More

    ಹಮಾಸ್​ ದಾಳಿ: ಐವರು ಹಂತಕರನ್ನು ಸ್ವತಃ ಕೊಂದ ಎದೆಗಾತಿ; 20 ಉಗ್ರರ ಹತ್ಯೆಗೆ ನೇತೃತ್ವ ವಹಿಸಿದ ದಿಟ್ಟ ಯುವತಿ!

    ನವದೆಹಲಿ: ಹಮಾಸ್ ಉಗ್ರರ ದಾಳಿಯಿಂದ ರಣಾಂಗಣ ಆಗಿರುವ ಇಸ್ರೇಲ್​ನಲ್ಲಿ 25 ವರ್ಷದ ಯುವತಿಯೊಬ್ಬಳು 25 ಉಗ್ರರ ಹತ್ಯೆಗೆ ಕಾರಣವಾಗಿದ್ದಾಳೆ. ಆ ಪೈಕಿ 20 ಉಗ್ರರ ಹತ್ಯೆಗೆ ನೇತೃತ್ವ ವಹಿಸಿದ್ದ ಈಕೆ ಇನ್ನು ಐವರು ಉಗ್ರರನ್ನು ಸ್ವತಃ ಎದುರಿಸಿ ಸದೆಬಡಿದಿದ್ದಾಳೆ.

    ಇಸ್ರೇಲ್​ನ ನಿರ್ ಅಂ ಕಿಬುಟ್ಜ್​ನಲ್ಲಿ ಭದ್ರತಾ ಮುಖ್ಯಸ್ಥೆ ಆಗಿರುವ ಇನ್ಬರ್ ಲೀಬರ್ಮನ್ ಎಂಬ 25ರ ಯುವತಿಯೇ ಆ ಎದೆಗಾತಿ. ಈ ಕಿಬ್ಬುಟ್ಜ್​ನಲ್ಲಿ 2022ರ ಡಿಸೆಂಬರ್​ನಿಂದ ಭದ್ರತಾ ಮುಖ್ಯಸ್ಥೆ ಆಗಿರುವ ಈಕೆ ತನ್ನ ಜವಾಬ್ದಾರಿಯನ್ನು ಸವಾಲಾಗಿ ತೆಗೆದುಕೊಂಡಿದ್ದು, ಅಲ್ಲಿನ ಅಷ್ಟೂ ಮಂದಿಯನ್ನು ರಕ್ಷಿಸಿಕೊಂಡಿದ್ದಲ್ಲದೆ, ತನ್ನ ತಂಡದ ನೆರವಿನೊಂದಿಗೆ ಒಟ್ಟು 25 ಉಗ್ರರನ್ನು ಹೊಡೆದುರುಳಿಸಿದ್ದಾಳೆ.

    ಇದನ್ನೂ ಓದಿ: ನಿಧನದ ವಿಚಾರದಲ್ಲಿರಲಿ ನಿಧಾನ: ಸುಳ್ಳೇ ಏಕೆ ಸಾಯಿಸುವರೋ!; ಇನ್ನಿಲ್ಲ ಎಂಬ ಸುದ್ದಿ ಬಂದಾಗ ಇನ್ನೇನು ಮಾಡಬೇಕು?

    ಶನಿವಾರ ಬೆಳಗ್ಗೆ ಕಿಬ್ಬುಟ್ಜ್ ಸಮೀಪದಲ್ಲಿ ಸ್ಫೋಟಕ ಸದ್ದು ಕೇಳಿಸುತ್ತಿದ್ದಂತೆ ಇನ್ಬರ್​ ಮತ್ತಾಕೆಯ ತಂಡ ಅಲರ್ಟ್ ಆಗಿತ್ತು. ಸಾಮಾನ್ಯ ರಾಕೆಟ್ ದಾಳಿಗಿಂತಲೂ ಈ ಸದ್ದು ವಿಭಿನ್ನವಾಗಿದ್ದರಿಂದ ತಕ್ಷಣ ಕಾರ್ಯಪ್ರವೃತ್ತಗೊಂಡ ಈಕೆ ತನ್ನ ಇತರ 12 ಭದ್ರತಾ ಸಿಬ್ಬಂದಿಗೆ ಗನ್​ಗಳನ್ನು ನೀಡಿ, ಎಂಥ ಪರಿಸ್ಥಿತಿಯನ್ನೂ ಎದುರಿಸಲು ತಕ್ಷಣ ಸಜ್ಜಾಗಿರುವಂತೆ ಸೂಚಿಸಿದಳು.

    ಇದನ್ನೂ ಓದಿ: ಹಮಾಸ್ ಮಾಸ್ಟರ್​ಮೈಂಡ್​ ಮನೆ ಮೇಲೆರಗಿದ ಇಸ್ರೇಲ್ ರಾಕೆಟ್; ಆತನ ಮಗ, ಸಹೋದರ, ಸಹೋದರನ ಮೊಮ್ಮಗಳ ಸಾವು..

    ಆಕೆ ತನ್ನ ಪ್ರದೇಶದ ಆಯಕಟ್ಟಿನ ಸ್ಥಳಗಳಲ್ಲಿ ತನ್ನವರನ್ನು ನಿಯೋಜಿಸಿ ಹೊಂಚು ಹಾಕಿ ದಾಳಿ ನಡೆಸಲು ನಿರ್ದೇಶನ ನೀಡಿದಳು. ಜೊತೆಗೆ ಕಿಬ್ಬುಟ್ಜ್​ನ ಮಕ್ಕಳು ಮಹಿಳೆಯರನ್ನೆಲ್ಲ ಸುರಕ್ಷಿತ ಸ್ಥಳದಲ್ಲಿ ಇರಿಸಿದಳು. ಇತ್ತ ಈಕೆಯ ತಂಡದವರು 20 ಉಗ್ರರನ್ನು ಹೊಡೆದುರುಳಿಸಿದರೆ, ಇವಳು ಸ್ವತಃ ಐವರು ಉಗ್ರರನ್ನು ಸದೆಬಡಿದಳು.

    ಹೀಗೆ ತನ್ನ ಭದ್ರತೆಯಲ್ಲಿದ್ದ ಕಿಬ್ಬುಟ್ಜ್​ಗೆ ಸೇರಿದವರಲ್ಲಿ ಯಾರೂ ಹತರಾಗದಂತೆ ರಕ್ಷಣೆ ಮಾಡಿದ್ದಕೊಂಡಿದ್ದಲ್ಲದೆ, ಅಲ್ಲಿಗೆ ದಾಳಿಗೆ ಮುಂದಾಗಿ ಬಂದಿದ್ದ ಅಷ್ಟೂ ಹಮಾಸ್ ಉಗ್ರರನ್ನು ಸದೆಬಡಿದಿದ್ದಾಳೆ. ಈ ಮೂಲಕ ಈಕೆಯ ಬಗ್ಗೆ ಇದೀಗ ಭಾರಿ ಮೆಚ್ಚುಗೆ ವ್ಯಕ್ತವಾಗಲಾರಂಭಿಸಿದೆ.

    ಏನಿದು ಕಿಬ್ಬುಟ್ಜ್?: ಇಸ್ರೇಲ್​ನಲ್ಲಿನ ನಿಗದಿತ ಸಮುದಾಯಗಳನ್ನು ಕಿಬ್ಬುಟ್ಜ್ ಎಂದು ಕರೆಯಲಾಗುತ್ತದೆ. ಹೀಬ್ರೂ ಭಾಷೆಯಲ್ಲಿ ಕಿಬ್ಬುಟ್ಜ್ ಎಂದರೆ ಗುಂಪುಗೂಡುವುದು ಎಂದರ್ಥ. ಸ್ಪರ್ಧಾತ್ಮಕವಲ್ಲ ಸ್ವಯಂಪ್ರೇರಿತ ಜೀವನದ ಆಧಾರದ ಮೇಲೆ ಇಂಥ ಗುಂಪಿನವರು ಜೊತೆಯಾಗಿ ಜೀವಿಸುತ್ತಾರೆ.

    ಪೊದೆಯಲ್ಲಿ ಯುವ ಜೋಡಿ, ಫೋಟೋ ವೈರಲ್​: ಅಷ್ಟಕ್ಕೂ ಅಲ್ಲಿ ಆಗಿದ್ದೇನು?

    ‘ಇಂಡಿಯಾ’ಗೇ ಗುಡ್​​ಬೈ ಹೇಳಿ ‘ಡಿಜಿಟಲ್ ಯುದ್ಧ’ಕ್ಕಿಳಿದ ಇಸ್ರೇಲಿಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts