More

    ಬಾಯ್​ಫ್ರೆಂಡ್​ಗೆ ಪದೇಪದೆ ಕಾಲ್​ ಮಾಡ್ತಿದ್ದೀರಾ? ಹುಷಾರ್​ ಗೊತ್ತಿಲ್ಲದೇ ವಕ್ಕರಿಸುತ್ತೇ ಈ ಮಾರಕ ಕಾಯಿಲೆ!

    ಬೀಜಿಂಗ್​​: ಪ್ರೀತಿಗೆ ಎಂದೂ ಬೆಲೆ ಕಟ್ಟಲು ಆಗುವುದಿಲ್ಲ. ಆದರೆ, ಇಂದು ಪ್ರೀತಿಗಿರುವ ಮೌಲ್ಯ ಕಡಿಮೆಯಾಗುತ್ತಾ ಬರುತ್ತಿದೆ. ಪ್ರೀತಿಯ ಹೆಸರಲ್ಲಿ ನಡೆಯುತ್ತಿರುವ ಅನಾಚರಗಳೇ ಇದಕ್ಕೆಲ್ಲ ಕಾರಣ. ಆದರೂ, ಕೆಲವರು ಪ್ರೀತಿಗಾಗಿ ಜೀವನವನ್ನೇ ಅರ್ಪಿಸುತ್ತಾರೆ. ಏಕೆಂದರೆ, ತಮ್ಮ ಸಂಗಾತಿಯ ಮೇಲೆ ಅಷ್ಟೊಂದು ಪ್ರೀತಿ ಇಟ್ಟುಕೊಂಡಿರುತ್ತಾರೆ. ಆದರೆ, ತುಂಬಾ ಹಚ್ಚಿಕೊಳ್ಳುವುದು ಸಹ ಆರೋಗ್ಯಕ್ಕೆ ಒಳ್ಳೆಯಲ್ಲ ಎಂಬುದನ್ನು ಚೀನಾದಲ್ಲಿ ನಡೆದ ಈ ಘಟನೆ ಸಾಬೀತು ಮಾಡಿದೆ.

    ಕೆಲವರು ತಮ್ಮ ಹುಚ್ಚು ಪ್ರೀತಿಯಿಂದಾಗಿ ತುಂಬಾ ಚಿಂತಿಸುತ್ತಾರೆ ಮತ್ತು ತಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಾರೆ. ಇತ್ತೀಚಿಗೆ ಚೀನಾದಲ್ಲಿ 18 ವರ್ಷದ ಯುವತಿಯೊಬ್ಬಳು ತನ್ನ ಗೆಳೆಯನ ಮೇಲೆ ಹೆಚ್ಚು ಅವಲಂಬಿತಳಾಗಿದ್ದರಿಂದ ಆಕೆ ಅನಾರೋಗ್ಯಕ್ಕೀಡಾಗಿದ್ದಾಳೆ. ಯುವತಿಯನ್ನು ಶಿಯೋಯು ಎಂದು ಗುರುತಿಸಲಾಗಿದೆ.

    ಯುವತಿಯ ಈ ಅಸಹಜ ನಡವಳಿಕೆಯನ್ನು “ಲವ್​ ಬ್ರೈನ್​” ಎಂದು ಕರೆಯಲಾಗುತ್ತದೆ. ಇದು ಅತಿಯಾದ ಭಾವನಾತ್ಮಕ ಅವಲಂಬನೆಯನ್ನು ಸೂಚಿಸುತ್ತದೆ. ಶಿಯೋಯು ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿ. ತನ್ನ ಬಾಯ್​ಫ್ರೆಂಡ್ ಜೊತೆ ಪ್ರೀತಿಯಲ್ಲಿ ಬಿದ್ದಾಗಲೇ ಆಕೆಗೆ ಮಾನಸಿಕ ಆರೋಗ್ಯ ಸಮಸ್ಯೆ ಶುರುವಾಯಿತು. ಇಬ್ಬರು ಸಂಬಂಧವು ಗಟ್ಟಿಯಾಗುತ್ತಿದ್ದಂತೆ, ಆಕೆಯ ಅವಲಂಬನೆಯು ಹೆಚ್ಚಾಯಿತು.

    ಬಾಯ್​ಫ್ರೆಂಡ್​ ಸದಾ ನನ್ನ ಜತೆಯಲ್ಲೇ ಇರಬೇಕು ಮತ್ತು ಆತನ ಗಮನ ಸಂಪೂರ್ಣ ನನ್ನ ಮೇಲೆಯೇ ಯಾವಾಗಲೂ ಇರಬೇಕು ಎಂದು ಹವಣಿಸು ಹಂತವನ್ನು ಆಕೆಯ ಪ್ರೀತಿ ತಲುಪಿತು. ಈ ಅತಿಯಾದ ಅವಲಂಬನೆಯು ಕೊನೆಗೆ ತೀವ್ರ ಆತಂಕ ಮತ್ತು ಒತ್ತಡದಿಂದ ಬಳಲುವಂತೆ ಮಾಡಿತು. ಕೊನೆಗೆ ತನ್ನ ವರ್ತನೆಯನ್ನು ನಿಯಂತ್ರಿಸಲು ಸಾಧ್ಯವಾಗದೆ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಶಿಯೋಯು ಅವರ ಈ ಕತೆಯು “ಲವ್​ ಬ್ರೈನ್”​ ಅಪಾಯಗಳ ಬಗ್ಗೆ ಎಚ್ಚರಿಕೆ ಗಂಟೆಯಾಗಿದೆ.

    ಇದೊಂದು ಗಂಭೀರವಾದ ಮಾನಸಿಕ ಆರೋಗ್ಯ ಸಮಸ್ಯೆಯಾಗಿದ್ದು, ಸಂಬಂಧಗಳನ್ನು ಹಾಳುಮಾಡುತ್ತದೆ ಮತ್ತು ವ್ಯಕ್ತಿಯ ಯೋಗಕ್ಷೇಮಕ್ಕೆ ಅಪಾಯವನ್ನು ಉಂಟುಮಾಡುತ್ತದೆ. ಈ ಸಮಸ್ಯೆಯ ಕಾರಣದಿಂದಾಗಿ ಶಿಯೋಯು ತನ್ನ ಗೆಳೆಯನಿಗೆ ನಿರಂತರವಾಗಿ ಸಂದೇಶ ಕಳುಹಿಸಲು ಪ್ರಾರಂಭಿಸಿದಳು. ಅಲ್ಲದೆ, ಅವನು ಎಲ್ಲಿದ್ದಾನೆಂದು ತಿಳಿಯಲು ಸದಾ ಬಯಸುತ್ತಿದ್ದಳು. ಅಲ್ಲದೆ, ಸಂದೇಶ ಕಳುಹಿಸಿದ ಕೂಡಲೇ ಉತ್ತರಿಸುವಂತೆ ಒತ್ತಾಯಿಸುತ್ತಿದ್ದಳು.

    ಪ್ರೇಯಸಿಯ ಈ ನಿರಂತರ ಒತ್ತಡವು ಆಕೆಯ ಗೆಳೆಯನ ಮೇಲೆ ಪರಿಣಾಮ ಬೀರಿತು. ಒಂದು ದಿನ ಶಿಯೋಯು 100 ಕ್ಕೂ ಹೆಚ್ಚು ಬಾರಿ ಕರೆ ಮಾಡಿದಾಗ ಬಾಯ್​ಫ್ರೆಂಡ್​ನಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಇದರಿಂದ ಭಾವನೆಗಳ ನಿಯಂತ್ರಣ ಕಳೆದುಕೊಂಡ ಶಿಯೋಯು ಬಹಳ ಚಿಂತಿತಳಾಗಿ, ಮನೆಯಲ್ಲಿನ ವಸ್ತುಗಳನ್ನು ನಾಶಮಾಡಲು ಆರಂಭಿಸಿದಳು. 100 ಬಾರಿ ಮಾಡಿರುವುದನ್ನು ನೋಡಿದ ಬಾಯ್​ಫ್ರೆಂಡ್​ ಆಕೆಯ ಸುರಕ್ಷತೆಯ ಬಗ್ಗೆ ಯೋಚಿಸಿ, ತಕ್ಷಣ ಪೊಲೀಸ್​ ಅಧಿಕಾರಿಗಳಿಗೆ ಕರೆ ಮಾಡಿದ. ಈ ವೇಳೆ ಶಿಯೋಯು ಬಾಲ್ಕನಿಯಿಂದ ಜಿಗಿಯಲು ಪ್ರಯತ್ನಿಸುತ್ತಿರುವುದನ್ನು ತಿಳಿದ ಅಧಿಕಾರಿಗಳು ತಕ್ಷಣ ಅಲ್ಲಿಗೆ ಹೋದರು.

    ಕೊನೆಗೆ ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ, ವೈದ್ಯರು ಶಿಯೋಯು ಅವರಿಗೆ “ಲವ್​ ಬ್ರೈನ್​” ಎಂದು ಕರೆಯಲ್ಪಡುವ ಮಾನಸಿಕ ಕಾಯಿಲೆ ಇದೆ ಎಂದು ಹೇಳಿದರು. ಈ ಸ್ಥಿತಿಯು ಕೆಲವೊಮ್ಮೆ ಆತಂಕ, ಖಿನ್ನತೆ ಮತ್ತು ಬೈಪೋಲಾರ್ ಡಿಸಾರ್ಡರ್‌ನಂತಹ ಇತರ ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ಇರುತ್ತದೆ. (ಏಜೆನ್ಸೀಸ್​)

    ಒಮ್ಮೆ ಪೊದೆಯಲ್ಲಿ ಬಟ್ಟೆ ಬದಲಾಯಿಸುವಾಗ… ಯುದ್ಧಕಾಂಡ ನಟಿಯ ಬದುಕಿಗೆ ತಿರುವು ನೀಡಿತು ಆ ಒಂದು ಘಟನೆ

    ಲಖನೌ ವಿರುದ್ಧ ಸಿಎಸ್​ಕೆ ಸೋಲಿಗೆ ಧೋನಿಯ ಈ ಮಿಸ್ಟೇಕ್​ ಕಾರಣವಂತೆ! ಅಭಿಮಾನಿಗಳ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts