More

    ‘ಡಿ.ಕೆ.ಶಿವಕುಮಾರ್ ಕಾಣೆಯಾಗಿದ್ದಾರೆ, ದಯವಿಟ್ಟು ಹುಡುಕಿಕೊಡಿ’: ಪೋಸ್ಟರ್ ಹರಿಬಿಟ್ಟ ಬಿಜೆಪಿ

    ಬೆಂಗಳೂರು: ಬಿಜೆಪಿ ಆಡಳಿತವಿದ್ದಾಗ ಆ ಸರ್ಕಾರದ ಮೇಲೆ 40% ಕಮಿಷನ್ ಆರೋಪ ಬಂದಾಗ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಆಗ ಅವರ ಫೋಟೋದೊಂದಿಗೆ ಪೇಟಿಎಂ ಮಾದರಿಯಲ್ಲಿ ಪೇಸಿಎಂ ಎಂಬ ಪೋಸ್ಟರ್ ರಚಿಸಿ ಕಾಂಗ್ರೆಸ್​ ಎಲ್ಲೆಡೆ ಅಂಟಿಸಿ, ಹರಿಬಿಟ್ಟು ಸಂಚಲನ ಸೃಷ್ಟಿಸಿತ್ತು.

    ಇದೀಗ ಅದೇ ಮಾದರಿಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ತಿರುಗಿಬಿದ್ದಿದ್ದು, ಉಪ ಮುಖ್ಯಮಂತ್ರಿ ಅವರನ್ನೇ ಕಾಣೆ ಆಗಿಸಿದೆ. ಅರ್ಥಾತ್, ‘ಡಿ.ಕೆ.ಶಿವಕುಮಾರ್​ ಕಾಣೆಯಾಗಿದ್ದಾರೆ, ದಯವಿಟ್ಟು ಹುಡುಕಿಕೊಂಡಿ’ ಎಂದು ಕಾಣೆಯಾದವರ ಜಾಹೀರಾತು ಮಾದರಿಯಲ್ಲಿ ಪೋಸ್ಟರ್​ ರಚಿಸಿ ಹರಿಬಿಟ್ಟು ತಿರುಗೇಟು ನೀಡಿದೆ.

    ಇದನ್ನೂ ಓದಿ: ಹೈ ಅಲರ್ಟ್​: ವಿದ್ಯಾರ್ಥಿಗಳ ಮೇಲೆ ಅಪರಿಚಿತರಿಂದ ವಿಚಿತ್ರ ಲಿಕ್ವಿಡ್ ಸ್ಪ್ರೇ!; ಮೈಗೆ ತಾಕುತ್ತಿದ್ದಂತೆ ಅಲರ್ಜಿ..

    “ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ‘ದೊಡ್ಡಮಟ್ಟದಲ್ಲಿ ಸಹಕರಿಸಿದ’ ಋಣವನ್ನು ತೀರಿಸಲು ಹಾಗೂ ಲೋಕಸಭಾ ಚುನಾವಣೆಯ ಬಳಿಕ ಸಿಎಂ ಕುರ್ಚಿಗೆ ಲಾಬಿ ಮಾಡಲು, ಕಾವೇರಿಯನ್ನು ಸ್ಟಾಲಿನ್‌ ನಾಡಿಗೆ ಬೇಕಾಬಿಟ್ಟಿಯಾಗಿ ಹರಿಬಿಟ್ಟು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್​ ನಾಪತ್ತೆಯಾಗಿದ್ದಾರೆ, ದಯವಿಟ್ಟು ಹುಡುಕಿಕೊಡಿ..” ಎಂದು ಡಿ.ಕೆ.ಶಿವಕುಮಾರ್ ಫೋಟೋ ಇರುವ ಪೋಸ್ಟರ್​ನೊಂದಿಗೆ ಬಿಜೆಪಿ ವಾಗ್ದಾಳಿ ನಡೆಸಿದೆ.

    ಇದನ್ನೂ ಓದಿ: ಹಮಾಸ್​ ದಾಳಿ: ಐವರು ಹಂತಕರನ್ನು ಸ್ವತಃ ಕೊಂದ ಎದೆಗಾತಿ; 20 ಉಗ್ರರ ಹತ್ಯೆಗೆ ನೇತೃತ್ವ ವಹಿಸಿದ ದಿಟ್ಟ ಯುವತಿ!

    ಈ ಮೂಲಕ ಕಾಂಗ್ರೆಸ್​-ಬಿಜೆಪಿ ನಡುವಿನ ಸಂಘರ್ಷ ಮತ್ತೊಂದು ಮಜಲಿಗೆ ತಲುಪಿದ್ದು, ಎರಡೂ ಪಕ್ಷಗಳು ಪರಸ್ಪರ ದೋಷಾರೋಪಣೆಗೆ ವಿಭಿನ್ನ, ವಿನೂತನ ತಂತ್ರಗಳನ್ನು ಹೆಣೆಯುತ್ತಿವೆ. ಪರಿಣಾಮವಾಗಿ, ರಾಜಕೀಯ ಆರೋಪ-ಪ್ರತ್ಯಾರೋಪಗಳು ತೀವ್ರವಾಗಿ ವ್ಯಕ್ತವಾಗುತ್ತಿದ್ದು, ಇದಕ್ಕೆ ಆಯಾಪಕ್ಷಗಳ ಬೆಂಬಲಿಗರೂ ದನಿಗೂಡಿಸುತ್ತಿರುವ ಮೂಲಕ, ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗುತ್ತಿದೆ.

    ಭಿಕ್ಷೆ ಬೇಡುತ್ತಿದ್ದ ವಿದೇಶಿ ಮಹಿಳೆಯ ಬದುಕು ಬದಲಿಸಿದ ಭಾರತೀಯ; ಯಾರೀಕೆ, ಈಗೇನು ಮಾಡುತ್ತಿದ್ದಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts