More

    ನಮಸ್ಕಾರ ದೇವ್ರು.. ಇಲ್ಲಿ ದೇವ್ರದ್ದೇ ಬ್ಯಾಟಿಂಗ್​-ಫೀಲ್ಡಿಂಗ್​!; ಡಾ.ಬ್ರೋ ಭೇಟಿ ನೀಡಿರುವ ಈ ಕ್ರಿಕೆಟ್ ದೇವಸ್ಥಾನ ಎಲ್ಲಿದೆ?

    ಬೆಂಗಳೂರು: ಡಾ.ಬ್ರೋ ವಿಶ್ವ ಪರ್ಯಟನೆ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವಂಥದ್ದೇ. ಇಷ್ಟು ದಿನ ವಿಶ್ವದ ವಿವಿಧ ದೇಶಗಳನ್ನು ತೋರಿಸುತ್ತಿದ್ದ ಗಗನ್ ಶ್ರೀನಿವಾಸ್ ಇದೀಗ ವಿಶ್ವಕಪ್ ಕ್ರಿಕೆಟ್​ ಪಂದ್ಯಾವಳಿಯ ವಿವಿಧ ಆಯಾಮಗಳನ್ನು ತೋರಿಸಲು ಮುಂದಾಗಿದ್ದಾರೆ.

    ನಾಳೆ ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಈ ಪಂದ್ಯದ ವಿಶೇಷಗಳನ್ನು ಕನ್ನಡಿಗರಿಗೆ ತೋರಿಸಲೆಂದೇ ಡಾ.ಬ್ರೋ ಚೆನ್ನೈಗೆ ತೆರಳಿದ್ದು, ಅಲ್ಲಿರುವ ಒಂದು ವಿಶೇಷವಾದ ದೇವಸ್ಥಾನದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

    ದೇವಸ್ಥಾನವೊಂದರಲ್ಲಿ ಬ್ಯಾಟಿಂಗ್ ಮಾಡುವ, ಫೀಲ್ಡಿಂಗ್ ಮಾಡುವ ಗಣೇಶ ಮೂರ್ತಿಗಳ ಜತೆ ಕ್ರಿಕೆಟ್ ತಂಡದಲ್ಲಿನ 11 ಆಟಗಾರರ ದ್ಯೋತಕವಾಗಿ ಹನ್ನೊಂದು ತಲೆಯ ಗಣಪತಿಯ ಮೂರ್ತಿಗಳು ಇರುವುದನ್ನು ಡಾ.ಬ್ರೋ ತೋರಿಸಿದ್ದಾರೆ. ಮಾತ್ರವಲ್ಲದೆ, ಆ ದೇವಸ್ಥಾನದ ಹಿನ್ನೆಲೆಯನ್ನೂ ಕೂಡ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ:‘ಅಭಿಮಾನಿ ದೇವರುಗಳೇ.. ನಮಸ್ಕಾರ ದೇವರು’: ಡಾ.ರಾಜ್​ ಆದರ್ಶದ ಡಾ.ಬ್ರೋ! 

    ಸುಮಾರು ಹತ್ತು ವರ್ಷಗಳ ಹಿಂದೆ ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ನಡೆದ ಟೆಸ್ಟ್ ಮ್ಯಾಚ್​ನಲ್ಲಿ ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿ ಭಾರತ ತಂಡದ್ದಾಗಿತ್ತು. ಅಂಥ ಸಂದರ್ಭದಲ್ಲಿ ಭಾರತ ಗೆಲ್ಲಲಿ ಎಂದು ಹರಕೆ ಹೊತ್ತಿದ್ದ ದಂಪತಿ ಈ ಕ್ರಿಕೆಟ್​ ಆಡುವ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ ಎಂದು ತಿಳಿಸಿರುವ ಡಾ.ಬ್ರೋ, ಆ ಗಣೇಶನ ಮೂರ್ತಿಗಳಿಗೆ ಸ್ವತಃ ಪೂಜೆ ಮಾಡಿದ್ದಾರೆ.

    ಕ್ರಿಕೆಟ್ ಪಂದ್ಯಾವಳಿಯ ಸಂದರ್ಭದಲ್ಲಿ ಚೆನ್ನೈನ ಕ್ರಿಕೆಟ್​ಪ್ರಿಯರು ಈ ದೇವಸ್ಥಾನಕ್ಕೆ ಬಂದು ಭಾರತ ತಂಡ ಗೆಲ್ಲಲಿ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಹತ್ತು ವರ್ಷಗಳ ಹಿಂದೆ ಆಸ್ಟ್ರೇಲಿಯಾದ ಎದುರು ಭಾರತ ಗೆದ್ದಂತೆ ಈ ಸಲವೂ ಭಾರತ ಗೆಲ್ಲಲಿ ಎಂದು ನಾವೆಲ್ಲ ಪ್ರಾರ್ಥಿಸೋಣ ಎಂದು ಡಾ.ಬ್ರೋ ಹೇಳಿದ್ದಾರೆ.

    ವಿಶ್ವಪರ್ಯಟನೆಯಲ್ಲಿ ಗಗನಸುಖಿ: ನಮಸ್ಕಾರ ದೇವರು.. ಇದು ಡಾಕ್ಟರ್ ಬ್ರೋ..!

    ‘ನಮಸ್ಕಾರ ದೇವರು’ ಅಂತ ಹೇಳೋದ್ಯಾಕೆ ಡಾಕ್ಟರ್​ ಬ್ರೋ?; ಹಣ ಬೇಕಾದಾಗ ಯಾವ ಹೋಟೆಲ್​ಗೆ ಹೋಗ್ತಾರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts