More

    ಒಮ್ಮೆ ಪೊದೆಯಲ್ಲಿ ಬಟ್ಟೆ ಬದಲಾಯಿಸುವಾಗ… ಯುದ್ಧಕಾಂಡ ನಟಿಯ ಬದುಕಿಗೆ ತಿರುವು ನೀಡಿತು ಆ ಒಂದು ಘಟನೆ

    ಮುಂಬೈ: ಸಿನಿಮಾ ಕ್ಷೇತ್ರದಲ್ಲಿ ಈಗ ವ್ಯಾನಿಟಿ ವ್ಯಾನ್‌ ಹಾಗೂ ಕ್ಯಾರವಾನ್‌ಗಳು ಬಂದಿವೆ. ಆದರೆ, ಚಿತ್ರರಂಗದ ಆರಂಭದ ದಿನಗಳಲ್ಲಿ ಇವ್ಯಾವುವೂ ಇರಲಿಲ್ಲ. ಹೀರೋ ಮತ್ತು ಹೀರೋಯಿನ್‌ಗಳು ವಿಶ್ರಾಂತಿ ಪಡೆಯಲು, ಬಟ್ಟೆ ಬದಲಾಯಿಸಲು ಅಥವಾ ವಾಶ್‌ರೂಮ್‌ಗೆ ಹೋಗಲು ವ್ಯಾನಿಟಿ ವ್ಯಾನ್‌ಗಳು ಈಗ ಲಭ್ಯವಿವೆ. ಆದರೆ, ಆರಂಭದ ದಿನಗಳಲ್ಲಿ ಮರಗಳು, ಟಾಯ್ಲೆಟ್​, ವಿಶ್ರಾಂತಿ ಕೊಠಡಿಗಳು, ಬಟ್ಟೆ ಬದಲಾಯಿಸುವ ಕೊಠಡಿಗಳು ಅಥವಾ ಪೊದೆಗಳಲ್ಲೇ ಬಟ್ಟೆ ಬದಲಾಯಿಸಿಕೊಳ್ಳುತ್ತಿದ್ದರು. ಇದು ತುಂಬಾ ಮುಜುಗರ ಪಡುವಂತಹ ಸಂಗತಿ. ಸಮಾಧಾನಕರ ಸಂಗತಿ ಏನೆಂದರೆ ಕೆಲವೊಮ್ಮೆ ಹೋಟೆಲ್​ಗೆ ಹೋಗಿ ಬಟ್ಟೆ ಬದಲಿಸುವ ಅವಕಾಶ ಇತ್ತು. ಮಾಧುರಿ ದೀಕ್ಷಿತ್, ಶ್ರೀದೇವಿ, ಜಯಾ ಬಚ್ಚನ್ ಮುಂತಾದ ಅನೇಕ ನಾಯಕಿಯರು ಆ ಸಮಯದಲ್ಲಿ ಈ ರೀತಿಯ ಅನೇಕ ಕಷ್ಟಗಳನ್ನು ಎದುರಿಸಿದ್ದಾರೆ.

    ಆ ಸಮಯದಲ್ಲೇ ಆ ಓರ್ವ ಹೀರೋಯಿನ್​ ಮಾತ್ರ ವ್ಯಾನಿಟಿ ವ್ಯಾನ್ ಪರಿಕಲ್ಪನೆಯ ಬಗ್ಗೆ ಆಲೋಚಿಸಿದರು. ಒಮ್ಮೆ ಪೊದೆಯಲ್ಲಿ ಬಟ್ಟೆ ಬದಲಾಯಿಸುವಾಗ ಅನುಭವಿಸಿದ ಮುಜುಗರದಿಂದ ತಪ್ಪಿಸಿಕೊಳ್ಳಲು ಬಸ್ಸನ್ನು ವ್ಯಾನಿಟಿ ವ್ಯಾನ್ ಆಗಿ ಪರಿವರ್ತಿಸಿದರೆ ಹೇಗೆ ಎಂಬುದರ ಬಗ್ಗೆ ಯೋಚಿಸಿದರು. ಕೊನೆಗೂ ಆ ನಟಿ 1991ರಲ್ಲಿ ಟ್ರಾವೆಲ್ಲರ್ಸ್​ ಜತೆಗೂಡಿ ವ್ಯಾನಿಟಿ ವ್ಯಾನ್ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತಂದೇ ಬಿಟ್ಟರು. ಆ ವ್ಯಾನ್​ನಲ್ಲಿ ಮೇಕಪ್ ರೂಮ್​ ಕೂಡ ಅಳವಡಿಸಲಾಯಿತು. ಭಾರತದಲ್ಲಿ ವ್ಯಾನಿಟಿ ವ್ಯಾನ್ ಹೊಂದಿರುವ ಮೊದಲ ನಾಯಕಿ ಎನಿಸಿಕೊಂಡರು. ವಿದೇಶದಲ್ಲಿ ಶೂಟಿಂಗ್ ಮಾಡುವಾಗ ಆ ನಟಿಗೆ ವ್ಯಾನಿಟಿ ವ್ಯಾನ್ ಪರಿಕಲ್ಪನೆ ಮೂಡಿತು. ಆಗ ವಿದೇಶದಲ್ಲಿ ನಾಯಕಿಯರು ವ್ಯಾನ್​ನಲ್ಲಿ ಬಟ್ಟೆ ಬದಲಿಸಿ, ಮೇಕಪ್ ಮಾಡಿಕೊಳ್ಳುತ್ತಿದ್ದರು. ಆ ವ್ಯಾನ್ ಅನ್ನು ಟ್ರೈಲರ್ ವ್ಯಾನ್ ಮತ್ತು ಮೇಕಪ್ ವ್ಯಾನ್ ಎಂದು ಕರೆಯಲಾಗುತ್ತಿತ್ತು.

    ಆ ಟ್ರೈಲರ್​ ವ್ಯಾನ್​ ನೋಡಿ ಆ ನಟಿಗೆ ವ್ಯಾನ್ ಕಾನ್ಸೆಪ್ಟ್ ಅನ್ನು ನಮ್ಮ ದೇಶದಲ್ಲಿ ಅಳವಡಿಸುವ ಯೋಚನೆ ಬಂತು. ಬಳಿಕ ದೇಶದಲ್ಲಿ 25 ವ್ಯಾನಿಟಿ ವ್ಯಾನ್‌ಗಳನ್ನು ಏಕಕಾಲದಲ್ಲಿ ಪ್ರಾರಂಭಿಸಿದರು. ಆದರೆ, ವ್ಯಾನಿಟಿ ವ್ಯಾನ್ ನಿರ್ವಹಣೆ ಮಾಡುವುದು ದುಂದು ವೆಚ್ಚ ಎಂದು ಅನೇಕರು ಭಾವಿಸಿದ್ದರು. ಆದರೆ ಸಮಯ ಕಳೆದಂತೆ ವ್ಯಾನಿಟಿ ವ್ಯಾನ್​ ಅಗತ್ಯ ಎಲ್ಲರಿಗೂ ಅರಿವಾಯಿತು. ಬಳಿಕ ವ್ಯಾನಿಟಿ ವ್ಯಾನ್ ವ್ಯವಹಾರಕ್ಕೆ ಬಹಳ ಬೇಡಿಕೆ ಸೃಷ್ಟಿಯಾಯಿತು. ಇದಾದ ನಂತರ ಹೀರೋ, ಹೀರೋಯಿನ್​ಗಳು ವ್ಯಾನಿಟಿ ವ್ಯಾನ್​ಗಳನ್ನು ಖರೀದಿಸತೊಡಗಿದರು. ಈಗ ಸ್ಟಾರ್ ಹೀರೋ, ಹೀರೋಯಿನ್​​ಗಳ ಬಳಿ ಐಷಾರಾಮಿ ವ್ಯಾನಿಟಿ ವ್ಯಾನ್ ಇರುವುದು ಕಾಮನ್ ಆಗಿಬಿಟ್ಟಿದೆ. ಅಷ್ಟಕ್ಕೂ ಈ ಕಲ್ಪನೆಯನ್ನು ಜಾರಿಗೆ ತಂದ ಆ ನಟಿ ಯಾರೆಂದರೆ ಅವರೇ ಪೂನಂ ಧಿಲ್ಲೋನ್. ವ್ಯಾನಿಟಿ ವ್ಯಾನ್​ ವ್ಯವಹಾರದಿಂದಲೇ ಪೂನಂ ಒಳ್ಳೆಯ ಹಣ ಕೂಡ ಸಂಪಾದಿಸಿದರು.

    ಅಂದಹಾಗೆ ಪೂನಂ ಧಿಲ್ಲೋನ್ ಅವರು 16ನೇ ವಯಸ್ಸಿನಲ್ಲಿ ಮಿಸ್ ಇಂಡಿಯಾ ಆದವರು. ತ್ರಿಶೂಲ್ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಆ ನಂತರ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದರು. ತನ್ನ ಅಭಿನಯದಿಂದಲೇ ಹಲವರ ಮನಗೆದ್ದಿದ್ದಾರೆ. ಸುಮಾರು 90 ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ, ಅವರು ವ್ಯಾನಿಟಿ ವ್ಯಾನ್ ವ್ಯಾಪಾರವನ್ನು ನಡೆಸುತ್ತಿದ್ದಾರೆ ಮತ್ತು ಕಾಲಕಾಲಕ್ಕೆ ಚಲನಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

    ಇನ್ನೂ ಪೂನಂ ಧಿಲ್ಲೋನ್ ಅವರು ಕನ್ನಡದಲ್ಲಿ ಒಂದೇ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. 1989ರಲ್ಲಿ ತೆರೆಕಂಡ ಕ್ರೇಜಿಸ್ಟಾರ್​ ರವಿಚಂದ್ರನ್​ ನಟನೆಯ ಯುದ್ಧಕಾಂಡ ಸಿನಿಮಾದಲ್ಲಿ ಸುನಿತಾ ಪಾತ್ರದಲ್ಲಿ ಪೂನಂ ಧಿಲ್ಲೋನ್ ನಟಿಸಿದರು. ಈ ಸಿನಿಮಾ ಹಿಂದಿಯ ಸೂಪರ್​ ಹಿಟ್​ ಮೇರಿ ಜುಂಗ್​ ಸಿನಿಮಾದ ರೀಮೇಕ್​. ಯುದ್ಧಕಾಂಡ ಸಿನಿಮಾ ಕನ್ನಡದಲ್ಲಿಯೂ ದೊಡ್ಡ ಮಟ್ಟದ ಯಶಸ್ಸು ಕಂಡಿತು. (ಏಜೆನ್ಸೀಸ್​)

    ಯಾವಾಗ ವರ್ಜಿನಿಟಿ ಕಳೆದುಕೊಂಡೆ? ಮಲೈಕಾ ಕೇಳಿದ ಪ್ರಶ್ನೆಗೆ ಪುತ್ರ ಅರ್ಹಾನ್​ ಕೊಟ್ಟ ಉತ್ತರ ವೈರಲ್​

    ಅತ್ತೆ ಜತೆ ಅಳಿಯನ ಲಿಪ್​ಲಾಕ್​! ಕೊನೆಗೂ ಮೌನ ಮುರಿದ ಬಿಗಿಲ್​ ಪಾಂಡಿಯಮ್ಮಳ ಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts