More

    ಚಿಕ್ಕಮಗಳೂರಲ್ಲಿ ಕೆಎಫ್‌ಡಿ ಆತಂಕ

    ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಂಗನಕಾಯಿಲೆ ಬಾಧಿತರ ಸಂಖ್ಯೆ ದಿನೇದಿನೆ ಏರಿಕೆಯಾಗುತ್ತಿದೆ. ಇನ್ನೊಂದೆಡೆ ಚಿಕ್ಕಮಗಳೂರು ಒಳಗೊಂಡಂತೆ ಬಯಲುಸೀಮೆ ಭಾಗದಲ್ಲಿ ಡೆಂೆ ಜ್ವರ ಕಾಣಿಸಿಕೊಳ್ಳಲಾರಂಭಿಸಿದೆ. ಇದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.

    ಮಲೆನಾಡು ಭಾಗದಲ್ಲಿ ಜ್ವರ ಬಂತೆಂದರೆ ಸಾಕು ಮಂಗನಕಾಯಿಲೆ ಬಂತೇನೋ ಎಂದು ಹಾಗೂ ಚಿಕ್ಕಮಗಳೂರು ಸೇರಿದಂತೆ ಕಡೂರು ಭಾಗದಲ್ಲಿ ಡೆಂೆ ಬಂದಿತೇನೋ ಎಂದು ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಇದೇ ಕಾರಣಕ್ಕೆ ಸ್ವಲ್ಪ ಜ್ವರ ಕಾಣಿಸಿಕೊಂಡರೂ ಆಸ್ಪತ್ರೆಗೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ.
    ಕೊಪ್ಪ, ಶೃಂಗೇರಿ, ಎನ್.ಆರ್.ಪುರ ಭಾಗದಲ್ಲಿ ಮಂಗನಕಾಯಿಲೆ ಪ್ರಕರಣಗಳು ಪತ್ತೆಯಾಗುತ್ತಿವೆ. ಅದರಲೂ ಕೊಪ್ಪ ಭಾಗದಲ್ಲಿ ಕೆಎಫ್‌ಡಿ ಹೆಚ್ಚಾಗುವ ಭೀತಿ ಎದುರಾಗಿದೆ. ಹೀಗಾಗಿಯೇ ಆರೋಗ್ಯ ಇಲಾಖೆ ಕೊಪ್ಪ ತಾಲೂಕಿನಲ್ಲಿ ಹೆಚ್ಚು ಮುಂಜಾಗ್ರತಾ ಕ್ರಮ ಕೈಗೊಳ್ಳಲಾರಂಭಿಸಿದೆ. ಕಾಡಂಚಿನ ಗ್ರಾಮಗಳ ಜನರು ಮನೆಯಿಂದ ಹೊರಹೋಗುವಾಗ ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ಹೋಗಿ ಜಾಗೃತಿ ಮೂಡಿಸುತ್ತಿದ್ದಾರೆ.
    ಜಿಲ್ಲೆಯ ಇತಿಹಾಸದಲ್ಲಿ ಈ ವರ್ಷದವರೆಗೆ ಮಂಗನಕಾಯಿಲೆಯಿಂದ ಯಾರೂ ಮೃತಪಟ್ಟಿರಲಿಲ್ಲ. ಆದರೆ ಈ ಬಾರಿ ಮಳೆಯಾಗಿರುವ ಕಾರಣಕ್ಕೆ ಮತ್ತು ಬೇಸಿಗೆಗೆ ಮುನ್ನವೇ ಶೃಂಗೇರಿ ತಾಲೂಕಿನಲ್ಲಿ ಮಂಗನಕಾಯಿಲೆಯಿಂದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಇದರ ಬೆನ್ನಿಗೇ ಮತ್ತೆ ನಾಲ್ಕು ಜನರಲ್ಲಿ ಕೆಎಫ್‌ಡಿ ಕಾಣಿಸಿಕೊಂಡಿರುವುದು ಜನರ ಆತಂಕ ಇನ್ನಷ್ಟು ಹೆಚ್ಚಲು ಕಾರಣವಾಗಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ.
    7 ಪ್ರಕರಣ ಪತ್ತೆ: ಚಿಕ್ಕಮಗಳೂರಿನಲ್ಲಿ ಜನವರಿಯಿಂದ ಇದುವರೆಗೆ ಏಳು ಡೆಂೆ ಪ್ರಕರಣಗಳು ಪತ್ತೆಯಾಗಿವೆ. ಜತೆಗೆ ದಿನೇದಿನೆ ಡೆಂೆ ತಪಾಸಣೆಗೆ ಬರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜನವರಿ ಆರಂಭದಿಂದ ಇದುವರೆಗೆ ಜಿಲ್ಲೆಯಲ್ಲಿ 148 ಮಂದಿ ಜ್ವರ ಪೀಡಿತರು ಡೆಂೆ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಬಂದಿದ್ದರು. ಇವರಲ್ಲಿ ಡೆಂೆ ಲಕ್ಷಣಗಳಿರುವ 84 ಜನರನ್ನು ಡೆಂೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರಲ್ಲಿ ಏಳು ಜನರಲ್ಲಿ ಡೆಂೆ ಜ್ವರ ಇರುವುದು ದೃಢಪಟ್ಟಿದೆ.
    ಚಿಕ್ಕಮಗಳೂರಿನಲ್ಲೂ ಆತಂಕ: ಚಿಕ್ಕಮಗಳೂರಿನಲ್ಲೂ ಡೆಂೆ ಆತಂಕ ಆರಂಭಗೊಂಡಿದೆ. ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗಿದೆ. ಇದರ ಜತೆಗೆ ಯುಜಿಡಿ ಪೈಪ್ ಬದಲಾವಣೆ ಮಾಡಲು ಎಲ್ಲೆಡೆ ರಸ್ತೆ ಅಗೆಯಲಾಗಿದೆ. ಇದರಿಂದ ಚರಂಡಿಗಳು ಕಟ್ಟಿಕೊಂಡು ಇಡೀ ನಗರದ ಯಾವ ಕಡೆ ಹೋದರೂ ದುರ್ನಾತ ಬರುತ್ತದೆ. ಚರಂಡಿಯಲ್ಲಿ ಕೊಳಚೆ ನೀರು ನಿಂತಿರವುದರಿಂದ ಸೊಳ್ಳೆಗಳ ಪ್ರಮಾಣ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿದೆ. ಯುಜಿಡಿ ಪೈಪ್ ಬದಲಾವಣೆ ಮಾಡಲು ರಸ್ತೆಗಳನ್ನು ಕಿತ್ತು ಹಾಕಿ ತಿಂಗಳುಗಳೇ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ರಸ್ತೆ ಅಗೆದಿರುವ ಮಣ್ಣು ಚರಂಡಿಗೆ ಬಿದ್ದು ಚರಂಡಿಗಳು ಬ್ಲಾಕ್ ಆಗಿ ನೀರು ಹರಿಯುತ್ತಿಲ್ಲ. ಇದರಿಂದ ಸೊಳ್ಳೆಗಳ ಪ್ರಮಾಣ ಹೆಚ್ಚಾಗಿದೆ. ಆದರೂ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಿಸಿದವರು ಇದುವರೆಗೆ ಕ್ರಮ ಕೈಗೊಂಡಿಲ್ಲ.
    ಕಾಲೇಜು ವಿದ್ಯಾರ್ಥಿನಿ ಸಾವು: ಬಹು ಅಂಗಾಗ ವೈಫಲ್ಯ ಹಾಗೂ ಇತರೆ ಅನಾರೋಗ್ಯದ ಕಾರಣದಿಂದ ನಗರದ ಮಹಮ್ಮದ್ ಗಲ್ಲಿ ನಿವಾಸಿ ಸಹರಾ ಬಾನು (18) ಮೃತಪಟ್ಟಿದ್ದಾಳೆ. ನಗರದ ಎಂಇಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಈಕೆ ಎರಡು ತಿಂಗಳಿನಿಂದ ಅನಾರೋಗ್ಯಕ್ಕೆ ಈಡಾಗಿದ್ದಳು. ಆದರೆ ಚಿಕಿತ್ಸೆ ಫಲಿಸದೆ ಗುರುವಾರ ಮೃತಪಟ್ಟಿದ್ದಾಳೆ. ಆರಂಭದಲ್ಲಿ ಸಹರಾ ಬಾನು ಡೆಂೆಯಿಂದ ಮೃತಪಟ್ಟಿದ್ದಾರೆ ಎಂದು ಅನುಮಾನಿಸಲಾಗಿತ್ತು. ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಹರಾ ಬಾನು ಡೆಂೆಯಿಂದ ಮೃತಪಟ್ಟಿಲ್ಲ. ಬದಲಿಗೆ ಬೇರೆ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
    ಮಲೆನಾಡು ಭಾಗದಲ್ಲಿ ಮಂಗನಕಾಯಿಲೆ ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮ ಕೈಗೊಂಡಿದ್ದೇವೆ. ಕೊಪ್ಪ ತಾಲೂಕಿನಲ್ಲಿ ಮಾತ್ರ ಹೆಚ್ಚು ಪ್ರಕರಣ ಕಂಡುಬರುತ್ತಿವೆ. ಜಿಲ್ಲೆಯಲ್ಲಿ ಇದುವರೆಗೆ ಏಳು ಡೆಂೆ ಪ್ರಕರಣಗಳು ಪತ್ತೆಯಾಗಿವೆ. ಡೆಂೆ ಬಾಧಿತರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ ಜಿಲ್ಲೆಯಲ್ಲಿ ಡೆಂೆಗೆ ಯಾರೂ ಬಲಿಯಾಗಿಲ್ಲ. ಜನ ಮುಂಜಾಗ್ರತಾ ಕ್ರಮ ವಹಿಸಿದಾಗ ಸಾಂಕ್ರಾಮಿಕ ರೋಗಗಳನ್ನು ಸಮರ್ಪಕವಾಗಿ ತಡೆಯಲು ಸಾಧ್ಯ ಎನ್ನುತ್ತಾರೆ ಡಿಎಚ್‌ಒ ಡಾ. ಅಶ್ವತ್ಥ್‌ಬಾಬು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts