ನ ಆದಾಯವು ಸರಿಸುಮಾರು 8% ರಷ್ಟು ಏರಿಕೆಯಾಗಿ 34,253.52 ಕೋಟಿ ರೂ. ತಲುಪಿದೆ.

    ಕಂಪನಿಯು ಪ್ರತಿ ಈಕ್ವಿಟಿ ಷೇರಿಗೆ ರೂ 5.50 ರ ಮಧ್ಯಂತರ ಲಾಭಾಂಶ ಘೋಷಿಸಿದೆ. ಇದರ ಮೊತ್ತ ರೂ 3,616.30 ಕೋಟಿ ಆಗುತ್ತದೆ. ಈ ಲಾಭಾಂಶವನ್ನು ಫೆಬ್ರವರಿ 6, 2024 ರಂದು ಪಾವತಿಸಲಾಗಿದೆ.

    ಎಲ್‌ಕೆಪಿ ಸೆಕ್ಯುರಿಟೀಸ್‌ನ ಹಿರಿಯ ತಾಂತ್ರಿಕ ಮತ್ತು ಉತ್ಪನ್ನ ವಿಶ್ಲೇಷಕರಾದ ಕುನಾಲ್ ಷಾ ಅವರು ಗಟ್ಟಿಯಾದ ಮೇಲ್ಮುಖ ಪ್ರವೃತ್ತಿಯನ್ನು ಪ್ರದರ್ಶಿಸುತ್ತಿರುವುದರಿಂದ ಗೇಲ್​ ಷೇರುಗಳಿಗೆ ಖರೀದಿ ರೇಟಿಂಗ್ ಅನ್ನು ಶಿಫಾರಸು ಮಾಡಿದ್ದಾರೆ. ಪ್ರತಿ ಷೇರಿಗೆ 190-200 ರೂ.ಗಳ ಮೇಲ್ಮುಖ ಗುರಿಯನ್ನು ಹತ್ತಿರದ ಅವಧಿಯಲ್ಲಿ ತಲುಪುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತವೆ ಎಂದು ಅವರು ಭಾವಿಸುತ್ತಾರೆ.

    ಶೇರ್‌ಖಾನ್ ಸಂಸ್ಥೆಯು ಈ ಸ್ಟಾಕ್‌ಗೆ ಖರೀದಿ ರೇಟಿಂಗ್ ಅನ್ನು ನಿಗದಿಪಡಿಸಿದ್ದು, 200 ರೂಪಾಯಿಗಳ ಪರಿಷ್ಕೃತ ಗುರಿ ಬೆಲೆ ನೀಡಿದೆ.

    ಮೋತಿಲಾಲ್ ಓಸ್ವಾಲ್ ಸಂಸ್ಥೆ ಕೂಡ ಈ ಷೇರು ಖರೀದಿಸಲು ಶಿಫಾರಸು ಮಾಡಿದೆ. ಗ್ಯಾಸ್ ಟ್ರಾನ್ಸ್‌ಮಿಷನ್, ಎಲ್‌ಪಿಜಿ ಮತ್ತು ಪೆಟ್‌ಚೆಮ್ ವಿಭಾಗಗಳಲ್ಲಿ ನಿರೀಕ್ಷಿತಕ್ಕಿಂತ ಉತ್ತಮವಾದ ಕಾರ್ಯಕ್ಷಮತೆಯು ಗೇಲ್​ನ ಆರೋಗ್ಯಕರ ತ್ರೈಮಾಸಿಕ ಗಳಿಕೆಗೆ ಕಾರಣವಾಯಿತು ಎಂದು ಈ ಸಂಸ್ಥೆ ವಿಶ್ಲೇಷಕರು ಭಾವಿಸುತ್ತಾರೆ.

    ಈ ಬ್ರೋಕರೇಜ್ ಸಂಸ್ಥೆಯು ಗೇಲ್​ ಷೇರುಗಳಿಗೆ ಖರೀದಿ ಕರೆಯನ್ನು ನೀಡಿದ್ದು, ಪ್ರತಿ ಷೇರಿಗೆ ಗುರಿ ಬೆಲೆಯನ್ನು 200 ರೂ.ಗೆ ನಿಗದಿಪಡಿಸಿದೆ.

    ಗೇಲ್​ ಷೇರುಗಳ 52-ವಾರದ ಗರಿಷ್ಠ ಬೆಲೆಯು ರೂ 186.50 ಮತ್ತು ಕನಿಷ್ಠ ಬೆಲೆಯು ರೂ 93.15 ಆಗಿದೆ. ಕಂಪನಿಯು 1,19,962.69 ಕೋಟಿ ರೂ.ಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ.

    ಗೇಲ್​ ಷೇರುಗಳು ಕಳೆದ 1-ವಾರದಲ್ಲಿ ಷೇರುದಾರರಿಗೆ 5.46% ರಷ್ಟು ಲಾಭವನ್ನು ನೀಡಿವೆ. ಕಳೆದ 3 ತಿಂಗಳಲ್ಲಿ 44% ನಷ್ಟು ಏರಿಕೆಯಾಗಿವೆ. ಕಳೆದ 1-ವರ್ಷದಲ್ಲಿ 90% ಗಳಿಸಿವೆ. ಕಳೆದ 3-ವರ್ಷಗಳಲ್ಲಿ 105% ನಷ್ಟು ಲಾಭವನ್ನು ನೀಡಿವೆ.

    2024-25 ನೇ ಹಣಕಾಸು ವರ್ಷದಲ್ಲಿ ಯಾವ ಕಂಪನಿ ಎಷ್ಟೆಷ್ಟು ಲಾಭ?: ಭವಿಷ್ಯ ನುಡಿದ ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್

    ಅಂಧರಾಗಿದ್ದರೂ 100ಕ್ಕೂ ಹೆಚ್ಚು ಪುಸ್ತಕಗಳ ಬರೆದ ಜಗದ್ಗುರು; ಉರ್ದು ಕವಿ ಗುಲ್ಜಾರ್​ ಅವರಿಗೆ ಜ್ಞಾನಪೀಠ ಪ್ರಶಸ್ತಿ ಗೌರವ

    ಒಂದೇ ರೂಪಾಯಿಯಲ್ಲಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಿ; ಪ್ಯಾರಾಲೈಸಿಸ್​ನಿಂದಲೂ ಪಾರಾಗಿರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts