More

    ಒಂದೇ ರೂಪಾಯಿಯಲ್ಲಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಿ; ಪ್ಯಾರಾಲೈಸಿಸ್​ನಿಂದಲೂ ಪಾರಾಗಿರಿ…

    ಬೆಂಗಳೂರು: ಹಾರ್ಟ್​ ಅಟ್ಯಾಕ್​, ಪ್ಯಾರಾಲೈಸಿಸ್​ ಇಲ್ಲವೇ ಸ್ಟ್ರೋಕ್​ ಉಂಟಾದರೆ ಲಕ್ಷಾಂತರ ರೂಪಾಯಿಗಳನ್ನು ಚಿಕಿತ್ಸೆ ಖರ್ಚು ಮಾಡಬೇಕಾಗುತ್ತದೆ. ಆದರೂ, ಈ ಕಾಯಿಲೆಗಳು ಸಂಪೂರ್ಣ ವಾಸಿಯಾಗುತ್ತವೆ ಎಂದು ಹೇಳಲಾಗದು. ಆದರೆ, ಈ ಕಾಯಿಲೆಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸುವ ಸುಲಭದ ವಿಧಾನವೊಂದಿದೆ. ಇದಕ್ಕಾಗಿ ನೀವು ಖರ್ಚು ಮಾಡಬೇಕಾಗಿರುವುದು ಒಂದು ದಿನಕ್ಕೆ ಒಂದು ರೂಪಾಯಿ ಮಾತ್ರ.

    ಹಾರ್ಟ್​ ಅಟ್ಯಾಕ್​, ಪ್ಯಾರಾಲೈಸಿಸ್​ (ಪಾರ್ಶ್ವ ವಾಯು) ಉಂಟಾಗಲು ಮುಖ್ಯ ಕಾರಣ ನಮ್ಮ ರಕ್ತನಾಳಗಳಲ್ಲಿ ಬ್ಲಾಕೇಜ್​ ಆಗುವುದು. ಪೈಪ್​ನಲ್ಲಿ ನೀರು ಸರಾಗವಾಗಿ ಹೋಗುತ್ತಿದ್ದರೆ ಏನೂ ಸಮಸ್ಯೆ ಇರುವುದಿಲ್ಲ. ಆದರೆ, ಪೈಪ್​ನಲ್ಲಿ ಏನಾದರೂ ಸಿಕ್ಕಿಹಾಕಿಕೊಂಡು ಬ್ಲಾಕೇಜ್​ ಉಂಟಾದರೆ ನೀರು ಸರಾಗವಾಗಿ ಹರಿದುಹೋಗುವುದಿಲ್ಲ. ಅದೇ ರೀತಿ ನಮ್ಮ ರಕ್ತನಾಳಗಳಲ್ಲಿ ಬ್ಲಾಕೇಜ್​ ಉಂಟಾದರೆ ರಕ್ತ ಚಲನೆ ಸರಾಗವಾಗಿ ಆಗುವುದಿಲ್ಲ. ಈ ರೀತಿಯಾದರೆ ಹಾರ್ಟ್ ಅಟ್ಯಾಕ್​, ಪಾರ್ಶ್ವ ವಾಯು ಸಮಸ್ಯೆಗಳು ತಲೆದೋರುತ್ತದೆ.

    ಈ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಸುಲಭದ ವಿಧಾನವಿದೆ. ನಿಂಬೆ ಹಣ್ಣು ಮತ್ತು ಬೆಳ್ಳುಳ್ಳಿ ಇದಕ್ಕೆ ಸಾಕು. ನಮ್ಮ ರಕ್ತ ಚಲನೆ ಸರಾಗ ಮಾಡುವ ಸಾಮರ್ಥ್ಯ ಈ ಎರಡು ಪದಾರ್ಥಗಳಲ್ಲಿದೆ. ನಿಂಬೆ ರಸ, ಬೆಳ್ಳುಳ್ಳಿಗಳಲ್ಲಿ ರಕ್ತಗಳನ್ನು ತಿಳಿಗೊಳಿಸುವ ಶಕ್ತಿ ಇರುವುದರಿಂದ ದೇಹದಲ್ಲಿ ರಕ್ತ ಸರಾಗವಾಗಿ ಹರಿದುಹೋಗಲು ಸಹಾಯವಾಗುತ್ತದೆ.

    ಈ ಎರಡೂ ಪದಾರ್ಥಗಳನ್ನು ಬಳಸಿಕೊಂಡು ಮನೆ ಮದ್ದನ್ನು ತಯಾರಿಸುವ ವಿಧಾನ ಹೀಗಿದೆ.

    ಎರಡು ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು ಸಿಪ್ಪೆ ತೆಗೆಯಬೇಕು. ಇದನ್ನು ಕೈಯಲ್ಲಿ ಚೆನ್ನಾಗಿ ಉಜ್ಜಿ ಲೋಟಕ್ಕೆ ಹಾಕಿಕೊಳ್ಳಬೇಕು. ಇದಕ್ಕೆ ಅರ್ಧ ನಿಂಬೆ ಹಣ್ಣಿನ ರಸ ಹಿಂಡಿಕೊಳ್ಳಬೇಕು. ನಂತರ ಒಂದು ಗ್ಲಾಸ್​ ನೀರನ್ನು ಬೆರೆಸಿ ಕಲಬೇಕು. ಈ ನಿಂಬೆ-ಬೆಳ್ಳುಳ್ಳಿ ರಸವನ್ನು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಈ ರೀತಿ ವಾರದಲ್ಲಿ ಕನಿಷ್ಠ ಮೂರು ದಿನ ಮಾಡಬೇಕು.

    ನಿಮ್ಮ ರಕ್ತ ನಾಳಗಳಲ್ಲಿ ಏನಾದರೂ ಬ್ಲಾಕೇಜ್​ ಇದ್ದರೆ ಈ ರಸ ಅದನ್ನು ನಿವಾರಿಸಲು ನೆರವಾಗುತ್ತದೆ. ಅಲ್ಲದೆ, ರಕ್ತವನ್ನು ಕೂಡ ತಿಳಿಗೊಳಿಸುತ್ತದೆ. ಈ ಮೂಲಕ ರಕ್ತವು ಸರಾಗವಾಗಿ ಸಂಚರಿಸಲು ಅನುಕೂಲವಾಗುತ್ತದೆ. ಇದನ್ನು ಮಾಡುವ ಮೂಲಕ ಜೀವನಪೂರ್ತಿ ಹಾರ್ಟ್​ ಅಟ್ಯಾಕ್​, ಸ್ಟ್ರೋಕ್​, ಪ್ಯಾರಾಲೈಸಿಸ್​ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಸಾಧ್ಯವಿದೆ.‘

    ರೂ. 84,650 ಕೋಟಿ ಮೌಲ್ಯದ ಖರೀದಿಗೆ ಸರ್ಕಾರದ ಒಪ್ಪಿಗೆ: ರಕ್ಷಣಾ ವಲಯದ ಕಂಪನಿಗಳ ಷೇರುಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ ಹೂಡಿಕೆದಾರರು

    ಬೋನಸ್​ ಷೇರು ನೀಡಲು ಸಜ್ಜಾಗಿವೆ ನಾಲ್ಕು ಮಲ್ಟಿಬ್ಯಾಗರ್​ ಸ್ಟಾಕ್​ಗಳು: ಹೂಡಿಕೆದಾರರ ಷೇರುಗಳ ಸಂಖ್ಯೆ 1ರಿಂದ 5 ಪಟ್ಟು ಹೆಚ್ಚಳ

    ಎನ್‌ಸಿಎಲ್‌ಟಿ ನಿರ್ಧಾರದಿಂದ ರಿಲೀಫ್: ಐಟಿ ಕಂಪನಿ ಖರೀದಿಸಲು ಮುಂದಾಗಿದ್ದಾರೆ ಬಾಬಾ ರಾಮದೇವ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts