More

    ನಿಧನದ ವಿಚಾರದಲ್ಲಿರಲಿ ನಿಧಾನ: ಸುಳ್ಳೇ ಏಕೆ ಸಾಯಿಸುವರೋ!; ಇನ್ನಿಲ್ಲ ಎಂಬ ಸುದ್ದಿ ಬಂದಾಗ ಇನ್ನೇನು ಮಾಡಬೇಕು?

    ಬೆಂಗಳೂರು: ಯಾರಾದರೂ ಹತ್ತಿರದವರು ಇಲ್ಲವೇ ತುಂಬಾ ಇಷ್ಟದವರು ಸಾವಿಗೀಡಾದರು ಎಂಬ ಸುದ್ದಿ ಕೇಳಿದ ತಕ್ಷಣ ಸಾಮಾನ್ಯವಾಗಿ ಮನಸಿಗೆ ಬರುವುದು, ‘ದೇವರೇ ಈ ಸುದ್ದಿ ಸುಳ್ಳಾಗಲಿ’ ಎಂಬ ಯೋಚನೆ ಮತ್ತು ಪ್ರಾರ್ಥನೆ. ಆದರೆ ಇತ್ತೀಚೆಗೆ ಸುಳ್ಳೇ ಸಾಯಿಸುವುದು ಹೆಚ್ಚಾಗಿದೆ.

    ಅಂದರೆ ಯಾರಾದರೂ ಅನಾರೋಗ್ಯದಲ್ಲಿದ್ದರೆ ಅಥವಾ ತೀವ್ರ ಅಸ್ವಸ್ಥಗೊಂಡಿದ್ದರೆ ಯಾರೋ ಒಬ್ಬರು ಅವರು ಸತ್ತೇ ಹೋದರು ಎಂಬ ಸುದ್ದಿ ಹರಿಯಬಿಡುತ್ತಾರೆ. ಅದರ ಬೆನ್ನಿಗೇ ಒಂದಷ್ಟು ಮಂದಿ ಅದನ್ನು ಪರಿಶೀಲಿಸಿಕೊಳ್ಳದೆ RIP ಎಂಬ ಕ್ಯಾಪ್ಷನ್​ನೊಂದಿಗೆ ಆ ಸುದ್ದಿಯನ್ನು ಮತ್ತಷ್ಟು ಜನರಿಗೆ ಹಬ್ಬಿಸಿಬಿಡುತ್ತಾರೆ.

    ಅಷ್ಟರಲ್ಲಾಗಲೇ ಈ ವಿಷಯ ಸಂಬಂಧಪಟ್ಟವರ ಮನೆಯವರಿಗೆ ತಲುಪಿ ಅಲ್ಲಿಂದ ಒಂದು ಸ್ಪಷ್ಟೀಕರಣ ಬಂದಮೇಲಷ್ಟೇ ಅದು ಸುಳ್ಳು ಎಂಬುದು ಸಾಬೀತಾಗಿರುತ್ತದೆ. ಆದರೆ ಅಷ್ಟರೊಳಗಾಗಲೇ ಸತ್ತಿದ್ದರನ್ನೆಲಾದವರ ಬಗ್ಗೆ ಗೊತ್ತಿದ್ದವರು ಕೂಡ ಅವರು ಇನ್ನಿಲ್ಲ ಎಂಬ ಸುದ್ದಿಯನ್ನು ಅದಾಗಲೇ ಹಲವಾರು ಮಂದಿಗೆ ತಲುಪಿಸಿರುತ್ತಾರೆ.

    ಇದನ್ನೂ ಓದಿ: ನಿಮ್ಮ ದಾಖಲೆ ಬಳಸಿ ಬೇರೆಯವರು ಸಿಮ್ ಖರೀದಿಸಿದ್ದರೆ ತಿಳಿಯುವುದು ಹೇಗೆ?

    ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಱ ಅಮರ್ತ್ಯ ಸೇನ್ ವಿಚಾರದಲ್ಲಿ ಇಂದು ಹೀಗಾಗಿದೆ. ಮೊನ್ನೆಮೊನ್ನೆಯಷ್ಟೇ ಸಾಲುಮರದ ತಿಮ್ಮಕ್ಕ ವಿಚಾರದಲ್ಲೂ ಹೀಗೇ ಸುಳ್ಳೇ ಸಾಯಿಸಿದ್ದರು. ಕೆಲವು ದಿನಗಳ ಹಿಂದೆ ನಟ ಶರತ್​ಬಾಬು ಅವರು ಇದ್ದಾಗಲೇ ಅವರು ನಿಧನರಾಗಿದ್ದರು ಎಂಬ ಸುದ್ದಿ ಹಬ್ಬಿತ್ತು. ನಟ ಕಮಲ್​ಹಾಸನ್ ಕೂಡ ಆ ಬಗ್ಗೆ ಬೇಸರ ವ್ಯಕ್ತಪಡಿಸಿ ಪೋಸ್ಟ್ ಹಾಕಿ ಬಳಿಕ ಅದನ್ನು ಡಿಲೀಟ್ ಮಾಡಿದ್ದರು.

    ಇದನ್ನೂ ಓದಿ: ನನ್ನ ಸಾವಿನ ಸುದ್ದಿ ಹರಿಬಿಟ್ಟ ವ್ಯಕ್ತಿಗೆ ಥ್ಯಾಂಕ್ಸ್​! ಆ ರೀತಿ ಏನೂ ನಡೆದಿಲ್ಲ ಅಂದ್ರು ಶಕೀಲಾ!

    ಯಾಕೆ ಹೀಗೆ?

    ಇನ್ನೊಬ್ಬರ ಸಾವಿನ ಸುದ್ದಿ ಅವರು ಬದುಕಿದ್ದಾಗಲೇ ಹೀಗೆ ಹರಡುವುದು ಏಕೆ ಎನ್ನುವ ಬಗ್ಗೆ ಇದಮಿತ್ಥಂ ಎಂಬ ಕಾರಣ ಹೇಳುವುದು ಕಷ್ಟ. ಆದರೆ ಬಹಳಷ್ಟು ಮಂದಿ ಇಂಥ ಸುದ್ದಿಯನ್ನು ಪರಿಶೀಲಿಸದೆ ಅದನ್ನು ಇನ್ನೊಬ್ಬರಿಗೆ ತಲುಪಿಸುವ ಧಾವಂತ ಹೊಂದಿರುವುದು ಇದಕ್ಕೆ ಮುಖ್ಯ ಕಾರಣ. ಇನ್ನು ಕೆಲವರಿಗೆ ತಾವೇ ಮೊದಲು ತಿಳಿದದ್ದು ಎಂದಾಗಬೇಕು, ತಮ್ಮಿಂದಲೇ ಬಹಳಷ್ಟು ಜನರಿಗೆ ಗೊತ್ತಾಗಬೇಕು ಎಂಬ ಮನಸ್ಥಿತಿಯೂ ಇಂಥದ್ದಕ್ಕೆ ಕಾರಣವಾಗಿರುತ್ತದೆ.

    ಇದನ್ನೂ ಓದಿ: ನಟ ಶರತ್​ಬಾಬು ಕುರಿತು ಏನಿದು ವದಂತಿ?: ಟ್ವೀಟ್ ಮಾಡಿ ಡಿಲೀಟ್ ಮಾಡಿದ ಕಮಲಹಾಸನ್!

    ಏನು ಮಾಡಬೇಕು?

    – ಯಾರದ್ದೇ ಸಾವಿನ ಸುದ್ದಿ ಬಂದಾಗಲೂ ಅದರ ಮೂಲ ಖಚಿತಪಡಿಸಿಕೊಳ್ಳಿ.
    – ಸುದ್ದಿ ನಿಜ ಅನಿಸಿದರೂ ಇನ್ನೊಬ್ಬರಿಗೆ ತಲುಪಿಸುವ ಧಾವಂತ ಬೇಡ.
    – ಸಾವಿನ ಸುದ್ದಿಯ ಸಂದೇಶವನ್ನು ತಕ್ಷಣ ಫಾರ್ವರ್ಡ್ ಮಾಡುವ ಮೊದಲು ಹಲವು ಸಲ ಯೋಚಿಸಿ.
    – ನಿಧನರಾದರು ಎನ್ನಲಾದ ವ್ಯಕ್ತಿಯ ಸಂಬಂಧಿಕರು, ಸ್ನೇಹಿತರು, ಪರಿಚಿತರ ಸಂಪರ್ಕವಿದ್ದರೆ ಅವರನ್ನು ಒಮ್ಮೆ ಕೇಳಿ ನಿಜವೇ ಎಂದು ಖಚಿತಪಡಿಸಿಕೊಳ್ಳಿ.
    – ಅದಾಗ್ಯೂ ಸತ್ತಿದ್ದು ನಿಜವೇ ಆಗಿದ್ದು, ಸುದ್ದಿ ತಿಳಿಯುವುದರಲ್ಲಿ ಇನ್ನೊಬ್ಬರಿಗೆ ತಲುಪಿಸುವುದರಲ್ಲಿ ಒಂದಷ್ಟು ತಡವಾದರೂ ಅಂಥ ತಪ್ಪೇನೂ ಆಗದು. ಬದಲಿಗೆ ಅವರು ಸತ್ತಿದ್ದರೂ ಅಷ್ಟರಮಟ್ಟಿಗೆ ಅವರು ಇನ್ನೊಬ್ಬರ ಪಾಲಿಗೆ ಜೀವಂತ ಇದ್ದಿರುತ್ತಾರೆ.

    ನೊಬೆಲ್ ಪ್ರಶಸ್ತಿ ವಿಜೇತ, ಭಾರತದ ಆರ್ಥಿಕ ತಜ್ಞ ಅಮರ್ತ್ಯ ಸೇನ್ ನಿಧನ ಸುದ್ದಿ ಸುಳ್ಳು, ಸ್ಪಷ್ಟನೆ ನೀಡಿದ ಪುತ್ರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts