More

    ಇಂದಿಗೂ ಜೀವಂತವಿದೆ ಸುಂದರಿಯರ ಬೆತ್ತಲೆ ದೇಹದ ಮೇಲೆ ಆಹಾರ ಸವಿಯೋ ವಿಚಿತ್ರ ಪದ್ಧತಿ!

    ಟೊಕಿಯೋ: ಮನುಷ್ಯನ ಕಲ್ಪನೆಯನ್ನೂ ಮೀರಿ ಜಗತ್ತು ಬೆಳೆಯುತ್ತಿದೆ. ಇಂದು ಟೆಕ್ನಾಲಜಿಗಳೇ ಎಲ್ಲಡೆ ಆವರಿಸಿದೆ. ಆದರೆ, ತಾಂತ್ರಿಕವಾಗಿ ಎಷ್ಟೇ ಮುಂದುವರಿದರೂ ಜನರು ಇಂದಿಗೂ ಕೆಲವು ವಿಚಿತ್ರ ಆಚರಣೆಗಳನ್ನು ಮಾಡುತ್ತಿರುವುದು ವಿಪರ್ಯಾಸವೇ ಸರಿ. ವಿಶ್ವದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸಂಪ್ರದಾಯ ಮತ್ತು ಪದ್ಧತಿಗಳಿವೆ. ಕೆಲವೊಂದು ಸಾಮಾನ್ಯ ಎನಿಸಿದರೆ, ಕೆಲವು ಆಚರಣೆಗಳು ಎಲ್ಲರನ್ನೂ ಅಚ್ಚರಿಗೆ ದೂಡುತ್ತದೆ. ಅಂಥದ್ದೇ ಆಚರಣೆಯನ್ನು ಜಪಾನ್​ನ ಕೆಲವು ರೆಸ್ಟೋರೆಂಟ್​ಗಳು ಇಂದಿಗೂ ಆಚರಿಸಿಕೊಂಡು ಬರುತ್ತಿವೆ.

    ಬಿಸಿ ಬಿಸಿಯಾದ ಆಹಾರ ಅಂದರೆ ಎಲ್ಲರಿಗೂ ಇಷ್ಟ. ಹೋಟೆಲ್​ಗಳಿಗೆ ಹೋದಾಗ ಬಾಳೆ ಎಲೆಯ ಮೇಲೆ ಅಥವಾ ತಟ್ಟೆಯಲ್ಲಿ ಹಾಕಿ ಕೊಡುವುದು ಸಹಜ. ಇದರಲ್ಲಿ ಅಚ್ಚರಿಯೇನಿಲ್ಲ. ಕೆಲವೊಮ್ಮೆ ತಟ್ಟೆಯ ಗಾತ್ರ ನೋಡಿ ಬೆರಗಾಗುತ್ತೇವೆ. ಆದರೆ, ಮಹಿಳೆಯ ದೇಹದ ಮೇಲೆ ಆಹಾರವನ್ನು ಬಡಿಸುತ್ತಾರೆ ಅಂದರೆ ನೀವು ನಂಬುತ್ತೀರಾ? ಇದು ಅಚ್ಚರಿ ಎನಿಸಿದರೂ ಸತ್ಯ. ಇಂಥದ್ದೊಂದು ಹಳೆಯ ಪದ್ಧತಿ ಜಪಾನ್​ನಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.

    ಈ ಪದ್ಧತಿಯನ್ನು “ನ್ಯೋಟೈಮೊರಿ” ಎಂದು ಕರೆಯಲಾಗುತ್ತದೆ. ಯುದ್ಧದ ನಂತರ ವಿಜಯಶಾಲಿಗಳಿಗೆ ಅದ್ಧೂರಿ ಸ್ವಾಗತ ನೀಡಲು ನಡೆಯುತ್ತಿದ್ದ ಔತಣಕೂಟಗಳಲ್ಲಿ ಈ ವಿಧಾನವು ಅಸ್ತಿತ್ವದಲ್ಲಿತ್ತು. ಸುಂದರಿಯರನ್ನು ಊಟದ ಮೇಜಿನ ಮೇಲೆ ಬೆತ್ತಲಾಗಿ ಮಲಗಿಸಲಾಗುತ್ತದೆ. ಅವರ ಖಾಸಗಿ ಭಾಗಗಳನ್ನು ಹೂವುಗಳು ಅಥವಾ ಎಲೆಗಳಿಂದ ಮುಚ್ಚಲಾಗುತ್ತದೆ. ನಂತರ ಎಲೆಗಳನ್ನು ಜೋಡಿಸಿ, ಆಹಾರವನ್ನು ಬಡಿಸಲಾಗುತ್ತದೆ. ಬೇಕಾದ ಆಹಾರವನ್ನು ತೆಗೆದುಕೊಂಡು ಸೇವಿಸಬಹುದು.

    ಸಮುರಾಯ್ ಯುಗದಿಂದಲೂ ಈ ವಿಧಾನವು ಜಪಾನ್‌ನಲ್ಲಿದೆ ಎಂದು ಹೇಳಲಾಗುತ್ತದೆ. ಈಗಲೂ ಹೆಣ್ಣಿನ ಬೆತ್ತಲೆ ದೇಹಗಳು ಮತ್ತು ಹೆಣ್ಣಿನ ಪ್ರತಿಮೆಗಳ ಮೇಲೆ ಆಹಾರವನ್ನು ಬಡಿಸುವ ಹೋಟೆಲ್‌ಗಳಿವೆ. ಇದೇ ಸಂದರ್ಭದಲ್ಲಿ ಈ ವಿಧಾನವನ್ನು ಚೀನಾದಲ್ಲಿಯೂ ಅಳವಡಿಸಲಾಯಿತು ಮತ್ತು ಅಲ್ಲಿಯೂ ಇದು ಗಮನ ಸೆಳೆಯಿತು. ಬೆತ್ತಲೆ ದೇಹದ ಮೇಲೆ ಈ ರೀತಿ ಊಟ ಬಡಿಸುವುದು ವಾಡಿಕೆ ಎನ್ನುತ್ತಾರೆ. ಇದನ್ನು ನ್ಯೋಟೈಮೊರಿ ಎಂದು ಕರೆಯಲಾಯಿತು. ಆದರೆ, ಊಟ ಬಡಿಸಲು ಊಟದ ಮೇಜಿನ ಮೇಲೆ ಮಲಗುವ ಮಹಿಳೆಯರು ಸುಮ್ಮನೇ ಮಲಗುವಂತಿಲ್ಲ. ಅದಕ್ಕೆ ಉತ್ತಮ ತರಬೇತಿಯ ಅಗತ್ಯವಿದೆ. ಏಕೆಂದರೆ, ದೇಹದ ಮೇಲೆ ಬಿಸಿ ಭಕ್ಷ್ಯಗಳನ್ನು ಬಡಿಸಲಾಗುತ್ತದೆ. ಸುಮ್ಮನೆ ಮಲಗದಿದ್ದರೆ ಆಹಾರವೂ ಕೇಳಗೆ ಬೀಳುತ್ತದೆ.

    ಬಿಸಿ ಮತ್ತು ತಣ್ಣನೆಯ ಆಹಾರವನ್ನು ಬೆತ್ತಲೆ ದೇಹದ ಮೇಲೆ ಇರಿಸಿಕೊಳ್ಳಲು ವಿಶೇಷ ಸಾಮರ್ಥ್ಯವನ್ನು ಹೊಂದಿರಬೇಕು. ಅಲ್ಲದೆ ತಲೆಯನ್ನು ಹೊರತುಪಡಿಸಿ ದೇಹದ ಮೇಲಿನ ಕೂದಲನ್ನು ತೆಗೆಯಬೇಕು. ಸರ್ವಿಂಗ್ ಮಾಡೆಲ್‌ನ ದೇಹವನ್ನು ವಿಶೇಷ ಸಾಬೂನಿನಿಂದ ಸ್ವಚ್ಛಗೊಳಿಸಲಾಗುತ್ತದೆ ಮತ್ತು ಆಹಾರವನ್ನು ಬರಡಾದ ಎಲೆಗಳ ಮೇಲೆ ನೀಡಲಾಗುತ್ತದೆ. ಇದೊಂದು ಸುಂದರವಾದ ಕಲೆ ಎಂದು ಹೇಳಲಾಗುತ್ತದೆ. (ಏಜೆನ್ಸೀಸ್​)

    ಹುಟ್ಟುಹಬ್ಬದಂದೇ ಕೇಕ್​ ತಿಂದು ಬಾಲಕಿ ಸಾವು ಪ್ರಕರಣ: ತಿಂಗಳ ಬಳಿಕ ಭಯಾನಕ ಸಂಗತಿ ಬಯಲು

    ನಾನು ಮೂರು ಮದ್ವೆಯಾಗಿದ್ರೂ ಈತನೊಂದಿಗೆ ಮಾತ್ರ ತುಂಬಾ ಖುಷಿಯಾಗಿದ್ದೀನಿ! ನಟಿ ಲಕ್ಷ್ಮೀ ಓಪನ್ ಟಾಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts