More

    ಜ್ವರ ಯಾವುದರಿಂದ ಬಂತು ಅಂತ ನಿಖರವಾಗಿ ತಿಳಿಸುತ್ತೆ ಈ ಉಪಕರಣ!; ಕನ್ನಡಿಗ ವಿಜ್ಞಾನಿಯ ಆವಿಷ್ಕಾರ

    ಅರಕಲಗೂಡು: ಜ್ವರ ಎಷ್ಟಿದೆ ಎನ್ನುವುದಕ್ಕೊಂದು ಉಪಕರಣ ಇರುವುದು ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ ಇಲ್ಲೊಂದು ಉಪಕರಣ ಜ್ವರ ಯಾವುದರಿಂದ ಬಂತು ಎಂಬುದನ್ನು ನಿಖರವಾಗಿ ತಿಳಿಸುತ್ತದೆ. ಇಂಥದ್ದೊಂದು ಉಪಕರಣವೇ ವಿಶೇಷ ಎನ್ನುವುದು ಒಂದೆಡೆಯಾದರೆ, ಮತ್ತೊಂದೆಡೆ ಇದು ಕನ್ನಡಿಗ ವಿಜ್ಞಾನಿಯ ಆವಿಷ್ಕಾರ ಎಂಬುದು ಮತ್ತೊಂದು ವಿಶೇಷ.

    ಸಿಂಗಾಪುರದ ಪ್ರತಿಷ್ಠಿತ ಸಂಶೋಧನಾ ಕೇಂದ್ರ ಟುಮ್ ಕ್ರಿಯೇಟ್ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ.ಜೆ.ಕೋಮಲ್​ಕುಮಾರ್ ಈ ಉಪಕರಣವನ್ನು ಆವಿಷ್ಕಾರ ಮಾಡಿದ್ದಾರೆ. ಮನುಷ್ಯರಿಗೆ ಬರುವ ಜ್ವರದ ಕಾರಣವನ್ನು ನಿಖರವಾಗಿ ಪತ್ತೆ ಹಚ್ಚುವ ಸೆಲ್​ಫೇಸ್ ಎಂಬ ಆಧುನಿಕ ತಂತ್ರಜ್ಞಾನದ ಉಪಕರಣವನ್ನು ಅವರು ಸಂಶೋಧನೆ ಮಾಡಿದ್ದಾರೆ.

    ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದ ರತ್ನಮ್ಮ ಹಾಗೂ ದಿ.ಜವರಪ್ಪ ಅವರ ಪುತ್ರ ಡಾ.ಕೋಮಲ್ ಕುಮಾರ್ ಈ ಉಪಕರಣವನ್ನು ಸಂಶೋಧಿಸಿ ಮಂಡಿಸಿರುವ ಪ್ರಬಂಧವು ಇಂಗ್ಲೆಂಡ್​ನ ಪ್ರತಿಷ್ಠಿತ ವಿಜ್ಞಾನ ಮಾಧ್ಯಮ ಸೆಲೆಕ್ಟ್ ಸೈನ್ಸ್​ನಲ್ಲಿ ಪ್ರಕಟವಾಗಿದೆ.

    ಕೋಮಲ್ ಕುಮಾರ್ ಜರ್ಮನಿ ದೇಶದ ಟುಮ್ ಸಂಸ್ಥೆಯ ಪ್ರೊ.ಅಲಿವರ್ ಹೈಡನ್ ಮತ್ತು ಪ್ರೊ.ಪರ್ಸಿನೊಲ್ಲೆ ಮಾರ್ಗದರ್ಶನದಲ್ಲಿ ಸಂಶೋಧಿಸಿರುವ ಈ ಉಪಕರಣದಿಂದ ಮನುಷ್ಯರಿಗೆ ಬರುವ ಜ್ವರವು ವೈರಸ್​ನಿಂದ ಬಂದಿದೆಯೇ ಅಥವಾ ಬ್ಯಾಕ್ಟೀರಿಯಾದಿಂದ ಬಂದಿದೆಯೇ ಎಂಬುದನ್ನು ಖಚಿತವಾಗಿ ಪತ್ತೆ ಹಚ್ಚಿ, ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ.

    ಇದುವರೆಗಿನ ವೈದ್ಯಕೀಯ ತಂತ್ರಜ್ಞಾನದ ಸಲಕರಣೆಗಳಲ್ಲಿ ಜ್ವರದ ಕಾರಣದ ಪತ್ತೆ ಕಾರ್ಯ ಶೇ.50ರಷ್ಟು ಮಾತ್ರ ಸಾಧ್ಯತೆ ಇತ್ತು. ಹೊಸ ತಂತ್ರಜ್ಞಾನದ ಈ ಉಪಕರಣದ ಮೂಲಕ ಶೇ.100ರಷ್ಟು ಖಚಿತವಾಗಿ ನಿಖರ ಕಾರಣ ಪತ್ತೆ ಮಾಡಿ, ಚಿಕಿತ್ಸೆ ನೀಡಲು ಅನುಕೂಲವಾಗಲಿದೆ ಎಂದು ಕೋಮಲ್​ಕುಮಾರ್ ತಿಳಿಸಿದ್ದಾರೆ.

    ಶಾಲಾ ಸಮಯ ಬದಲಾವಣೆ ಕುರಿತಂತೆ ಇಂದು ಮಹತ್ವದ ಬೆಳವಣಿಗೆ; ಇಂದೇನಾಯ್ತು? ನಾಳೆ ಏನಾಗಬಹುದು?

    ಖಿನ್ನತೆ ತಲೆಯ ಸಮಸ್ಯೆ, ಅದಾಗ್ಯೂ ಪರಿಹಾರ ಕಾಲುಗಳಲ್ಲಿದೆ!; ಅಧ್ಯಯನದಲ್ಲಿ ಬಹಿರಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts