More

  ದುರ್ಗಾಂಬಿಕಾ ಜಾತ್ರೆಯಲ್ಲಿ ಡ್ರೋನ್ ಕ್ಯಾಮರಾ ಬಳಕೆ

  ದಾವಣಗೆರೆ : ಮಧ್ಯ ಕರ್ನಾಟಕದಲ್ಲಿ ಪ್ರಸಿದ್ಧವಾದ, ದಾವಣಗೆರೆ ನಗರ ದೇವತೆ ದುರ್ಗಾಂಬಿಕಾ ದೇವಿಯ ಜಾತ್ರೆಯಲ್ಲಿ ಸ್ಮಾರ್ಟ್‌ಸಿಟಿ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ರಾಜ್ಯದಲ್ಲೆ ಮೊದಲ ಬಾರಿಗೆ ಡ್ರೋನ್ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ.
   ದುರ್ಗಾಂಬಿಕಾ ದೇವಸ್ಥಾನದ ಒಳಗೆ ಮತ್ತು ಹೊರಗೆ 32 ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅವುಗಳನ್ನು ಸ್ಮಾರ್ಟ್‌ಸಿಟಿ ಪೊಲೀಸ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ಗೆ ಸಂಪರ್ಕ ಕಲ್ಪಿಸಲಾಗಿದೆ. ಜತೆಗೆ ಎರಡು ಡ್ರೋನ್ ಕ್ಯಾಮರಾಗಳು ಹಾರಾಟ ನಡೆಸಿ ಇಡೀ ಜಾತ್ರೆಯ ವಿಹಂಗಮ ನೋಟವನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ.
   ಡ್ರೋನ್ ಅನ್ನು ವಿಶೇಷವಾಗಿ ದೆಹಲಿಯಿಂದ ತರಿಸಲಾಗಿದೆ. ಅದರ ಕಾರ್ಯಾಚರಣೆ ಮಾಡಲು ಬೆಂಗಳೂರಿನಿಂದ ಡ್ರೋನ್ ಪೈಲಟ್‌ಗಳು ಬಂದಿದ್ದಾರೆ. ಈ ಕ್ಯಾಮರಾಗಳ ಸಹಾಯದಿಂದ ಭಕ್ತರ ಚಲನವಲನ ಗಮನಿಸಲು ಅನುಕೂಲವಾಗುತ್ತದೆ. ಗುಂಪಿನಲ್ಲಿ ಕಳ್ಳತನ ಇನ್ನಿತರ ಅಪರಾಧ ಚಟುವಟಿಕೆಗಳು ನಡೆದರೆ ಪತ್ತೆಹಚ್ಚಲು ಪೊಲೀಸರಿಗೆ ಇದರಿಂದ ಅನುಕೂಲವಾಗಲಿದೆ.
   ನಿಗದಿತ ಸಮಯದಲ್ಲಿ ಒಂದು ಪ್ರದೇಶದಲ್ಲಿ ಎಷ್ಟು ಜನರು ಬಂದರು ಎನ್ನುವ ಎಣಿಕೆಯನ್ನೂ ಈ ಕ್ಯಾಮರಾಗಳು ಕೊಡುತ್ತವೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts