More

    ನಾನು ಕೂಡ ಗಂಡಸರ ಜತೆ ಎಂಜಾಯ್ ಮಾಡ್ತೀನಿ: 19 ವರ್ಷಕ್ಕೆ 30 ಮದ್ವೆಯಾಗಿದ್ದಳು ರಾಜಕುಮಾರಿ!

    ಬೀಜಿಂಗ್​: ಬಹಳ ಹಿಂದಿನ ಕಾಲದಲ್ಲಿ ರಾಜರು ಸಂತಾನಕ್ಕಾಗಿ ಹಾಗೂ ರಾಜ್ಯ ವಿಸ್ತರಣೆಗಾಗಿ ಹತ್ತು, ಹದಿನೈದು ರಾಣಿಯರನ್ನು ಮದುವೆಯಾಗುತ್ತಿದ್ದರು. ಆದರೆ, ರಾಜಕುಮಾರಿಯೇ ಏಕಕಾಲದಲ್ಲಿ 30 ಪುರುಷರನ್ನು ಮದುವೆಯಾಗಿದ್ದಳು ಅಂದರೆ ನೀವು ನಂಬುತ್ತೀರಾ? ನಂಬಲೇಬೇಕು. ಅದು ಕೂಡ 19ನೇ ವಯಸ್ಸಿನಲ್ಲಿ. ಆಕೆ ಬೇರೆ ಯಾರೂ ಅಲ್ಲ ಚೀನಾದ ರಾಜಕುಮಾರಿ ಶಾನ್​ ಯಿನ್​ ಅಲಿಯಾಸ್​ ಲಿಯು ಚುಯು.

    ಶಾನ್​​ ಯಿನ್​, ಲಿಯು ಸಾಂಗ್ ರಾಜವಂಶದ ಚಕ್ರವರ್ತಿ ಕ್ಸಿಯಾವೊ ಅವರ ಮಗಳು. ಕ್ಸಿಯಾವೊ ತನ್ನ ಆಳ್ವಿಕೆಯಲ್ಲಿ ಅವಳನ್ನು ಲಿಯು ರಾಜಕುಮಾರಿಯಾಗಿ ನೇಮಿಸಿದನು. ಆ ಸಮಯದಲ್ಲಿ ಶಾನ್​ ಯಿನ್​, ಹೇಯನ್ನ ಮಗ ಹೇಜಿಯನ್ನು ವಿವಾಹವಾದಳು. ಈ ಮದುವೆ ಬಳಿಕ ಹೇಜಿ ದಕ್ಷಿಣ ಕೀ ರಾಜವಂಶದ ರಾಜನಾದನು. ಶಾನ್​ ಯಿನ್​ ತಂದೆಯ ಮರಣದ ನಂತರ, ಅವಳ ಕಿರಿಯ ಸಹೋದರ ಲಿಯು ಕ್ಸಿ ರಾಜನಾದನು. ಆಗ ಲಿಯು ಕ್ಸಿಗೆ ಕೇವಲ 15 ವರ್ಷ. ಲಿಯು ಅವರನ್ನು ಚಕ್ರವರ್ತಿ ಕಿಯಾನ್‌ಫೀ ಎಂದೂ ಕರೆಯುತ್ತಾರೆ. ಈ ಅವಧಿಯಲ್ಲಿ ಲಿಯು ಅರಮನೆಯಲ್ಲಿ 10 ಸಾವಿರಕ್ಕೂ ಹೆಚ್ಚು ಮಹಿಳೆಯರು ಇದ್ದರು. ಅವರೊಂದಿಗೆ ಲಿಯು ಸಂಬಂಧ ಹೊಂದಿದ್ದರು.

    ಶಾನ್​ ಯಿನ್​​ ತನ್ನ ಸಹೋದರನೊಂದಿಗೆ ಬಹಳ ನಿಕಟ ಸಂಬಂಧವನ್ನು ಹೊಂದಿದ್ದಳು. ಹೀಗಿರುವಾಗ ಶಾನ್​ ಯಿನ್​, ದೈಹಿಕವಾಗಿ ನಾವಿಬ್ಬರೂ ವಿಭಿನ್ನರು ಆದರೆ, ಒಂದೇ ಪೋಷಕರ ಮಕ್ಕಳು. ನಿಮ್ಮ ಅರಮನೆಯಲ್ಲಿ 10 ಸಾವಿರ ಮಹಿಳೆಯರಿದ್ದಾರೆ. ಆದರೆ, ನನಗೆ ಮಾತ್ರ ಒಬ್ಬನೇ ಗಂಡ ಏಕೆ ಎಂದು ಪ್ರಶ್ನೆ ಮಾಡುವ ಮೂಲಕ ಸಮಾನತೆಯ ಬಗ್ಗೆ ಧ್ವನಿ ಎತ್ತಿದ್ದಳು. ನಾನು ಕೂಡ ಗಂಡಸರ ಜತೆ ಎಂಜಾಯ್ ಮಾಡುತ್ತೇನೆ ಎಂದಿದ್ದಳು. ಆದರೆ, ಆರಂಭದಲ್ಲಿ ಸಹೋದರ ಅದನ್ನು ಒಪ್ಪಲಿಲ್ಲ. ಈ ಕಾರಣದಿಂದಾಗಿ ಶಾನ್​ ಯಿನ್​​ ತನ್ನ ಕಿರಿಯ ಸಹೋದರನೊಂದಿಗೆ ಜಗಳವಾಡಿದಳು. ಸಮಾನತೆಯ ಬಗ್ಗೆ ಧ್ವನಿ ಎತ್ತಿದಳು.

    ಕೊನೆಗೂ ಚಕ್ರವರ್ತಿ ಕಿಯಾನ್‌ಫೀ ಪ್ರತಿಕ್ರಿಯಿಸಿ, ರಾಜಕುಮಾರಿ ಶಾನ್​ ಯಿನ್​ 30 ಯುವಕರನ್ನು ಪ್ರೇಮಿಗಳು ಎಂದು ಆಯ್ಕೆ ಮಾಡಲು ಅವಕಾಶ ಮಾಡಿಕೊಟ್ಟರು. ಆದರೆ, ಶಾನ್​ ಯಿನ್​​ ತನ್ನ ಸಹೋದರನ ರಿಯಾಯಿತಿಯಿಂದ ಸಂಪೂರ್ಣವಾಗಿ ತೃಪ್ತಳಾಗಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಒಂದು ದಿನ ಸಹೋದರನ ಆಸ್ಥಾನದಲ್ಲಿ ಅಧಿಕಾರಿಯಾಗಿದ್ದ ಚು ಯುವಾನ್ ಎಂಬುವನನ್ನು ನೋಡಿದಳು. ಅವನು ಯುವ ಮತ್ತು ಸುಂದರನಾಗಿದ್ದನು. ಆತನನ್ನು ಪ್ರೇಮಿಯಾಗಿ ನೀಡುವಂತೆ ಚಕ್ರವರ್ತಿ ಕಿಯಾನ್‌ಫೀ ಬಳಿ ಶಾನ್​ ಯಿನ್​​ ಕೇಳಿಕೊಂಡಳು. ಅದನ್ನು ಚಕ್ರವರ್ತಿ ಒಪ್ಪಿಕೊಂಡರು. ಬಳಿಕ ರಾಜಕುಮಾರಿಯ ಸೇವೆ ಮಾಡಲು ಚು ಯುವಾನ್​ಗೆ ಆದೇಶಿಸಲಾಯಿತು. ಆದರೆ, ನಿರಂತರ 10 ದಿನಗಳ ಪ್ರಯತ್ನದ ಹೊರತಾಗಿಯೂ ಚು ಯುವಾನ್, ಶಾನ್​ ಯಿನ್​​​ ಜತೆ ವಾಸಿಸಲು ನಿರಾಕರಿಸಿದನು.

    View this post on Instagram

    A post shared by Victoria Ziji Mei (@vc.mei)

    ಶಾನ್​ ಯಿನ್​​​​ ಸಹೋದರ ಚಕ್ರವರ್ತಿ ಕಿಯಾನ್‌ಫೀ ವ್ಯಭಿಚಾರದಲ್ಲಿ ತೊಡಗಿದ್ದರು. ಹೀಗಿರುವಾರ ಒಂದು ದಿನ ಆತನ ಸಹಾಯಕ ಶೌ ಜಿಝಿ, ಚಕ್ರವರ್ತಿಯನ್ನು ಕೊಂದನು. ಈ ಘಟನೆ ಕ್ರಿ.ಶ 465ರಲ್ಲಿ ಸಂಭವಿಸಿತು. ಇದಾದ ನಂತರ ಶಾನ್​ ಯಿನ್​​ಗೂ ಕಷ್ಟಗಳು ಹೆಚ್ಚಾದವು. ಹತ್ಯೆಯ ನಂತರ ಶಾನ್​ ಯಿನ್​​​ ಅವರ ಚಿಕ್ಕಪ್ಪ ಲಿಯು ಯು ಮಿಂಗ್​ ಚಕ್ರವರ್ತಿ ಆದರು. ಸಿಂಹಾಸನವನ್ನು ಏರುವ ಮುಂಚೆಯೇ ತಮ್ಮ ಅಜ್ಜಿ, ಸಾಮ್ರಾಜ್ಞಿ ಡೊವೇಜರ್ ಲು ಅವರ ಹೆಸರಿನಲ್ಲಿ ಶಾಸನವನ್ನು ಹೊರಡಿಸಿದರು. ಈ ಆದೇಶದ ಅಡಿಯಲ್ಲಿ ರಾಜಕುಮಾರಿ ಶಾನ್​ ಯಿನ್​​​ ಅನೈತಿಕತೆ ಮತ್ತು ವ್ಯಭಿಚಾರವನ್ನು ಖಂಡಿಸಲಾಯಿತು. ಅವರ ಇನ್ನೊಬ್ಬ ಸಹೋದರ ಲಿಯು ಜಿಶಾಂಗ್ ಅವರ ಹಿಂಸಾಚಾರವನ್ನು ಖಂಡಿಸಲಾಯಿತು ಮತ್ತು ಅವರಿಬ್ಬರಿಗೂ ಆತ್ಮಹತ್ಯೆಗೆ ಆದೇಶಿಸಲಾಯಿತು. ರಾಜಕುಮಾರಿ ಶಾನ್​ ಯಿನ್​​​ ಅಂತಿಮವಾಗಿ ಈ ರೀತಿ ಮರಣ ಹೊಂದಿದರು. (ಏಜೆನ್ಸೀಸ್​)

    ಇಂದಿಗೂ ಜೀವಂತವಿದೆ ಸುಂದರಿಯರ ಬೆತ್ತಲೆ ದೇಹದ ಮೇಲೆ ಆಹಾರ ಸವಿಯೋ ವಿಚಿತ್ರ ಪದ್ಧತಿ!

    ನಾನು ಮೂರು ಮದ್ವೆಯಾಗಿದ್ರೂ ಈತನೊಂದಿಗೆ ಮಾತ್ರ ತುಂಬಾ ಖುಷಿಯಾಗಿದ್ದೀನಿ! ನಟಿ ಲಕ್ಷ್ಮೀ ಓಪನ್ ಟಾಕ್

    ಒಮ್ಮೆ ಪೊದೆಯಲ್ಲಿ ಬಟ್ಟೆ ಬದಲಾಯಿಸುವಾಗ… ಯುದ್ಧಕಾಂಡ ನಟಿಯ ಬದುಕಿಗೆ ತಿರುವು ನೀಡಿತು ಆ ಒಂದು ಘಟನೆ

    ರೋಹಿತ್​ ನಂತ್ರ ಈತನೇ ಟೀಮ್​ ಇಂಡಿಯಾ ಕ್ಯಾಪ್ಟನ್​! ಯಾರೂ ಊಹಿಸದ ಹೆಸರು ಹೇಳಿದ ಭಜ್ಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts