More

    ಸಾಹಸಸಿಂಹ ಡಾ.ವಿಷ್ಣುವರ್ಧನ್ ಪುಣ್ಯಭೂಮಿ ವಿವಾದ; ಇದೀಗ ಇನ್ನೊಂದು ಮಹತ್ವದ ಬೆಳವಣಿಗೆ

    ಬೆಂಗಳೂರು: ಸಾಹಸಸಿಂಹ ಡಾ.ವಿಷ್ಣುವರ್ಧನ್ ಪುಣ್ಯಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಇನ್ನೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪರಿಣಾಮವಾಗಿ ಇನ್ನೆರಡು ತಿಂಗಳಲ್ಲಿ ನಡೆಯಲಿರುವ ವಿಷ್ಣುವರ್ಧನ್ ಪುಣ್ಯತಿಥಿಯ ಸುಮಾರಿಗೆ ಈ ಪುಣ್ಯಭೂಮಿ ವಿವಾದ ದೊಡ್ಡಮಟ್ಟದಲ್ಲಿ ಮುನ್ನೆಲೆಗೆ ಬರುವ ಸಾಧ್ಯತೆ ಗೋಚರಿಸಿದೆ.

    ಈ ವಿಚಾರದ ಕುರಿತ ಬೆಳವಣಿಗೆ ಸಂಬಂಧ ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಮಾಹಿತಿ ಹಂಚಿಕೊಂಡಿದ್ದು, ಪುಣ್ಯಭೂಮಿ ಸಂಬಂಧ ಸೇನಾ ಸಮಿತಿಯ ಮುಂದಿನ ನಡೆಗಳ ಕುರಿತು ಕೂಡ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

    ”ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲಿ ನಿರ್ಮಾಣವಾಗಿದ್ದರೂ ಅಂತ್ಯಕ್ರಿಯೆಗೊಂಡಂಥ ಅಭಿಮಾನ್ ಸ್ಟುಡಿಯೋದಲ್ಲಿ ಅವರ ಪುಣ್ಯಭೂಮಿಗೆ ಕನಿಷ್ಠ 20 ಗುಂಟೆಗಳ ಜಾಗ ನೀಡಬೇಕೆಂದು ಕೋರಿ ಡಾ.ವಿಷ್ಣು ಸೇನಾ ಸಮಿತಿಯ 18.09.2015ರ ಕೇಸ್ RD/308/LJB/2015ರಲ್ಲಿ ತನ್ನ ವಾದ ಮಂಡಿಸಿತ್ತು.

    ಇದನ್ನೂ ಓದಿ: ಹಮಾಸ್ ಮಾಸ್ಟರ್​ಮೈಂಡ್​ ಮನೆ ಮೇಲೆರಗಿದ ಇಸ್ರೇಲ್ ರಾಕೆಟ್; ಆತನ ಮಗ, ಸಹೋದರ, ಸಹೋದರನ ಮೊಮ್ಮಗಳ ಸಾವು..

    ಜೊತೆಗೆ ಹಿರಿಯ ನಟ ಬಾಲಕೃಷ್ಣ ಅವರಿಗೆ ನೀಡಿರುವಂಥ ಜಮೀನು ಅರಣ್ಯ ಇಲಾಖೆಗೆ ಒಳಪಟ್ಟಿರುತ್ತದೆ ಮತ್ತು ಅವರ ಕಾಲ ನಂತರದಲ್ಲಿ ಅವರ ಮಕ್ಕಳು/ಮೊಮ್ಮಕ್ಕಳು ಹತ್ತು ಎಕರೆಯನ್ನು ಮಾರಾಟ ಮಾಡಿ ಸರ್ಕಾರಕ್ಕೆ ವಂಚಿಸಿರುತ್ತಾರೆ ಎಂಬ ವಿಷಯವನ್ನು ಕೂಡ ಪ್ರಸ್ತಾಪಿಸಿತ್ತು.

    ಈ ಕುರಿತು ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವು ‘ಈ ಸಂಬಂಧ ಅಭಿಮಾನಿ ಸಂಘವಾದ ಡಾ.ವಿಷ್ಣು ಸೇನಾ ಸಮಿತಿಗೆ ಹಕ್ಕಿರುವುದಿಲ್ಲವೆಂದೂ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಥವಾ ಸರ್ಕಾರದ ಮೂಲಕ ಈ ವಿಷಯವನ್ನು ಇತ್ಯರ್ಥಪಡಿಸಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದೆ” ಎಂಬುದಾಗಿ ವೀರಕಪುತ್ರ ಶ್ರೀನಿವಾಸ್ ಮಾಹಿತಿ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

    ನಟ ದಿ.ಬಾಲಕೃಷ್ಣ ಅವರ ಕಲಾಸೇವೆಗೆ ಮೆಚ್ಚಿ ಸರ್ಕಾರ ನೀಡಿದ 20 ಎಕರೆಯ ಭೂಮಿಯನ್ನು ಅವರ ಮಕ್ಕಳು ಖಾಸಗಿ ಸ್ವತ್ತಿನಂತೆ ಭಾವಿಸಿ ಹತ್ತು ಎಕರೆ ಮಾರಾಟ ಮಾಡಿರುತ್ತಾರೆ. ಇದು ಸರ್ಕಾರದ ಭೋಗ್ಯ ಹಕ್ಕುಗಳ ಕಾಯ್ದೆಗೆ ವಿರುದ್ಧವಾಗಿರುತ್ತದೆ. ಅಲ್ಲದೇ ಸದರಿ ಜಮೀನು ಅರಣ್ಯ ವ್ಯಾಪ್ತಿಯಲ್ಲಿ ಇರುವುದರಿಂದ ಈ ಜಾಗದ ಅನುದಾನ ಸಹ ತಪ್ಪಾಗಿದ್ದು ಅದನ್ನು ಸರಿಪಡಿಸಲು, ನ್ಯಾಯಾಧೀಶರ ನಿರ್ದೇಶನದಂತೆ ಸರ್ಕಾರವನ್ನು ಒತ್ತಾಯಿಸುವ ನಿರ್ಧಾರಕ್ಕೆ ಡಾ.ವಿಷ್ಣು ಸೇನಾ ಸಮಿತಿ ಬಂದಿದೆ. ಆ ನಿಟ್ಟಿನಲ್ಲಿ ಅಗತ್ಯವಿರುವ ಕಾನೂನು ಪ್ರಕ್ರಿಯೆ ಮತ್ತು ಹೋರಾಟಕ್ಕೆ ಡಾ.ವಿಷ್ಣು ಸೇನಾ ಸಮಿತಿ ಚಾಲನೆ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

    ಪೊದೆಯಲ್ಲಿ ಯುವ ಜೋಡಿ, ಫೋಟೋ ವೈರಲ್​: ಅಷ್ಟಕ್ಕೂ ಅಲ್ಲಿ ಆಗಿದ್ದೇನು?

    ‘ಇಂಡಿಯಾ’ಗೇ ಗುಡ್​​ಬೈ ಹೇಳಿ ‘ಡಿಜಿಟಲ್ ಯುದ್ಧ’ಕ್ಕಿಳಿದ ಇಸ್ರೇಲಿಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts