More

    ರೂ. 84,650 ಕೋಟಿ ಮೌಲ್ಯದ ಖರೀದಿಗೆ ಸರ್ಕಾರದ ಒಪ್ಪಿಗೆ: ರಕ್ಷಣಾ ವಲಯದ ಕಂಪನಿಗಳ ಷೇರುಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ ಹೂಡಿಕೆದಾರರು

    ಮುಂಬೈ: ಶುಕ್ರವಾರ ರಕ್ಷಣಾ ವಲಯದ ಕಂಪನಿಗಳ ಷೇರುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆ ನಿರೀಕ್ಷಿಸಲಾಗಿದೆ. ಸರ್ಕಾರದ ಪ್ರಮುಖ ನಿರ್ಧಾರವೇ ಈ ಹೆಚ್ಚಳಕ್ಕೆ ಕಾರಣವಾಗಿದೆ.

    ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿಯು 84,650 ಕೋಟಿ ರೂಪಾಯಿ ಮೌಲ್ಯದ ಒಪ್ಪಂದಗಳಿಗೆ ಅನುಮೋದನೆ ನೀಡಿದೆ. ಈ ಸುದ್ದಿಯ ನಂತರ ರಕ್ಷಣಾ ಕಂಪನಿಯ ಷೇರುಗಳ ಬೆಲೆಯಲ್ಲಿ ಏರಿಕೆಯಾಗಿದೆ. ರಕ್ಷಣಾ ಸ್ವಾಧೀನ ಮಂಡಳಿಯು ಭಾರತೀಯ ಸೇನೆಯ ಶಸ್ತ್ರಾಸ್ತ್ರಗಳು ಮತ್ತು ಇತರ ವಸ್ತುಗಳನ್ನು ಖರೀದಿಸುವ ಅಧಿಕೃತ ಸಂಸ್ಥೆಯಾಗಿದೆ.

    ಟ್ಯಾಂಕ್ ವಿರೋಧಿ ಮೈನ್ಸ್, ವಾಯು ರಕ್ಷಣಾ ಟ್ಯಾಕ್ಟಿಕಲ್ ಕಂಟ್ರೋಲ್, ಹೆವಿ ವೇಟ್ ಟಾರ್ಪಿಡೊ, ಮಧ್ಯಮ ರೇಂಜ್ ಮ್ಯಾರಿಟೈಮ್ಸ್, ಯುದ್ಧ ಇಂಧನ ತುಂಬುವ ವಿಮಾನ, ಸಾಫ್ಟ್‌ವೇರ್ ಡಿಫೈನ್ಡ್ ರೇಡಿಯೊಗಳು ಇತ್ಯಾದಿಗಳ ಖರೀದಿಗೆ ರಕ್ಷಣಾ ಸಚಿವರ ನೇತೃತ್ವದ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

    ಈ ಸಭೆ ಅನುಮೋದನೆಯ ನಂತರ, ರಕ್ಷಣಾ ಕಂಪನಿಗಳ ಷೇರುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಹೂಡಿಕೆದಾರರು ರಕ್ಷಣಾ ಸಂಬಂಧಿ ಕಂಪನಿಗಳತ್ತ ಚಿತ್ತ ಹರಿಸಿದ್ದಾರೆ. ಇತ್ತೀಚೆಗೆ ಮಂಡಿಸಲಾದ ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ 6.21 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

    ರಕ್ಷಣಾ ವಲಯದ ಕಂಪನಿಗಳಾದ ಎಚ್‌ಎಎಲ್, ಪಾರಸ್ ಡಿಫೆನ್ಸ್ ಆ್ಯಂಡ್​ ಸ್ಪೇಸ್, ಎಂಟಿಎಆರ್ ಟೆಕ್ನಾಲಜೀಸ್ ಮತ್ತು ಭಾರತ್ ಫೋರ್ಜ್ ಷೇರುಗಳ ಬೆಲೆಯಲ್ಲಿ ಶುಕ್ರವಾರ ಸಾಕಷ್ಟು ಏರಿಕೆಯಾಗಿದೆ. ಡೇಟಾ ಪ್ಯಾಟರ್ನ್ ಇಂಡಿಯಾ ಲಿಮಿಟೆಡ್‌, ಭಾರತ್ ಇಲೆಕ್ಟ್ರಾನಿಕ್ಸ್ ಷೇರುಗಳ ಬೆಲೆಯಲ್ಲಿ ಕೂಡ ಹೆಚ್ಚಳ ಕಂಡುಬಂದಿದೆ.

    ವಾಹನ ತಯಾರಿಕೆ ಕಂಪನಿ ಮಹಿಂದ್ರಾ ಷೇರುಗಳ ಬೆಲೆ ಆಲ್​ ಟೈಮ್​ ಹೈ: ಫೋಕ್ಸ್‌ವ್ಯಾಗನ್ ಜತೆ ಮಾಡಿಕೊಂಡ ಒಪ್ಪಂದವೇ ಇದಕ್ಕೆ ಕಾರಣ…

    ಬೋನಸ್​ ಷೇರು ನೀಡಲು ಸಜ್ಜಾಗಿವೆ ನಾಲ್ಕು ಮಲ್ಟಿಬ್ಯಾಗರ್​ ಸ್ಟಾಕ್​ಗಳು: ಹೂಡಿಕೆದಾರರ ಷೇರುಗಳ ಸಂಖ್ಯೆ 1ರಿಂದ 5 ಪಟ್ಟು ಹೆಚ್ಚಳ

    ಎನ್‌ಸಿಎಲ್‌ಟಿ ನಿರ್ಧಾರದಿಂದ ರಿಲೀಫ್: ಐಟಿ ಕಂಪನಿ ಖರೀದಿಸಲು ಮುಂದಾಗಿದ್ದಾರೆ ಬಾಬಾ ರಾಮದೇವ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts