More

  ರೋಹಿತ್​ ನಂತ್ರ ಈತನೇ ಟೀಮ್​ ಇಂಡಿಯಾ ಕ್ಯಾಪ್ಟನ್​! ಯಾರೂ ಊಹಿಸದ ಹೆಸರು ಹೇಳಿದ ಭಜ್ಜಿ

  ನವದೆಹಲಿ: ರೋಹಿತ್ ಶರ್ಮ ನಂತರ ಟಿ20 ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾವನ್ನು ಯಾರು ಮುನ್ನಡೆಸುತ್ತಾರೆ ಎಂಬ ಪ್ರಶ್ನೆ ಬಹಳ ದಿನಗಳಿಂದ ಚರ್ಚೆಯಾಗುತ್ತಲೇ ಇದೆ. ಇದೀಗ ಐಪಿಎಲ್​ ನಡುವೆ ಮತ್ತೊಮ್ಮೆ ಈ ಪ್ರಶ್ನೆ ಚರ್ಚೆಗೆ ಬಂದಿದೆ. ರೋಹಿತ್ ನಂತರ ಟೀಮ್​ ಇಂಡಿಯಾವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ ಮತ್ತು 2024ರ ಟಿ 20 ವಿಶ್ವಕಪ್‌ನಲ್ಲೂ ಪಾಂಡ್ಯ ನಾಯಕತ್ವ ವಹಿಸಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ, 2023ರ ವಿಶ್ವಕಪ್‌ನಲ್ಲಿ ಪಾಂಡ್ಯ ಗಾಯಗೊಂಡಿದ್ದರಿಂದ, ಆ ಸನ್ನಿವೇಶವೇ ಸಂಪೂರ್ಣವಾಗಿ ಬದಲಾಗಿದೆ. ಇದಿಷ್ಟೇ ಅಲ್ಲದೆ, ಐಪಿಎಲ್​ನಲ್ಲಿ ಅತ್ಯಂತ ಕಳಪೆ ಸಾಧನೆಯಿಂದಾಗಿ ಸದ್ಯ ಹಾರ್ದಿಕ್ ಅವರು ತೀವ್ರ ಒತ್ತಡದಲ್ಲಿದ್ದಾರೆ. ಇಂತಹ ಸಮಯದಲ್ಲಿ ರೋಹಿತ್ ನಂತರ ಟೀಮ್​ ಇಂಡಿಯಾವನ್ನು ಮುನ್ನಡೆಸಲು ಯಾರು ಸೂಕ್ತ ಎಂಬ ಪ್ರಶ್ನೆಗೆ ಭಾರತದ ಸ್ಪಿನ್ ದಿಗ್ಗಜ ಹರ್ಭಜನ್ ಸಿಂಗ್ ಕೊಟ್ಟಿರುವ ಉತ್ತರ ಎಲ್ಲರ ಹುಬ್ಬೇರಿಸಿದೆ.

  ಈ ಹಿಂದೆ ರೋಹಿತ್ ಶರ್ಮ ನಂತರ ಟೀಮ್​ ಇಂಡಿಯಾವನ್ನು ಯಾರು ಮುನ್ನಡೆಸುತ್ತಾರೆ ಎಂಬ ಪ್ರಶ್ನೆಗೆ ಹಾರ್ದಿಕ್ ಪಾಂಡ್ಯ ಹೆಸರು ಹೇಳಿದ್ದರು. ಆದರೆ, 2023ರ ವಿಶ್ವಕಪ್ ನಂತರ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಗಾಯದ ಸಮಸ್ಯೆಯಿಂದ ಮೆಗಾ ಟೂರ್ನಮೆಂಟ್‌ನಿಂದ ಹೊರಗುಳಿದ ಪಾಂಡ್ಯ, ಪ್ರಸ್ತುತ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದಾರೆ. ಆದರೆ ಅವರ ಈಗಿನ ಫಾರ್ಮ್ ನೋಡಿದರೆ, ನಾಯಕತ್ವ ಇರಲಿ, ಕನಿಷ್ಠ ಟಿ20 ವಿಶ್ವಕಪ್​ನಲ್ಲಿ ತಂಡದಲ್ಲಿ ಸ್ಥಾನ ಪಡೆಯುತ್ತಾರಾ? ಎಂಬುದೇ ಅನುಮಾನವಾಗಿದೆ. ಇದೀಗ ಈ ಸಂಗತಿ ಹಾಟ್ ಟಾಪಿಕ್ ಆಗಿದೆ.

  ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಅಧಿಕಾರ ಸ್ವೀಕರಿಸಿದ ಪಾಂಡ್ಯ, ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವಲ್ಲಿ ದಯನೀಯವಾಗಿ ವಿಫಲರಾಗಿದ್ದಾರೆ. ಇದುವರೆಗೆ ಆಡಿದ 8 ಪಂದ್ಯಗಳಲ್ಲಿ 5 ಸೋಲುಗಳೊಂದಿಗೆ ಪ್ಲೇ ಆಫ್ ರೇಸ್‌ನಲ್ಲಿ ಹಿಂದುಳಿದಿದೆ. ಇತ್ತೀಚೆಗೆ ರಾಜಸ್ಥಾನ ವಿರುದ್ಧ 9 ವಿಕೆಟ್‌ಗಳಿಂದ ಸೋತಿತ್ತು. ಈ ಹಿನ್ನಲೆಯಲ್ಲಿ ಟೀಂ ಇಂಡಿಯಾದ ದಿಗ್ಗಜ ಸ್ಪಿನ್ನರ್ ಹರ್ಭಜನ್ ಸಿಂಗ್ ಇಂಟರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ.

  ಮುಂಬೈ ವಿರುದ್ಧದ ಪಂದ್ಯದಲ್ಲಿ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅತ್ಯದ್ಭುತ ಬ್ಯಾಟಿಂಗ್​ ಪ್ರದರ್ಶನ ನೀಡಿದರು. ಇನ್ನೂ ಆರ್​ಆರ್​ ತಂಡದ ನಾಯಕ ಸಂಜು ಸ್ಯಾಮ್ಸನ್ ಬಗ್ಗೆ ಮಾತನಾಡುವುದೇ ಬೇಡ. ಏಕೆಂದರೆ, ಅವರು ಟಿ20 ವಿಶ್ವಕಪ್ ತಂಡಕ್ಕೆ ಈಗಾಗಲೇ ನೇರ ಸೇರ್ಪಡೆಗೆ ಅರ್ಹರಾಗಿದ್ದಾರೆ. ಮೇಲಾಗಿ ಸಂಜು ಸ್ಯಾಮ್ಸನ್​, ರೋಹಿತ್ ಶರ್ಮಾ ನಂತರ ಟೀಮ್ ಇಂಡಿಯಾದ ಮುಂದಿನ ನಾಯಕರಾಗುತ್ತಾರೆ. ಈ ಬಗ್ಗೆ ನಿಮಗೆ ಏನಾದರೂ ಅನುಮಾನವಿದೆಯೇ? 2024ರ ಟಿ20 ವಿಶ್ವಕಪ್‌ನಲ್ಲಿ ಸ್ಯಾಮ್ಸನ್ ಟೀಮ್ ಇಂಡಿಯಾದ ನಾಯಕನಾಗಲಿ ಎಂದು ಭಜ್ಜಿ ಹಾರೈಸಿದ್ದಾರೆ. ಈ ಮೂಲಕ ಟೀಮ್​ ಇಂಡಿಯಾ ನಾಯಕತ್ವಕ್ಕೆ ಸಂಜು ಉತ್ತಮ ಆಯ್ಕೆ ಎಂದು ಭಜ್ಜಿ ಹೇಳಿದ್ದಾರೆ. (ಏಜೆನ್ಸೀಸ್​)

  ವಿಜಯ ಭಾರತ ಪ್ರಧಾನಿ ಮೋದಿ ಸಂಕಲ್ಪ

  ಶ್ರೀಲೀಲಾ ಕೆರಿಯರ್​ ಕ್ಲೋಸ್​ ಅಂದವರಿಗೆ ಖಡಕ್​ ಉತ್ತರ ಕೊಟ್ಟ ಕನ್ನಡತಿ! ನಿಜಕ್ಕೂ ಕ್ರೇಜಿ ಪ್ರಾಜೆಕ್ಟ್​ ಇದು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts