More

    ಮಂಚದಡಿಯಲ್ಲಿ ಕೋಟಿಗಟ್ಟಲೆ ಹಣ!; ತಿರುಗುಬಾಣ ಆಗಲಿದೆಯೇ 40% ಕಮಿಷನ್ ಪ್ರಕರಣ?

    ಬೆಂಗಳೂರು: ಕೆಲವು ತಿಂಗಳುಗಳ ಹಿಂದೆ ಸರ್ಕಾರಿ ಅಧಿಕಾರಿಯೊಬ್ಬರ ಅಕ್ರಮ ಸಂಪಾದನೆಯ ನೋಟುಗಳ ಕಂತೆ ಮನೆಯ ನೀರಿನ ಪೈಪ್​ನಲ್ಲಿ ಕಂಡುಬಂದಿತ್ತು. ಇದೀಗ ಅಂಥದ್ದೇ ಒಂದು ಪ್ರಕರಣದಲ್ಲಿ ಮಂಚದಡಿಯಲ್ಲಿ ಕೋಟಿಗಟ್ಟಲೆ ಹಣ ಸಿಕ್ಕಿದೆ. ಅಚ್ಚರಿ ಎಂದರೆ ಇದು ಈ ಹಿಂದಿನ ಒಂದು ದೊಡ್ಡ ಭ್ರಷ್ಟಾಚಾರ ಆರೋಪದಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಗೋಚರಿಸಿದೆ.

    ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ಬೆಂಗಳೂರಿನಲ್ಲಿ ನಡೆಸಿದ ದಾಳಿಯಲ್ಲಿ ಕೋಟಿಗಟ್ಟಲೆ ಮೊತ್ತದ ನೋಟುಗಳ ಕಂತೆಗಳು ಸಿಕ್ಕಿವೆ. ನಗರದ ಐದು ಕಡೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ಆ ಪೈಕಿ ಆರ್.​​​​ಟಿ.ನಗರದ ಆತ್ಮಾನಂದ ಕಾಲನಿಯಲ್ಲಿ ಈ ಹಣ ಪತ್ತೆಯಾಗಿದೆ.

    ಇದನ್ನೂ ಓದಿ: ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳ ಭರ್ಜರಿ ಬೇಟೆ; 23 ಬಾಕ್ಸ್ ನಲ್ಲಿದ್ದ ಕೋಟ್ಯಂತರ ರೂ.ಹಣ ಸೀಜ್

    ಅಶ್ವತ್ಥಮ್ಮ ಹಾಗೂ ಅಂಬಿಕಾಪತಿ ದಂಪತಿಯ ಮನೆಯಲ್ಲಿ ಈ ಭಾರಿ ಹಣ ಸಿಕ್ಕಿದೆ. ಅಂಬಿಕಾಪತಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾಗಿದ್ದು, ಅವರ ಪತ್ನಿ ಅಶ್ವತ್ಥಮ್ಮ ಬಿಬಿಎಂಪಿಯ ಮಾಜಿ ಕಾರ್ಪೋರೇಟರ್​. ಮಂಚದಡಿಯಲ್ಲಿ 23 ಬಾಕ್ಸ್​ಗಳಲ್ಲಿ ಇರಿಸಲಾಗಿದ್ದ ಈ ನೋಟುಗಳ ಕಂತೆಗಳನ್ನು ನೋಡಿ ಅಧಿಕಾರಿಗಳು ದಂಗಾಗಿದ್ದಾರೆ.

    ಇದನ್ನೂ ಓದಿ: PWD ಇಂಜಿನಿಯರ್​ ಮನೆಯ ಬಕೆಟ್​ನಲ್ಲೂ ದುಡ್ದು, ನೀರಿನ ಪೈಪ್​ನಲ್ಲೂ ಹರಿಯುತ್ತಿದೆ ಕಂತೆ ಕಂತೆ ನೋಟು!

    40% ಪ್ರಕರಣಕ್ಕೆ ತಿರುವು ಸಾಧ್ಯತೆ

    ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಹೊರಿಸಿದ್ದರು. ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಬೇಕಿದ್ದರೆ 40% ಕಮಿಷನ್ ಕೊಡಬೇಕಾದ ಪರಿಸ್ಥಿತಿ ಎಂದು ಅವರು ಆರೋಪ ಹೊರಿಸಿದ್ದು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಆಗಿನ ವಿರೋಧ ಪಕ್ಷ ಈ ಪ್ರಕರಣವನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿತ್ತು. ಪೇಟಿಎಂ ಮಾದರಿಯಲ್ಲಿ ಪೇಸಿಎಂ ಎಂಬ ಪೋಸ್ಟರ್ ತಯಾರಿಸಿ ರಾಜಧಾನಿಯ ಗೋಡೆಗಳ ಮೇಲೆ ರಾತ್ರೋರಾತ್ರಿ ಅಂಟಿಸುವ ಮೂಲಕ ಈ ಆರೋಪ ಇನ್ನಷ್ಟು ಜೀವ ಪಡೆಯುವಂತೆ ಮಾಡಲಾಗಿತ್ತು. ಆದರೆ ಇದೀಗ ಆ 40% ಕಮಿಷನ್ ಆರೋಪ ಪ್ರಕರಣ ತಿರುವು ಪಡೆದರೂ ಅಚ್ಚರಿ ಏನಲ್ಲ.

    ಇದನ್ನೂ ಓದಿ: ‘ಡಿ.ಕೆ.ಶಿವಕುಮಾರ್ ಕಾಣೆಯಾಗಿದ್ದಾರೆ, ದಯವಿಟ್ಟು ಹುಡುಕಿಕೊಡಿ’: ಪೋಸ್ಟರ್ ಹರಿಬಿಟ್ಟ ಬಿಜೆಪಿ

    ಅಂದಿನ 40% ಕಮಿಷನ್ ಆರೋಪ ಪ್ರಕರಣ ತಿರುವು ಪಡೆಯುವ ಸಾಧ್ಯತೆ ಒಂದೆಡೆಯಾದರೆ, ಇನ್ನೊಂದೆಡೆ ಈ ಪ್ರಕರಣ ತಿರುಗುಬಾಣ ಆಗುವ ಲಕ್ಷಣಗಳೂ ಕಾಣಿಸುತ್ತಿವೆ. ಏಕೆಂದರೆ ಅಂದು ಈ ಪ್ರಕರಣ ಅಸ್ತ್ರವಾಗಿ ಬಳಸಿಕೊಂಡು ಬಿಜೆಪಿ ಮೇಲೆ ಮುಗಿಬಿದ್ದ ಕಾಂಗ್ರೆಸ್ ಇಂದು ಅಧಿಕಾರದಲ್ಲಿದೆ. ಅಲ್ಲದೆ ಅಂದು ಈ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಮನೆಯಲ್ಲೇ ಈ ಕಂತೆಗಟ್ಟಲೆ ಹಣ ಸಿಕ್ಕಿದೆ. ಹೀಗಾಗಿ ಅಂಬಿಕಾಪತಿಗೆ ಆ ಕಮಿಷನ್ ಪ್ರಕರಣವೇ ತಿರುಗುಬಾಣವಾಗಬಹುದು. ಅಲ್ಲದೆ ಮಂಚದಡಿ ಕಂತೆಗಟ್ಟಲೆ ಹಣ ಸಿಕ್ಕ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಈಗಾಗಲೇ ಕಾಂಗ್ರೆಸ್​ ಮೇಲೆ ಮುಗಿಬಿದ್ದಿದೆ. ಒಟ್ಟಿನಲ್ಲಿ ಇದೊಂದೇ ದಾಳಿಯಿಂದ ದೊಡ್ಡದೊಂದು ಭ್ರಷ್ಟಾಚಾರ ಆರೋಪ ಪ್ರಕರಣವೂ ಮುನ್ನೆಲೆಗೆ ಬಂದಿದ್ದಲ್ಲದೆ, ಆ ಕುರಿತು ಕುತೂಹಲವೂ ಕೆರಳುವಂತೆ ಮಾಡಿದೆ.

    ಭಿಕ್ಷೆ ಬೇಡುತ್ತಿದ್ದ ವಿದೇಶಿ ಮಹಿಳೆಯ ಬದುಕು ಬದಲಿಸಿದ ಭಾರತೀಯ; ಯಾರೀಕೆ, ಈಗೇನು ಮಾಡುತ್ತಿದ್ದಾರೆ?

    ಹಮಾಸ್​ ದಾಳಿ: ಐವರು ಹಂತಕರನ್ನು ಸ್ವತಃ ಕೊಂದ ಎದೆಗಾತಿ; 20 ಉಗ್ರರ ಹತ್ಯೆಗೆ ನೇತೃತ್ವ ವಹಿಸಿದ ದಿಟ್ಟ ಯುವತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts