More

    ಭಿಕ್ಷೆ ಬೇಡುತ್ತಿದ್ದ ವಿದೇಶಿ ಮಹಿಳೆಯ ಬದುಕು ಬದಲಿಸಿದ ಭಾರತೀಯ; ಯಾರೀಕೆ, ಈಗೇನು ಮಾಡುತ್ತಿದ್ದಾರೆ?

    ಬೆಂಗಳೂರು: ಬದುಕು ಯಾವ ಕ್ಷಣದಲ್ಲಿ ಹೇಗೆ ಬದಲಾಗುವುದೋ ಯಾರಿಗೂ ಗೊತ್ತಿರುವುದಿಲ್ಲ. ಮೇಲಿದ್ದವರು ಇದ್ದಕ್ಕಿದ್ದಂತೆ ಧೊಪ್ಪೆಂದು ಕೆಳಕ್ಕೆ ಕುಸಿದುಹೋಗಬಹುದು, ಕೆಳಗಿದ್ದವರು ರಾತ್ರಿ ಬೆಳಗಾಗುವುದರೊಳಗೆ ಯಾವುದೋ ಸ್ಥಾನಕ್ಕೇರಬಹುದು. ಇಲ್ಲೊಬ್ಬರು ವಿದೇಶಿ ಮಹಿಳೆಯ ಬದುಕಿನಲ್ಲೂ ಇಂಥದ್ದೇ ಒಂದು ತಿರುವು ಸಿಕ್ಕ ಪ್ರಸಂಗ ನಡೆದಿದೆ.

    ಶಿಕ್ಷಕಿಯಾಗಿದ್ದ ಈಕೆ ಎಲ್ಲ ಕಳೆದುಕೊಂಡು ಬೀದಿಗೆ ಬಂದು ಭಿಕ್ಷುಕಿಯಾದ ದುರಂತ ಸಂಭವಿಸಿತ್ತು. ನಂತರ ಈಕೆಯ ಬದುಕಿನಲ್ಲಿ ದೊಡ್ಡ ಪವಾಡದ ರೀತಿಯ ಬದಲಾವಣೆಯೂ ಆಗಿಹೋಗಿದೆ. ಅಂದಹಾಗೆ ಈಕೆಯ ಹೆಸರು ಮರ್ಲಿನ್. ಮ್ಯಾನ್ಮಾರ್​ನ ಈಕೆ ವೃತ್ತಿಯಿಂದ ಶಿಕ್ಷಕಿ. ಇಂಗ್ಲಿಷ್, ಗಣಿತ ಪಾಠ ಮಾಡುತ್ತಿದ್ದರು. ಭಾರತೀಯ ವ್ಯಕ್ತಿಯನ್ನು ಮದುವೆಯಾಗಿದ್ದ ಈಕೆ ಮನೆಯವರನ್ನು ನೋಡಲು ಬಂದ ಪತಿ ಜತೆಗೆ ಭಾರತದ ಚೆನ್ನೈಗೆ ಆಗಮಿಸಿದ್ದರು.

    ಆದರೆ ಇಲ್ಲಿ ಆಕೆ ಬಳಿಕ ಪತಿ ಸಹಿತ ಎಲ್ಲರನ್ನೂ ಕಳೆದುಕೊಂಡಿದ್ದು, ನಂತರ ಬದುಕು ಬೀದಿಗೆ ಬಂದಿದೆ. ಹೊಟ್ಟೆಪಾಡಿಗೆ ಭಿಕ್ಷೆ ಬೇಡಿ ಜೀವನ ಸಾಗಿಸಲು ಆರಂಭಿಸಿದ್ದಾಳೆ. ನಂತರ ಇತ್ತೀಚೆಗೆ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಯುವಕನೊಬ್ಬ ಈಕೆಯನ್ನು ಮಾತನಾಡಿಸಿ, ಹಿನ್ನೆಲೆಯನ್ನು ಕೇಳಿದ್ದಾನೆ. ಆತನೊಂದಿಗೆ ಮಾತನಾಡುತ್ತ ಈಕೆ ಈ ಮೇಲಿನ ಸಂಗತಿಗಳನ್ನೆಲ್ಲ ಹೇಳಿಕೊಂಡಿದ್ದಾಳೆ.

    ನಿಮಗೇನು ಬೇಕು ಎಂದಿದ್ದಕ್ಕೆ ಏನೂ ಬೇಡ, ಒಂದು ಸೀರೆ, ಒಂದು ರವಿಕೆ, ಒಂದು ಲಂಗ ಇದ್ದರೆ ಸಾಕು ಎಂದು ಈಕೆ ಉತ್ತರಿಸಿದ್ದಾರೆ. ನಂತರ ಒಂದು ಸೀರೆ-ರವಿಕೆ ಕೊಡಿಸಿದ ಈತ ಇದು ಇಷ್ಟ ಆಯ್ತಾ ಎಂದು ಕೇಳಿದ್ದಾನೆ. ದೇವರು ಕೊಟ್ಟಿದ್ದೆಲ್ಲವೂ ನಂಗೆ ಇಷ್ಟ ಎಂದು ಆಕೆ ಉತ್ತರಿಸಿದ್ದಾರೆ. ನಂತರ ನೀವು ಭಿಕ್ಷೆ ಬೇಡಬಾರದು ಎಂದು ಅಂದಿದ್ದಾಕೆ ಆಕೆ ಹಾಗಾದರೆ ನಾನು ಊಟಕ್ಕೇನು ಮಾಡಲಿ? ಎಂದು ಕೇಳಿದ್ದರು.

    ಆಗ ನೀವು ಈ ಹಿಂದೆ ಇಂಗ್ಲಿಷ್ ಪಾಠ ಮಾಡುತ್ತಿದ್ದಂತೆ ನನಗೂ ತಿಳಿಸಿ, ನಿಮ್ಮ ಇಂಗ್ಲಿಷ್ ಪಾಠದ ಪ್ರತಿ ವಿಡಿಯೋಗೂ ನಾನು ಹಣ ಕೊಡುತ್ತೇನೆ ಎಂದು ಹೇಳಿ ಈ 81 ವರ್ಷದ ಅನಾಥ ವೃದ್ಧೆಗೆ ಹೊಸ ಬದುಕು ತೋರಿಸಿದ್ದಾನೆ. ‘ಇಂಗ್ಲಿಷ್​ ವಿದ್​ ಮರ್ಲಿನ್’ ಎಂಬ ಹೊಸ ಇನ್​ಸ್ಟಾಗ್ರಾಂ ಖಾತೆ ತೆರೆದು ಅದರಲ್ಲಿ ಇಂಗ್ಲಿಷ್ ಪಾಠದ ವಿಡಿಯೋ ಹಂಚಿಕೊಳ್ಳಲಾರಂಭಿಸಿದ್ದಾನೆ. ಬಳಿಕ ಈಕೆಯಿಂದ ವಿದ್ಯೆ ಕಲಿತ ಇತರರೂ ಈಕೆಯನ್ನು ಗುರುತಿಸಿ ಗೌರವಿಸಲಾರಂಭಿಸಿದ್ದು, ಅನಾಥ ಅಜ್ಜಿಯ ಬದುಕಲ್ಲಿ ಹೊಸ ಆಶಾಕಿರಣ ಮೂಡಿದಂತಾಗಿದೆ.

    ಸಾಹಸಸಿಂಹ ಡಾ.ವಿಷ್ಣುವರ್ಧನ್ ಪುಣ್ಯಭೂಮಿ ವಿವಾದ; ಇದೀಗ ಇನ್ನೊಂದು ಮಹತ್ವದ ಬೆಳವಣಿಗೆ

    ಇದು ನಿಜವಾದ ‘ಬೆಡ್​ರೂಮ್’!; ಬೆಂಗಳೂರಿನಲ್ಲಿದು ಎಲ್ಲಿದೆ? ಸುದ್ದಿ ಆಗುತ್ತಿರುವುದಾದರೂ ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts