More

    2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆ: 128 ವರ್ಷಗಳ ಬಳಿಕ ಜಾಗತಿಕ ಕ್ರೀಡಾಕೂಟಕ್ಕೆ ಪ್ರವೇಶ

    ಮುಂಬೈ: ಬರೋಬ್ಬರಿ 128 ವರ್ಷಗಳ ಬಳಿಕ ಕ್ರಿಕೆಟ್ ಆಟ ಜಾಗತಿಕ ಕ್ರೀಡಾಕೂಟ ಒಲಿಂಪಿಕ್ಸ್‌ಗೆ ಮರಳಲಿದ್ದು, 2028ರ ಲಾಸ್ ಏಂಜಲಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸ್ಪರ್ಧೆ ಸೇರ್ಪಡೆಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸೊಮವಾರ ಅಧಿಕೃತವಾಗಿ ಅನುಮೋದನೆ ನೀಡಿದೆ.
    ಮುಂಬೈನಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಐಒಸಿ 141ನೇ ಅಧಿವೇಶನದಲ್ಲಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಜತೆಗೆ ಬೇಸ್‌ಬಾಲ್/ಸಾಫ್ಟ್‌ಬಾಲ್, ಫ್ಲ್ಯಾಗ್ ಫುಟ್‌ಬಾಲ್, ಲ್ಯಾಕ್ರೋಸ್ ಮತ್ತು ಸ್ಕ್ವಾಷ್ ಕ್ರೀಡೆಗಳ ಸೇರ್ಪಡೆಗೆ ಬಹುಮತ ದೊರೆತಿದೆ. ಪುರುಷರ ಮತ್ತು ಮಹಿಳಾ ವಿಭಾಗದ ಟಿ20 ಕ್ರಿಕೆಟ್ ಸ್ಪರ್ಧೆಯನ್ನು ಸೇರಿಸಲಾಗಿದೆ. ಪ್ರತಿ ವಿಭಾಗಗಳಿಂದ ಒಟ್ಟು ಆರು ತಂಡಗಳು ಮಾತ್ರ ಕಣಕ್ಕಿಳಿಯಲಿವೆ. ಆತಿಥೇಯ ಲಾಸ್ ಏಂಜಲಿಸ್ ಗೇಮ್ಸ್ ಸಂಘಟನಾ ಸಮಿತಿಯ ಪ್ರಸ್ತಾಪವನ್ನು ಐಒಸಿ ಅಧಿವೇಶನದಲ್ಲಿ ಮತದಾನಕ್ಕೆ ಇಡಲಾಗಿತ್ತು. 99 ಸದಸ್ಯ ರಾಷ್ಟ್ರಗಳ ಪೈಕಿ 2 ರಾಷ್ಟಗಳು ಮಾತ್ರ ಕ್ರಿಕೆಟ್ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿವೆ ಎನ್ನಲಾಗಿದೆ. ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಐದು ಕ್ರೀಡೆಗಳನ್ನು ಒಲಿಂಪಿಕ್ಸ್‌ಗೆ ಸೇರ್ಪಡೆ ಮಾಡುವ ಬಗ್ಗೆ ಅಧಿವೇಶನದಲ್ಲಿ ಮಂಡಿಸಿದಾಗ ಸದಸ್ಯರು ಕೈ ಎತ್ತುವ ಮೂಲಕ ಒಪ್ಪಿಗೆ ಸೂಚಿಸಿದರು. ಈ ಹಿಂದೆ ಪ್ಯಾರಿಸ್ 1990ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಅನ್ನು ಏಕೈಕ ಬಾರಿ ಪದಕ ಸ್ಪರ್ಧೆಯಾಗಿ ಆಡಿಸಲಾಗಿತ್ತು.
    ವಿಶ್ವದ ಎರಡನೇ ಅತ್ಯಂತ ಜನಪ್ರಿಯ ಕ್ರೀಡೆಯನ್ನು ಸ್ವಾಗತಿಸಲು ನಾವು ರೋಮಾಂಚನಗೊಂಡಿದ್ದೇವೆ. ನನ್ನ ಸ್ನೇಹಿತ ವಿರಾಟ್ ಸಾಮಾಜಿಕ ಜಾಲತಾಣದಲ್ಲಿ ಅತಿಹೆಚ್ಚು ಹಿಂಬಾಲಕರನ್ನು ಹೊಂದಿರುವ ವಿಶ್ವದ ಮೂರನೇ ಕ್ರೀಡಾಪಟು ಎಂದು ಇಟಲಿಯ ಒಲಿಂಪಿಕ್ ಚಾಂಪಿಯನ್ ಶೂಟರ್ ಮತ್ತು ಕ್ರೀಡಾ ನಿರ್ದೇಶಕ ನಿಕೊಲೊ ಕ್ಯಾಂಪ್ರಿಯಾನಿ ಸಭೆಯಲ್ಲಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ಜನಪ್ರಿಯತೆಯನ್ನು ಉಲ್ಲೇಖಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts