More

    ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಸಾವಿನ ವದಂತಿಗೆ ವಿಡಿಯೋ ಮೂಲಕ ತೆರೆಎಳೆದ ದತ್ತುಪುತ್ರ​

    ಬೆಂಗಳೂರು: ಕರ್ನಾಟಕ ಸರ್ಕಾರದ ಪರಿಸರ ರಾಯಭಾರಿಯಾಗಿರುವ ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ ಸಾಲಮರದ ತಿಮ್ಮಕ್ಕ ಅವರ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಊಹಾಪೋಹಗಳಿಗೆ ದತ್ತು ಪುತ್ರ ಉಮೇಶ್​ ಅವರು ವಿಡಿಯೋ ಮೂಲಕ ತೆರೆಎಳೆದಿದ್ದಾರೆ.

    ಅನಾರೋಗ್ಯದಿಂದಾಗಿ ಸಾಲು ಮರದ ತಿಮ್ಮಕ್ಕ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರ ನಡುವೆಯೇ ತಿಮ್ಮಕ್ಕ ಅವರು ನಿಧನರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವದಂತಿಗಳನ್ನು ಹರಿಬಿಡಲಾಗಿದೆ. ಇದನ್ನೇ ನಿಜವೆಂದು ನಂಬಿರುವ ಅನೇಕರು ತಮ್ಮ ವಾಟ್ಸ್​ಆ್ಯಪ್​ ಸ್ಟೇಟಸ್​ಗಳಲ್ಲಿಯೂ ತಿಮ್ಮಕ್ಕ ಅವರಿಗೆ ಶ್ರದ್ಧಾಂಜಲಿ ಫೋಟೋಗಳನ್ನು ಪೋಸ್ಟ್​ ಮಾಡಿಕೊಳ್ಳುತ್ತಿದ್ದಾರೆ.

    ಈ ವಿಚಾರ ತಿಮ್ಮಕ್ಕ ಅವರ ದತ್ತು ಪುತ್ರ ಉಮೇಶ್​ ಅವರ ಗಮನಕ್ಕೆ ಬಂದಿದ್ದು, ತಮ್ಮ ಫೇಸ್​ಬುಕ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಸಾವಿನ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಬೆಡ್​ ಮೇಲೆ ಮಲಗಿರುವ ತಿಮ್ಮಕ್ಕ ಅವರಿಗೆ ಊಟ ಮಾಡಿಸುತ್ತಿರುವ ವಿಡಿಯೋವನ್ನು ಉಮೇಶ್​ ಶೇರ್​ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ನಾವು ನಿರೀಕ್ಷೆ ಮಾಡಿರಲಿಲ್ಲ: ಭಾರತದ ಸತ್ಕಾರವನ್ನು ಹೊಗಳಿದ ಪಾಕ್​ ನಾಯಕ ಬಾಬರ್​ ಅಜಾಮ್​

    ಇದೇ ವಿಡಿಯೋವನ್ನು ಕೃಷಿ ಸಚಿವ ಚಲುವರಾಯಸ್ವಾಮಿ ಅವರು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಬಗ್ಗೆ ಯಾರೂ ಗಮನ ಹರಿಸುವುದು ಬೇಡ. ವೃಕ್ಷ ಮಾತೆ ತಿಮ್ಮಕ್ಕ ಅವರು ಶೀಘ್ರ ಆರೋಗ್ಯವಾಗಿ, ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧವೂ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಇತ್ತೀಚೆಗೆ ಸಾವಿನ ವಿಚಾರದಲ್ಲಿ ವದಂತಿಗಳನ್ನು ಹರಡುವುದು ಸಾಮಾಜಿಕ ಜಾಲತಾಣದಲ್ಲಿ ಒಂದು ಚಾಳಿಯಾಗಿದೆ ಎಂದು ಕಾಮೆಂಟ್​ಗಳ ಮೂಲಕ ಕಿಡಿಕಾರಿದ್ದಾರೆ.

    ಬೆಟ್ಟಿಂಗ್ ಕಟ್ಟಿ 10 ನಿಮಿಷದಲ್ಲಿ ಲೀಟರ್ ಗಟ್ಟಲೆ ಮದ್ಯ ಸೇವಿಸಿ ಪ್ರಾಣ ಬಿಟ್ಟ ಉದ್ಯೋಗಿ

    ಪತ್ನಿಯ ಕ್ರೌರ್ಯತೆ ಆಧಾರದ ಮೇಲೆ ಕೋರ್ಟ್​ನಿಂದ ಕ್ರಿಕೆಟಿಗ ಶಿಖರ್​ ಧವನ್​ಗೆ ಡಿವೋರ್ಸ್​ ಮಂಜೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts