More

    ಖಿನ್ನತೆ ತಲೆಯ ಸಮಸ್ಯೆ, ಅದಾಗ್ಯೂ ಪರಿಹಾರ ಕಾಲುಗಳಲ್ಲಿದೆ!; ಅಧ್ಯಯನದಲ್ಲಿ ಬಹಿರಂಗ

    ನವದೆಹಲಿ: ಖಿನ್ನತೆ ಎನ್ನುವುದು ತಲೆಯಲ್ಲಿನ ಸಮಸ್ಯೆ, ಅರ್ಥಾತ್ ಅದು ಮಾನಸಿಕ ಸಮಸ್ಯೆ. ಆದರೆ ಇದಕ್ಕೆ ಪರಿಹಾರ ಕಾಲುಗಳಲ್ಲಿದೆ ಎಂದರೆ ಒಮ್ಮೆ ಅಚ್ಚರಿ ಅನಿಸಬಹುದು. ಹೌದು.. ಇದು ಅಚ್ಚರಿಯ ಸಂಗತಿ ಎನಿಸಿದರೂ ನಿಜ. ನಾವು ಕಾಲಿಗೆ ‘ಬುದ್ಧಿ ಹೇಳುವುದರಿಂದ’ ಖಿನ್ನತೆ ‘ಕಾಲಿಗೆ ಬುದ್ಧಿ ಹೇಳುವುದು’ ಎಂಬ ವಿಷಯ ಈ ಅಧ್ಯಯನವೊಂದರಿಂದ ತಿಳಿದುಬಂದಿದೆ.

    ಅಫೆಕ್ಟಿವ್​ ಡಿಸಾರ್ಡರ್ಸ್​ ಎಂಬ ಜರ್ನಲ್​ನಲ್ಲಿ ಪ್ರಕಟವಾಗಿರುವ ಅಧ್ಯಯನವೊಂದರ ವರದಿಯಲ್ಲಿ ಈ ಅಂಶ ಕಂಡುಬಂದಿದೆ. ಖಿನ್ನತೆಯಿಂದ ಬಳಲುತ್ತಿದ್ದ 141 ಮಂದಿಯನ್ನು ಈ ಅಧ್ಯಯನಕ್ಕಾಗಿ ಬಳಸಿಕೊಳ್ಳಲಾಗಿತ್ತು. ಇವರನ್ನು ಎರಡು ವರ್ಗವಾಗಿ ವಿಂಗಡಿಸಿ ಅಧ್ಯಯನಕ್ಕೆ ಒಳಪಡಿಸಲಾಗಿದೆ.

    ಒಂದು ವರ್ಗದವರಿಗೆ ಖಿನ್ನತೆನಿವಾರಕ ಮಾತ್ರೆಗಳ ಮೂಲಕ ಚಿಕಿತ್ಸೆ, ಇನ್ನೊಂದು ವರ್ಗದವರಿಗೆ ಓಟದ ಮೂಲಕ ಚಿಕಿತ್ಸೆ ನೀಡುವ ಕುರಿತು ತಿಳಿಸಲಾಗಿತ್ತು. ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಅವರಿಗೆ ನೀಡಲಾಗಿತ್ತು. ಆ ಪೈಕಿ 45 ಮಂದಿ ಖಿನ್ನತೆನಿವಾರಕಗಳನ್ನು ಆಯ್ಕೆ ಮಾಡಿಕೊಂಡರೆ, 96 ಮಂದಿ ಓಟವನ್ನು ಆಯ್ಕೆ ಮಾಡಿಕೊಂಡರು. ಈ ಎರಡೂ ವರ್ಗದವರಿಗೆ 16 ದಿನಗಳ ಕೋರ್ಸ್​ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅಂದರೆ ಇವರನ್ನು 16 ದಿನಗಳ ಕಾಲ ಅಧ್ಯಯನಕ್ಕೆ ಒಳಪಡಿಸಲಾಗಿತ್ತು.

    ಇದನ್ನೂ ಓದಿ: ಈ ಸಮಯದಲ್ಲಿ ಮಲಗಿದರೆ ಹೃದಯಾಘಾತ ಸಾಧ್ಯತೆ ಕಡಿಮೆ ಅಂತೆ; ಅಧ್ಯಯನದಲ್ಲಿ ಬಯಲಾಯಿತು ಹೃದಯದ ಆರೋಗ್ಯ ಮಾಹಿತಿ

    ಖಿನ್ನತೆನಿವಾರಕ ವರ್ಗದವರಿಗೆ 16 ವಾರಗಳ ಕಾಲ ಎಸಿಟಲೊಪ್ರಾಮ್ ಮಾತ್ರೆಗಳನ್ನು ನೀಡಲಾಗಿತ್ತು. ಓಟದ ವರ್ಗದವರಿಗೆ ವಾರಕ್ಕೆ 2-3 ದಿನ 45 ನಿಮಿಷಗಳ ಓಟದ ಸೆಷನ್​ ಕೈಗೊಳ್ಳಲಾಗಿತ್ತು. 16 ವಾರಗಳ ಚಿಕಿತ್ಸೆ ಬಳಿಕ ಎರಡೂ ವರ್ಗಗಳಲ್ಲಿ ಶೇ. 44 ಸುಧಾರಣೆ ಕಂಡುಬಂದಿತ್ತು. ಆದರೆ ಮಾತ್ರೆ ತೆಗೆದುಕೊಂಡವರ ವರ್ಗದವರಲ್ಲಿ ಚಯಾಪಚಯ ವ್ಯವಸ್ಥೆಯಲ್ಲಿ ಸ್ವಲ್ಪ ಏರುಪೇರು ಕಂಡುಬಂದಿತ್ತು.

    ಇದನ್ನೂ ಓದಿ: ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

    ಎರಡೂ ರೀತಿಯ ಚಿಕಿತ್ಸೆ ಒಂದೇ ರೀತಿಯ ಪರಿಣಾಮ ಬೀರಿದೆ. ಆದರೆ ಮಾತ್ರೆ ತೆಗೆದುಕೊಂಡವರ ದೇಹತೂಕ, ಹೃದಯಬಡಿತದಲ್ಲಿ ವ್ಯತ್ಯಾಸ ಕಂಡುಬಂದಿದೆ. ಮತ್ತೊಂದೆಡೆ ಓಟವನ್ನು ಅನುಸರಿಸಿದವರಲ್ಲಿ ಖಿನ್ನತೆ ಕಡಿಮೆ ಆಗುವ ಜತೆಗೆ ಫಿಟ್​ನೆಸ್​, ಹೃದಯಬಡಿತದಲ್ಲಿಯೂ ಸುಧಾರಣೆ ಕಂಡುಬಂದಿದೆ ಎಂದು ನೆದರ್ಲೆಂಡ್ಸ್​ನ ಆ್ಯಮ್​ಸ್ಟರ್​ಡ್ಯಾಂ ಯುನಿವರ್ಸಿಟಿ ಮೆಡಿಕಲ್ ಸೆಂಟರ್ಸ್​ನ ಪ್ರೊಫೆಸರ್ ಬ್ರೆಂಡ್ ಪೆನ್ನಿಕ್ಸ್ ತಿಳಿಸಿದ್ದಾರೆ.

    ಖಿನ್ನತೆಗೆ ಮಾತ್ರೆಯಷ್ಟೇ ಪರಿಹಾರವನ್ನು ಓಟ ಯಾವುದೇ ಅಡ್ಡಪರಿಣಾಮ ಇಲ್ಲದೆ ನೀಡುವುದರ ಜತೆಗೆ ದೈಹಿಕ ಆರೋಗ್ಯ ಮಾನಸಿಕ ಆರೋಗ್ಯವನ್ನೂ ಸುಧಾರಿಸಲಿರುವುದು ಈ ಅಧ್ಯಯನದಿಂದ ಕಂಡುಬಂದಿದೆ.

    ನಮಸ್ಕಾರ ದೇವ್ರು.. ಇಲ್ಲಿ ದೇವ್ರದ್ದೇ ಬ್ಯಾಟಿಂಗ್​-ಫೀಲ್ಡಿಂಗ್​!; ಡಾ.ಬ್ರೋ ಭೇಟಿ ನೀಡಿರುವ ಈ ಕ್ರಿಕೆಟ್ ದೇವಸ್ಥಾನ ಎಲ್ಲಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts