More

    ‘ಇಂಡಿಯಾ’ಗೇ ಗುಡ್​​ಬೈ ಹೇಳಿ ‘ಡಿಜಿಟಲ್ ಯುದ್ಧ’ಕ್ಕಿಳಿದ ಇಸ್ರೇಲಿಗ!

    ಬೆಂಗಳೂರು: ಮೊನ್ನೆ ಬೆಳಗ್ಗಿನ ಜಾವ ಆರಂಭವಾದ ಹಮಾಸ್ ಉಗ್ರರ ರಣಭೀಕರ ದಾಳಿಯಿಂದ ರಣರಂಗವಾಗಿರುವ ಇಸ್ರೇಲ್​ನಲ್ಲಿ ಪರಿಸ್ಥಿತಿ ಭಯಂಕರವಾಗಿದೆ. ಎಲ್ಲೆಂದರಲ್ಲಿ ಅಲ್ಲಿ ಸೈರನ್ ಮೊಳಗುತ್ತಿದ್ದು, ಗುಂಡಿನ ಸದ್ದು ಆರ್ಭಟಿಸುತ್ತಿದ್ದು, ಯಾವ ಕ್ಷಣದಲ್ಲಿ ಏನು ಬೇಕಾದರೂ ಆದೀತು ಎಂಬಂಥ ಆತಂಕಕಾರಿ ಪರಿಸ್ಥಿತಿ ಇದೆ.

    ಇಂಥದ್ದರ ನಡುವೆಯೇ ಇಸ್ರೇಲಿ ವ್ಯಕ್ತಿಯೊಬ್ಬ ‘ಇಂಡಿಯಾ’ಗೇ ಗುಡ್​ಬೈ ಹೇಳಿ ಡಿಜಿಟಲ್ ಯುದ್ಧಕ್ಕೆ ಇಳಿದಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಹೀಗೊಂದು ಗುಡ್​ಬೈ ಹೇಳಿಯೇ ಮನೆ ಬಿಟ್ಟಿರುವ ಈ ವ್ಯಕ್ತಿಯ ಹೆಸರು ಹನನ್ಯ ನಫ್ತಾಲಿ. ಅಂದಹಾಗೆ, ಈತ ಗುಡ್​ಬೈ ಹೇಳಿರುವುದು ಪತ್ನಿಗೆ, ಆಕೆಯ ಹೆಸರು ಇಂಡಿಯಾ ನಫ್ತಾಲಿ. ವೃತ್ತಿಯಲ್ಲಿ ಇಬ್ಬರೂ ಪತ್ರಕರ್ತರು.

    ಇದನ್ನೂ ಓದಿ: ಜ್ವರ ಯಾವುದರಿಂದ ಬಂತು ಅಂತ ನಿಖರವಾಗಿ ತಿಳಿಸುತ್ತೆ ಈ ಉಪಕರಣ!; ಕನ್ನಡಿಗ ವಿಜ್ಞಾನಿಯ ಆವಿಷ್ಕಾರ

    ನಾನು ನನ್ನ ದೇಶದ ಸೇವೆಗೆ, ರಕ್ಷಣೆಗೆ ಮುಂದಾಗಿದ್ದೇನೆ. ನಾನು ನನ್ನ ಪತ್ನಿ ಇಂಡಿಯಾಗೆ ಗುಡ್​ಬೈ ಹೇಳಿಯಾಗಿದೆ. ಆಕೆ ತನ್ನ ಆಶೀರ್ವಾದ ಹಾಗೂ ದೇವರ ರಕ್ಷಣೆಯೊಂದಿಗೆ ನನ್ನನ್ನು ಕಳಿಸಿಕೊಟ್ಟಿದ್ದಾಳೆ. ಇನ್ನು ಮುಂದೆ ಆಕೆಯೇ ನನ್ನ ಪರವಾಗಿ ಈ ಖಾತೆ ನಿರ್ವಹಿಸುತ್ತಿರುತ್ತಾಳೆ, ಅವಳೊಂದಿಗೆ ಮೃದುವಾಗಿ ವರ್ತಿಸಿ ಎಂದು ಆತ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

    ಹೀಗೆ ಹೆಂಡತಿಗೆ ಗುಡ್​ಬೈ ಹೇಳಿಯೇ ಮನೆಯಿಂದ ಹೊರಬಂದಿರುವ ಈ ಪತ್ರಕರ್ತ, ಆ ನಂತರ ತನ್ನ ವರದಿಗಾರಿಕೆ ಕುರಿತಂತೆ ಹೇಳಿಕೊಂಡಿರುವುದು ಕೂಡ ಆ ಖಾತೆಯಿಂದ ಪೋಸ್ಟ್ ಆಗಿದೆ. ಕಳೆದ 48 ಗಂಟೆಗಳಲ್ಲಿ ನಾನು ಇಸ್ರೇಲ್​ನಲ್ಲಿನ ಘಟನಗೆಳ ಕುರಿತ ಸತ್ಯ ತಿಳಿಸಲು 8 ಟಿವಿ ಸಂದರ್ಶನ ನಡೆಸಿದ್ದೇನೆ. ಸುಳ್ಳುಗಳು ಕಾಳ್ಗಿಚ್ಚಿನಂತೆ ಹರುಡುತ್ತಿರುವಾಗ ಸತ್ಯ ತಿಳಿಸುವಂಥ ಈ ಡಿಜಿಟಲ್ ಯುದ್ಧ ಕೂಡ ಅಷ್ಟೇ ಮುಖ್ಯ ಎಂದು ಹನನ್ಯಾ ಹೇಳಿಕೊಂಡಿದ್ದಾರೆ.

    ಇಸ್ರೇಲಿಗೆ ನುಸುಳಿರುವ ಹಮಾಸ್ ಉಗ್ರರು ಮನೆಗಳಿಗೇ ನುಗ್ಗಿ ನಾಗರಿಕರನ್ನು ಸಾಯಿಸುತ್ತಿದ್ದಾರೆ. ಕಣ್ಣಿಗೆ ಕಾಣಿಸಿದವರನ್ನೆಲ್ಲ ಕೊಲ್ಲುತ್ತಿದ್ದಾರೆ. ಮತ್ತೊಂದು ಕಡೆಯಿಂದ ಇಸ್ರೇಲ್ ಉಗ್ರರನ್ನು ಗುರಿಯಾಗಿಸಿ ಅವರನ್ನು ಸದೆಬಡಿಯುವ ಕೆಲಸ ಮಾಡುತ್ತಿದೆ ಎಂದೂ ಆತ ಹೇಳಿಕೊಂಡಿದ್ದಾರೆ.

    ಖಿನ್ನತೆ ತಲೆಯ ಸಮಸ್ಯೆ, ಅದಾಗ್ಯೂ ಪರಿಹಾರ ಕಾಲುಗಳಲ್ಲಿದೆ!; ಅಧ್ಯಯನದಲ್ಲಿ ಬಹಿರಂಗ

    ಶಾಲಾ ಸಮಯ ಬದಲಾವಣೆ ಕುರಿತಂತೆ ಇಂದು ಮಹತ್ವದ ಬೆಳವಣಿಗೆ; ಇಂದೇನಾಯ್ತು? ನಾಳೆ ಏನಾಗಬಹುದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts