More

    ಲಖನೌ ವಿರುದ್ಧ ಸಿಎಸ್​ಕೆ ಸೋಲಿಗೆ ಧೋನಿಯ ಈ ಮಿಸ್ಟೇಕ್​ ಕಾರಣವಂತೆ! ಅಭಿಮಾನಿಗಳ ಆಕ್ರೋಶ

    ಚೆನ್ನೈ: ನಿನ್ನೆ (ಏಪ್ರಿಲ್​ 23) ನಡೆದ ಐಪಿಎಲ್​ ಪಂದ್ಯದಲ್ಲಿ ಲಖನೌ ಸೂಪರ್​ಜೈಂಟ್ಸ್ ತಂಡದ ಮುಂದೆ 211 ರನ್​ಗಳ ಬೃಹತ್ ಗುರಿ ಇತ್ತು. ಹೀಗಾಗಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಆತ್ಮವಿಶ್ವಾಸ ಕೊಂಚ ಜಾಸ್ತಿಯೇ ಇತ್ತು. ಅಲ್ಲದೆ, ರವೀಂದ್ರ ಜಡೇಜಾ, ಮಥೀಶ ಪತಿರಾಣ, ಮುಸ್ತಾಫಿಜುರ್ ರಹಮಾನ್​ ಹಾಗೂ ದೀಪಕ್ ಚಹಾರ್​ರಂತಹ ಅದ್ಬುತ ಬೌಲರ್​ಗಳ ಜತೆಗೆ ನಾಯಕನಾಗಿ ರುತುರಾಜ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇವರೆಲ್ಲರ ಹಿಂದೆ ಕ್ರಿಕೆಟ್​ ಲೋಕದ ಮಾಸ್ಟರ್ ಮೈಂಡ್​ ಎಂದೇ ಖ್ಯಾತರಾಗಿರುವ ಧೋನಿ ಕೂಡ ಇದಾರೆ. ಗಾಯಕ್ವಾಡ್‌ಗೆ ಧೋನಿ ಆಗಾಗ ಸಲಹೆಗಳನ್ನು ನೀಡುತ್ತಾರೆ. ಇದರಿಂದಾಗಿ ನಿನ್ನೆ ಪಂದ್ಯದಲ್ಲಿ ಲಖನೌ ಹೀನಾಯವಾಗಿ ಸೋಲುತ್ತದೆ ಎಂದು ಸಿಎಸ್​ಕೆ ಅಭಿಮಾನಿಗಳು ಭಾವಿಸಿದ್ದರು.

    ಆದರೆ, ನಡೆದಿದ್ದೇ ಬೇರೆ. ಅಸಾಧಾರಣವಾಗಿ ಸಿಡಿದೆದ್ದ ಮಾರ್ಕಸ್​ ಸ್ಟೊಯಿನಿಸ್ ಲಖನೌ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು. ಆದರೆ, ಮೈದಾನದಲ್ಲಿ ಕೆಲವೊಂದು ತಪ್ಪುಗಳು ನಡೆಯುತ್ತಿದ್ದರು ಮಾಸ್ಟರ್ ಮೈಂಡ್ ಎಂದೇ ಖ್ಯಾತಿ ಪಡೆದಿರುವ ಧೋನಿ ಏಕೆ ಸುಮ್ಮನಾಗಿದ್ದರು? ಅವರಿಂದಲೇ ಸಿಎಸ್​ಕೆ ಈ ಪಂದ್ಯವನ್ನು ಸೋತಿತು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಅಭಿಮಾನಿಗಳ ಪ್ರಕಾರ ಧೋನಿ ಮಾಡಿದ ಮಿಸ್ಟೇಕ್​ ಏನು ಎಂಬುದನ್ನು ನಾವೀಗ ನೋಡೋಣ.

    ಮಹೇಂದ್ರ ಸಿಂಗ್ ಧೋನಿ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಮಿಸ್ಟರ್ ಕೂಲ್ ಎಂದು ಕರೆಯುತ್ತಾರೆ. ಸೋಲುವ ಪಂದ್ಯವನ್ನು ಗೆಲ್ಲಿಸುವಂತಹ ಚಾಕಚಕ್ಯತೆ ಧೋನಿ ಅವರಲ್ಲಿದೆ. ಇದು ಇತಿಹಾಸದಲ್ಲಿ ಹಲವು ಬಾರಿ ಸಾಬೀತಾಗಿದೆ. ಆದರೆ, ಈ ಬಾರಿಯ ಐಪಿಎಲ್ ಸೀಸಸ್​ನಲ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡಿ ರುತುರಾಜ್​ಗೆ ಜವಾಬ್ದಾರಿ ವಹಿಸಿದ್ದಾರೆ. ಆದರೂ ರುತುರಾಜ್​ ಹಿಂದೆಯೇ ಇದ್ದು, ಸಲಹೆ, ಸೂಚನೆಗಳನ್ನು ನೀಡುತ್ತಿದ್ದಾರೆ. ಆದರೆ, ಲಖನೌ ವಿರುದ್ಧದ ಪಂದ್ಯದಲ್ಲಿ ಶ್ರೇಷ್ಠ ನಾಯಕನ ಅನುಭವವನ್ನು ಏಕೆ ಬಳಸಲಿಲ್ಲ? ರುತುರಾಜ್ ಇಂತಹ ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಿದ್ದರೆ ಯಾಕೆ ತಡೆಯಲಿಲ್ಲ? ಇದರಿಂದಾಗಿ ಚೆನ್ನೈ ಲಖನೌ ವಿರುದ್ಧ ಸೋತಿದೆ ಎಂದು ನೆಟ್ಟಿಗರು ಮತ್ತು ಅಭಿಮಾನಿಗಳು ಹೇಳುತ್ತಿದ್ದಾರೆ.

    ಸಿಎಸ್​ಕೆ ನೀಡಿದ್ದ 211 ರನ್​ಗಳ ಗುರಿ ಬೆನ್ನತ್ತಿದ ಲಖನೌ, 15 ಓವರ್‌ಗಳ ನಂತರ 3 ವಿಕೆಟ್​ ನಷ್ಟಕ್ಕೆ 137 ರನ್​ ಕಲೆಹಾಕಿತ್ತು. ಇದರಿಂದ ಸಿಎಸ್​ಕೆ ಪಾಳಯದಲ್ಲಿ ಗೆಲುವಿನ ಭರವಸೆ ಉಳಿದುಕೊಂಡಿತ್ತು. ಏಕೆಂದರೆ ಕೊನೆಯ 5 ಓವರ್‌ಗಳಲ್ಲಿ 74 ರನ್‌ಗಳ ಅಗತ್ಯವಿತ್ತು. ಈ ಮೊತ್ತು ಸುಲಭವೆನಲ್ಲ. ಈ ವೇಳೆ ಶಾರ್ದೂಲ್ ಠಾಕೂರ್ ಎಸೆದ 16ನೇ ಓವರ್​ನಲ್ಲಿ ಪೂರನ್ ಎರಡು ಸಿಕ್ಸರ್​ ಮತ್ತು ಒಂದು ಫೋರ್​ ಬಾರಿಸಿದರು. ಒಟ್ಟು ಈ ಓವರ್​ನಲ್ಲಿ 20 ರನ್​ ಬಂದಿತು. ಈ ವೇಳೆ ಲಖನೌ ಕಡೆಗೆ ವಿಜಯಲಕ್ಷ್ಮೀ ವಾಲಿದಳು. ಆದರೆ, 17ನೇ ಓವರ್​ ಎಸೆದ ಪತಿರಾಣ ಪೂರನ್​ ವಿಕೆಟ್​ ಪಡೆದು ಕೇವಲ 7 ರನ್​ ನೀಡಿದರು. ಈ ಸಂದರ್ಭದಲ್ಲಿ ಮತ್ತೆ ವಿಜಯಲಕ್ಷ್ಮೀ ಸಿಎಸ್​ಕೆ ಕಡೆಗೆ ವಾಲಿತು. ಆದರೆ, 18ನೇ ಓವರ್​ ಎಸೆದ ಮುಸ್ತಫಿಜುರ್ 15 ರನ್​ ನೀಡಿದರು. ಕೊನೆ 2 ಓವರ್​ನಲ್ಲಿ ಲಖನೌ ಗೆಲುವಿಗೆ 32 ರನ್​ ಬೇಕಿತ್ತು. 19ನೇ ಎಸೆದ ಪತಿರಾಣ 15 ರನ್​ ನೀಡಿದರು. ಕೊನೆಯ ಓವರ್​ನಲ್ಲಿ 17 ರನ್​ ಬೇಕಿತ್ತು. ಈ ವೇಳೆ ಮುಸ್ತಫಿಜುರ್ ಬೌಲಿಂಗ್​ ಮಾಡಿದರು. ಒಂದು ನೋಬಾಲ್​ ಸೇರಿದಂತೆ ನಾಲ್ಕು ಎಸೆತದಲ್ಲಿ ಒಂದು ಸಿಕ್ಸರ್​, ನಾಲ್ಕು ಬೌಂಡರಿ ಬಾರಿಸುವ ಮೂಲಕ ಮಾರ್ಕಸ್​ ಸ್ಟೋಯಿನಸ್​ ಅವರು ಅಮೋಘ ಶತಕದೊಂದಿಗೆ ಲಖನೌ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಆದರೆ ಇಲ್ಲಿ ಧೋನಿ ಮಾಡಿದ ದೊಡ್ಡ ತಪ್ಪು ಏನು? ದೀಪಕ್ ಚಹಾರ್​ಗೆ ಬೌಲಿಂಗ್ ನೀಡದಿರುವುದು ಎಂಬುದು ಅಭಿಮಾನಿಗಳ ವಾದ. ಚಹಾರ್​ ಅವರು ಕೇವಲ 2 ಓವರ್‌ಗಳಲ್ಲಿ ಕೇವಲ 11 ರನ್ ನೀಡಿ ವಿಕೆಟ್ ಸಹ ಪಡೆದಿದ್ದರು. ಅಂತಹ ಬೌಲರ್‌ಗೆ ಕೊನೆಯ ಓವರ್ ನೀಡುವ ಸೂಚನೆಯನ್ನು ಧೋನಿ ಅವರು ಗಾಯಕ್ವಾಡ್‌ಗೆ ಏಕೆ ನೀಡಲಿಲ್ಲ? ಕೊನೆಯ ಓವರ್ ಚಾಹರ್​ಗೆ ನೀಡಿದ್ದರೆ ಫಲಿತಾಂಶ ಬೇರೆಯಾಗುತ್ತಿತ್ತು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಹೀಗಾಗಿ ಚೆನ್ನೈ ಸೋಲಿಗೆ ಧೋನಿ ಕಾರಣ ಎಂದು ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್​ ಬಾಕ್ಸ್​ನಲ್ಲಿ ನಮಗೆ ತಿಳಿಸಿ. (ಏಜೆನ್ಸೀಸ್​)

    ನಾನು ಕೂಡ ಗಂಡಸರ ಜತೆ ಎಂಜಾಯ್ ಮಾಡ್ತೀನಿ: 19 ವರ್ಷಕ್ಕೆ 30 ಮದ್ವೆಯಾಗಿದ್ದಳು ರಾಜಕುಮಾರಿ!

    ರೋಹಿತ್​ ನಂತ್ರ ಈತನೇ ಟೀಮ್​ ಇಂಡಿಯಾ ಕ್ಯಾಪ್ಟನ್​! ಯಾರೂ ಊಹಿಸದ ಹೆಸರು ಹೇಳಿದ ಭಜ್ಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts